ಶನಿವಾರಸಂತೆ, ಏ. ೫: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು ಭಯಮುಕ್ತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಪೊಲೀಸ್ ಇಲಾಖೆ ಪಥ ಸಂಚಲನ ನಡೆಸಿತು.

ಡಿವೈಎಸ್‌ಪಿ ಗಂಗಾಧರಪ್ಪ ನೇತೃತ್ವದಲ್ಲಿ ಶನಿವಾರಸಂತೆ ವೃತ್ತನಿರೀಕ್ಷಕ ಎಸ್.ನಾಗೇಶ್, ಪಿಎಸ್‌ಐಗಳಾದ ಎಚ್.ಎಂ. ಗೋವಿಂದ್ ರಾಜ್, ಕಾಶಿನಾಥ್ ಬಗಲಿ ಶಸ್ತçಸಜ್ಜಿತ ಸಿಐಎಸ್‌ಎಫ್ ಸಿಬ್ಬಂದಿಗಳೊAದಿಗೆ ಪಂಚಾಯಿತಿ ವ್ಯಾಪ್ತಿಯ ತ್ಯಾಗರಾಜ ಕಾಲೋನಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿ ಸಾಗಿ ಗುಡುಗಳಲೆ ವೃತ್ತದವರೆಗೆ ಪಥ ಸಂಚಲನ ನಡೆಸಿದರು. ಭಯಮುಕ್ತ ಚುನಾವಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.