ಚೆಟ್ಟಳ್ಳಿ, ಏ. ೧: ಅರೆಬಿಕಾ ಕಾಫಿಯನ್ನು ಬಾಧಿಸುವ ಬಿಳಿ ಕಾಂಡಕೊರಕ ಕೀಟ ನಿಯಂತ್ರಣಕ್ಕೆ ಇದು ಸೂಕ್ತ ಸಮಯವಾಗಿದ್ದು ವ್ಯವಸ್ಥಿತ ರೀತಿಯ ಹತೋಟಿ ಕ್ರಮವನ್ನು ಅನುಸರಿಸಬೇಕೆಂದು ಕಾಫಿ ಮಂಡಳಿಯ ಚೆಟ್ಟಳ್ಳಿ ಕಾಫಿ ಉಪ ಸಂಶೋಧನಾ ಕೇಂದ್ರ ಕಾಫಿ ಬೆಳೆಗಾರರಿಗೆ ಮಾಹಿತಿ ನೀಡಿದೆ.
ಸೆರಾಂಬಿಸಿಡ್ ಬೋಟರ್ ಕುಟುಂಬಕ್ಕೆ ಸೇರುವ ಈ ಬಿಳಿ ಕಾಂಡಕೊರಕ ಕೀಟ ಬರೀ ಕಾಫಿಯ ಇಳುವರಿಯನ್ನು ಕಡಿಮೆಗೊಳಿಸು ವುದಲ್ಲದೆ ಹಲವು ವರ್ಷಗಳಿಂದ ಬೆಳೆದುನಿಂತ ಕಾಫಿ ಗಿಡಗಳನ್ನೇ ನಾಶಪಡಿಸುತ್ತದೆ. ಬಿಳಿ ಕಾಂಡಕೊರಕ ಕೀಟಗಳು ಹೊರಬರುವ ಎರಡು ಪ್ರಮುಖ ಕಾಲವೆಂದರೆ ಏಪ್ರಿಲ್-ಮೇ ತಿಂಗಳು ಹಾಗೂ ನಂತರದ ಅಕ್ಟೋಬರ್-ಡಿಸೆಂಬರ್ ತಿಂಗಳಾಗಿದ್ದು ಹಲವು ಕೀಟಗಳು ಪ್ರೌಢಾವಸ್ತೆಗೆ ಬಂದು ಹಾರುವ ಮೊದಲೇ ಹತೋಟಿ ಕ್ರಮಗಳನ್ನು ಅನುಸರಿಸಬೇಕಿದೆ.
ಕೀಟ ವಿಜ್ಞಾನ ವಿಭಾಗದಲ್ಲಿ ಮಾಹಿತಿ
ಚೆಟ್ಟಳ್ಳಿ ಕಾಫಿ ಉಪಸಂಶೋಧನಾ ಕೇಂದ್ರದ ಕೀಟ ವಿಜ್ಞಾನ ವಿಭಾಗದಲ್ಲಿ ಕಾಫಿ ಗಿಡಗಳನ್ನು ಬಾಧಿಸುವÀ ವಿವಿಧ ಕೀಟಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು ಹಲವು ನಿಯಂತ್ರಣ ಕ್ರಮಗಳ ಬಗ್ಗೆ ಬೆಳೆಗಾರರಿಗೆ ಮಾಹಿತಿ ನೀಡಲಾಗುತ್ತಿದೆ.
ಬಿಳಿ ಕಾಂಡಕೊರಕವು ಭಾರತದಲ್ಲಿ ಅರೇಬಿಕಾ ಗಿಡಗಳನ್ನು ಪೀಡಿಸುವ ಅತೀ ಮುಖ್ಯ ಕೀಟವಾಗಿದೆ. ದುಂಬಿಗಳ ಜಾತಿಗೆ ಸೇರಿದ ಕೀಟವಾಗಿದ್ದು ವೈಜ್ಞಾನಿಕವಾಗಿ ಕೀಟಗಳನ್ನು ಕ್ಸೆö್ಯಲೋಟ್ರಿಕಸ್ಕ್ವಾಡ್ರಿಪಸ್ ಎಂದು ಕರೆಯಲಾಗುತ್ತಿದೆ. ಕನ್ನಡದಲ್ಲಿ ಬರ್ಲುಹುಳ, ಬಿಳಿ ಕಾಂಡಕೊರನೆAದು ಕರೆದರೆ ಸ್ಟೆೆ್ಟಂಬೋರರ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ.
ಬಲಿತ ಕೀಟವು ತೆಳುವಾದ ಜೀರುಂಡೆಯAತಿದ್ದು ಮುಂಭಾಗದಲ್ಲಿ ಉದ್ದನೆಯ ಒಂದು ಜೊತೆ ಕುಡಿ ಮೀಸೆ ಹೊಂದಿರುತ್ತದೆ. ಮುಂಭಾಗ ರೆಕ್ಕೆಗಳು ಕಪ್ಪು
(ಮೊದಲ ಪುಟದಿಂದ) ಬಣ್ಣದ್ದಾಗಿದ್ದು ಅದರಲ್ಲಿ ಬಿಳಿಪಟ್ಟೆಗಳಿರುತ್ತದೆ. ಸಾಮಾನ್ಯವಾಗಿ ಗಂಡು ಹುಳುಗಳು ಹೆಣ್ಣು ಹುಳುಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. ಪ್ರಕರವಾದ ಬೆಳಕು ಮತ್ತು ಉಷ್ಣತೆಯ ಹವಾಮಾನವಿದ್ದಾಗ ಕೀಟಗಳು ಚುರುಕಾಗುತ್ತದೆ.
ಹೆಣ್ಣು ಹುಳುಗಳು ಗಿಡದ ಕಾಂಡ ಮತ್ತು ದಪ್ಪ ರೆಂಬೆಗಳ ತೊಗಟೆಯ ಸಂದುಗೊAದುಗಳಲ್ಲಿ ಮೊಟ್ಟೆಯಿಡುತ್ತವೆ. ಮೊಟ್ಟೆಯೊಡೆದ ಮರಿ ಹುಳುಗಳು ೨ ತಿಂಗಳ ಕಾಲ ತೊಗಟೆಯಲ್ಲಿನ ತಿರುಳನ್ನು ತಿಂದು ನಂತರ ಗಟ್ಟಿಭಾಗವನ್ನು ಕೊರೆದು ಒಳಪ್ರವೇಶಿಸಿ ಗಿಡದೊಳಗೆ ಸುರಂಗವನ್ನುAಟುಮಾಡಿ ಕೆಲವು ಸಂದರ್ಭಗಳಲ್ಲಿ ಸುರಂಗಗಳು ಬೇರಿನವರೆಗೂ ವ್ಯಾಪಿಸುತ್ತದೆ.
ಕೀಟ ಪೀಡಿತ ಗಿಡದ ಕಾಂಡಗಳಲ್ಲಿ ಉಂಗುರಾಕಾರದ ಸುತ್ತುಗಳು ಕಂಡುಬರುತ್ತÀದೆ. ಎಲೆಗಳು ಮಂಕಾಗಿ ಫಸಲು ಕಡಿಮೆಯಾಗಿ ಜೊಳ್ಳು ಜಾಸ್ತಿಯಾಗುತ್ತದೆ.
ಸಮಗ್ರ ನಿಯಂತ್ರಣ ಕ್ರಮಗಳು
ಕಾಂಡಕೊರಕ ಕೀಟ ನಿಯಂತ್ರಣಕ್ಕೆ ಮುಖ್ಯವಾಗಿ ನೆರಳು ಅವಶ್ಯಕವಾಗಿದೆ. ಮಿಶ್ರ ಜಾತಿಯ ನೆರಳಿನ ಮರಗಳು ಮೇಲ್ಭಾಗದಲ್ಲಿ ಶಾಶ್ವತ ನೆರಳಾದರೆ ಕೀಟಗಳು ಹಾರಾಟದ ಕಾಲದಲ್ಲಿ ಕಾಫಿ ಗಿಡಗಳಿಗೆ ಪ್ರಕಾಶಮಾನವಾದ ಬೆಳಕು ಬೀಳದಂತೆ ನಿರ್ವಹಿಸುವುದು. ಕಾಫಿ ಗಿಡಗಳಲ್ಲಿ ಉಂಗುರಾಕಾರದ ಸುತ್ತುಗುರುತಿರುವ ಗಿಡಗಳನ್ನು ಗುರುತಿಸಿ ರೋಗ ಲಕ್ಷಣಗಳಿಂದ ಸೊರಗಿರುವ ಗಿಡಗಳನ್ನು ಕಂಡು ಹಿಡಿದು ತಕ್ಷಣವೇ ಬೇರುಸಹಿತ ಕಿತ್ತು ಹಾಕಿ ಸುಟ್ಟು ಹಾಕಿ ನಾಶಪಡಿಸುವುದು.
ಕಾಂಡ ಮತ್ತು ದಪ್ಪ ರೆಂಬೆಗಳ ತೊಗಟೆಯ ಸಂದುಗೊAದುಗಳಲ್ಲಿ ಮೊಟ್ಟೆ ಇಡುವುದನ್ನು ತಪ್ಪಿಸಲು ಗಿಡಗಳ ಕಾಂಡ ಮತ್ತು ದಪ್ಪ ರೆಂಬೆಗಳ ತೊಗಟೆಯನ್ನು ಕೈಗವಚ ಹಾಗೂ ತೆಂಗಿನಕಾಯಿ ಸಿಪ್ಪೆ, ನಾರಿ ಸಹಾಯದಿಂದ ಉಜ್ಜಿ ತೆಗೆಯಬೇಕು. ಕಾಂಡವನ್ನು ನಾನ್ ಓವನ್ ಫ್ಯಾಬ್ರಿಕ್ ಪಟ್ಟಿಯಿಂದ ಸುತ್ತುವುದು. ಈ ಕ್ರಮಗಳಿಂದ ಪ್ರೌಢಕೀಟಗಳು ಮೊಟ್ಟೆ ಇಡುವ ಅವಕಾಶ ತಪ್ಪುತ್ತದೆ. ಕೀಟಗಳು ಹಾರುವ ಕಾಲದಲ್ಲಿ ಕಾಫಿ ತೋಟಗಳಲ್ಲಿ ನೂತನ ವಿಧಾನವಾದ ಮೋಹಕಲಿಂಕಾರ್ಷಕ (ಫೆರಮೋಹನ್ಟ್ರಾಫ್ಸ್) ಬಲೆಗಳನ್ನು ಬಳಸುವುದರ ಮೂಲಕ ನಿಯಂತ್ರಿಸಬಹುದಾಗಿದೆ.
ಕೀಟಗಳು ಹಾರುವ ಕಾಲಕ್ಕೆ ಮೊದಲೇ ೧೦% ಸುಣ್ಣವನ್ನು (೨೦೦ ಲೀಟರ್ ನೀರಿನಲ್ಲಿ ೨೦ ಕಿ.ಗ್ರಾಂ ಸಿಂಪಡಣಾ ಸುಣ್ಣವನ್ನು ೨೦೦ ಮಿಲಿ. ಫೆರಿಕಾಲ್ ಡಿಡಿ ಎಲ್ ಬೆರೆಸಿ) ಪ್ರಧಾನಕಾಂಡ ಹಾಗೂ ದಪ್ಪ ರೆಂಬೆಗಳ ಮೇಲೆ ಏಪ್ರಿಲ್ ತಿಂಗಳಲ್ಲಿ ಹಾಗೂ ನವೆಂಬರ್ ತಿಂಗಳಲ್ಲಿ ಸಿಂಪಡಿಸುವುದರಿAದ ಬೋರರ್ ಹಾವಳಿಗೆ ಉತ್ತಮ ರಕ್ಷಣೆ ಕೊಡುವಲ್ಲಿ ಸಹಕಾರಿಯಾಗಿದೆ.
ಮುಂದಿನ ಚಳಿಗಾಲದಲ್ಲಿ ಈ ಕೀಟ ಹಾರುವ ಕಾಲವಾದರಿಂದ ಫೆಂಡಾಲ್ ೫೦ ಈಟಿಯನ್ನು ೨೦೦ ಲೀಟರ್ ನೀರಿನಲ್ಲಿ ೪೦೦ ಮಿಲೀ. ನಂತೆ ಕೀಟ ಹಾರುವ ಕಾಲದೊಳಗೆ ಸಿಂಪಡಿಸಬೇಕು.
ಕಾಫಿ ಬೆಳೆಯಲ್ಲಿ ರೋಬಸ್ಟಾಕಿಂತ ಅರೆಬಿಕಾಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇದ್ದರೂ ನಿರ್ವಹಣೆಯ ಖರ್ಚು ಹೆಚ್ಚಾಗುವುದು, ಹವಾಮಾನ ವೈಪರಿತ್ಯದ ಪರಿಣಾಮ ಕಾಂಡಕೊರಕ, ಕೀಟ ಬಾಧೆಗಳು, ಅಕಾಲಿಕವಾಗಿ ಹೂವಾಗಿ ಹಣ್ಣಾಗುವ ವ್ಯತಿರಿಕ್ತ ಪರಿಣಾಮ ಅರೆಬಿಕಾ ಬೆಳೆ ನಿರ್ವಹಣೆಗೆ ತೊಂದರೆಯಾಗುವುದರಿAದ ಕಾಫಿ ಬೆಳೆಗಾರರು ಅರೆಬಿಕಾ ಬೆಳೆಯನ್ನು ಬೆಳೆಯಲು ಹರಸಾಹಸಪಡುವಂತಾಗಿದೆ.
-ಪುತ್ತರಿರ ಕರುಣ್ಕಾಳಯ್ಯ