ಶ್ರೀಮಂಗಲ, ಏ. ೧: ಪೊನ್ನಂಪೇಟೆ ತಾಲೂಕು ಬೆಳ್ಳೂರು-ಹರಿಹರ ಗ್ರಾಮದ ಬಾಚೀರ ಕುಟುಂಬದಿAದ ಹರಿಹರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ೯ ದಿನಗಳ ಕಾಲ ನಡೆಯುವ ಕೊಡವ ಕೌಟುಂಬಿಕ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ದೊರೆಯಿತು.

ಕ್ರಿಕೆಟ್ ಪಂದ್ಯಾವಳಿಗೆ ಹಿರಿಯರಾದ ಮುಕ್ಕಾಟೀರ ಶಂಭು ಕಾರ್ಯಪ್ಪ ವೇದಿಕೆಯಲ್ಲಿ ದೀಪ ಬೆಳಗಿಸಿ, ನಂತರ ಮೈದಾನದಲ್ಲಿ ಕ್ರೀಡಾ ತಾಂತ್ರಿಕ ತಜ್ಞ ತೀತಿರ ಸೋಮಣ್ಣ ಅವರಿಗೆ ಬೌಲಿಂಗ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.

ಈ ಸಂದರ್ಭ ಅತಿಥಿಗಳಾದ ಟಿ. ಶೆಟ್ಟಿಗೇರಿ ಗ್ರಾ.ಪಂ. ಸದಸ್ಯ ಮನ್ನೇರ ಅಜಿತ್, ಮರಡ ವನಿತಾ ದೇವಯ್ಯ, ಪಂದ್ಯಾವಳಿಯ ಅಧ್ಯಕ್ಷ ಬಾಚೀರ ಎನ್. ಕಾರ್ಯಪ್ಪ, ಬಾಚೀರ ಕುಟುಂಬದ ಅಧ್ಯಕ್ಷ ಸುಜಾ ಉತ್ತಯ್ಯ, ಸಂಚಾಲಕ ರಾಜ ಉತ್ತಪ್ಪ ಹಾಜರಿದ್ದರು.

ಇದಕ್ಕೂ ಮೊದಲು ಹರಿಹರ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಾಚೀರ ಕುಟುಂಬಸ್ಥರು, ಕುಟುಂಬದ ಸಂಬAಧಿಕರು, ಗ್ರಾಮಸ್ಥರು ಮುಖ್ಯ ರಸ್ತೆಯಲ್ಲಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಮಹಿಳೆಯರು, ಮಕ್ಕಳು, ಪುರುಷರು ಸಾಂಸ್ಕೃತಿಕ ಮೆರವಣಿಗೆ ನಡೆಸಿದರು. ಬಾಚೀರ ಅದ್ವಿಕಾ ಕುಶಾಲಪ್ಪ ಸ್ವಾಗತ ನೃತ್ಯ ಗಮನ ಸೆಳೆಯಿತು.

ಪಂದ್ಯಾವಳಿಯ ಅಧ್ಯಕ್ಷ ಬಾಚೀರ ಕಾರ್ಯಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹರಿಹರ ಮೈದಾನದಲ್ಲಿ ಪ್ರಪ್ರಥಮ ಬಾರಿಗೆ ಮನ್ನೇರ ಕುಟುಂಬ ಕಳೆದ ವರ್ಷ ಪಂದ್ಯಾವಳಿ ಆಯೋಜಿಸಿತ್ತು. ಅವರ ಪ್ರೇರಣೆಯಿಂದ ಬಾಚೀರ ಕುಟುಂಬ ಎರಡನೇ ವರ್ಷದ ಪಂದ್ಯಾವಳಿ ಆಯೋಜಿಸುತ್ತಿದೆ. ಇದರ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಉದ್ಘಾಟನಾ ಪಂದ್ಯ: ಮಹಿಳಾ ತಂಡಗಳ ನಡುವೆ ಉದ್ಘಾಟನಾ ಪಂದ್ಯ ಗಮನ ಸೆಳೆಯಿತು. ಟಿ.ಶೆಟ್ಟಿಗೇರಿಯ ಸಂಭ್ರಮ ಮಹಿಳಾ ಸಾಂಸ್ಕೃತಿಕ ಸಂಘ ಹಾಗೂ ಶ್ರೀಮಂಗಲ ಕೊಡವ ಸಮಾಜದ ಪೊಮ್ಮಕ್ಕಡ ಕೂಟ ನಡುವೆ ಪಂದ್ಯದಲ್ಲಿ

(ಮೊದಲ ಪುಟದಿಂದ) ಮೊದಲು ಬ್ಯಾಟ್ ಮಾಡಿದ ಶ್ರೀಮಂಗಲ ಕೊಡವ ಸಮಾಜ ಕೂಟ ತಂಡ ನಿಗದಿತ ೬ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೨೭ ರನ್ ಗಳಿಸಿತು. ನಂತರ ಬ್ಯಾಟ್ ಮಾಡಿದ ಸಂಭ್ರಮ ಮಹಿಳಾ ತಂಡ ೩ ಓವರ್ ನಲ್ಲಿ ೧ ವಿಕೆಟ್ ಕಳೆದುಕೊಂಡು ೩೧ ರನ್ ಗಳಿಸಿ ೯ ವಿಕೆಟ್ ಅಂತರದ ಗೆಲುವು ಸಾಧಿಸಿತು.

ಇಂದಿನ ಪಂದ್ಯಾವಳಿಯಲ್ಲಿ ಮಲ್ಲಂಡ ಮತ್ತು ಕಾಕಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಕಮಾಡ ತಂಡ ಮೊದಲು ಬ್ಯಾಟ್ ಮಾಡಿ ೬ ಓವರ್‌ನಲ್ಲಿ ೩೨ ರನ್ ಗಳಿಸಿತು.

ನಂತರ ಬ್ಯಾಟ್ ಮಾಡಿದ ಮಲ್ಲಂಡ ತಂಡ ೪ ಓವರ್‌ಗಳಲ್ಲಿ ೩೩ ರನ್ ಗಳಿಸಿ ಗೆಲುವು ಸಾಧಿಸಿತು. ಕಾಕಮಾಡ ಶರತ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.

ಇನ್ನೊಂದು ಪಂದ್ಯದಲ್ಲಿ ಬೊಟ್ಟಂಗಡ ಮತ್ತು ಕರ್ತಮಾಡ ತಂಡದ ನಡುವೆ ನಡೆಯಿತು. ಮೊದಲು ಬ್ಯಾಟ್ ಮಾಡಿದ ಕರ್ತಮಾಡ ೩೪ ರನ್ ಗಳಿಸಿತು. ಬೊಟ್ಟಂಗಡ ನಂತರ ಬ್ಯಾಟ್ ಮಾಡಿ ೪ ಓವರ್‌ಗಳಲ್ಲಿ ೩೯ ರನ್ ಗಳಿಸಿ ೮ ವಿಕೆಟ್ ಅಂತರದ ಗೆಲುವು ಸಾಧಿಸಿತು. ಕರ್ತಮಾಡ ರೈನಾ ಪಂದ್ಯ ಪುರುಷ ಪ್ರಶಸ್ತಿ ಪಡೆದರು. ಒಟ್ಟು ೬೪ ತಂಡಗಳು ಪಂದ್ಯಾಟದಲ್ಲಿ ಸೆಣಸಾಡಲಿವೆ.