ಮಡಿಕೇರಿ, ಏ. ೧: ಕೆಲವು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣ ಅಷೆೆÆ್ಟಂದು ಪರಿಣಾಮಕಾರಿಯಾಗಿರಲಿಲ್ಲ. ಆದರೆ ಇದೀಗ ಜಾಲತಾಣವು ವೇಗವಾಗಿ ಬೆಳೆದು ಹೆಚ್ಚು ಪರಿಣಾಮಕಾರಿಯಾಗಿ ರುವುದರಿಂದ ಈ ಮಾಧ್ಯಮದ ಮೂಲಕ ನಡೆಯುವ ಚುನಾವಣಾ ಪ್ರಚಾರದ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಮೀಡಿಯಾ ಸರ್ಟಿಫಿಕೇಶನ್ ಸೆಲ್ (ಒಅಅ) ಮೂಲಕ ತೀವ್ರ ನಿಗಾ ವಹಿಸಲಾಗಿದ್ದು, ಜಾಲತಾಣಗಳ ಮೂಲಕ ಪ್ರಚಾರ ಮಾಡಲು (ಒಅಅ) ಪೂರ್ವಾನುಮತಿ ಪಡೆದು ಕೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ತಪ್ಪಿತಸ್ಥರಿಗೆ ನೋಟೀಸ್ ನೀಡಲಾಗುವುದು. ತಪ್ಪು ಪುನರಾವರ್ತನೆಗೊಂಡರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಅವರು ಮಾಹಿತಿ ನೀಡಿದರು.
ಇಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣೆಗೆ ಸಂಬAಧಿಸಿದAತೆ ಜಾಹೀರಾತುಗಳ ಬಗ್ಗೆ ಪತ್ರಕರ್ತರೊಂದಿಗೆ ನಡೆದ ಸಂವಾದದಲ್ಲಿ ಅವರು ಮಾಹಿತಿ ಇತ್ತರು. ಜಾಲತಾಣಗಳು ಅಲ್ಲದೆ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮಗಳಿಗೂ ಈ ನಿಯಮ ಅನ್ವಯವಾಗುತ್ತದೆ ಎಂದರು.
ಘೋಷಿತ ಅಭ್ಯರ್ಥಿಗಳು, ಸಂಭಾವ್ಯ ಅಭ್ಯರ್ಥಿಗಳು ಹಾಗೂ ಹಾಲಿ ಶಾಸಕರುಗಳ ಚುನಾವಣಾ ಖರ್ಚು ವೆಚ್ಚದ ಮೇಲೆ ಈಗಿನಿಂದಲೇ ನಿಗಾ ವಹಿಸಲಾಗುತ್ತಿದೆ ಎಂಬುದಾಗಿಯೂ ಮಾಹಿತಿ ನೀಡಿದರು.
‘ಪೇಡ್ ನ್ಯೂಸ್’ಗೆ ಅವಕಾಶವಿಲ್ಲ.
ಚುನಾವಣಾ ಅಭ್ಯರ್ಥಿಗಳ, ಸಂಭಾವ್ಯ ಅಭ್ಯರ್ಥಿಗಳ ಸಂದರ್ಶನವನ್ನು ಸುದ್ದಿ ರೂಪದಲ್ಲಿ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳು ಯಾವುದೇ ಅನುಮತಿ ಇಲ್ಲದೆ ನಡೆಸಬಹುದಾಗಿದೆ. ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳು ಸ್ವ ಇಚ್ಛೆಯಿಂದ ಈ ಸಂದರ್ಶನಗಳನ್ನು ಮಾಡಬಹುದು ಹೊರತು ಸಂದರ್ಶನ ನೀಡುವ ವ್ಯಕ್ತಿಗಳಿಂದ ಹಣ ಪಡೆದು ಅವರ ಪಕ್ಷಕ್ಕೆ ಮಾತ್ರ ಹೆಚ್ಚಿನ ಮಹತ್ವ ನೀಡುವ ‘ಪೇಡ್ ನ್ಯೂಸ್’ ರೀತಿ ಸಂದರ್ಶನ ಮೂಡಿಬರಬಾರದು ಎಂಬುದನ್ನು ಜಿಲ್ಲಾಧಿಕಾರಿ ತಿಳಿಸಿದರು.
ಅನ್ನದಾನ ಮಾಡಿದರೆ ಕಾನೂನು ಕ್ರಮ
ದೇವಾಲಯಗಳ ವಾರ್ಷಿಕ ಉತ್ಸವ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಯಾವುದೇ ರೀತಿಯ ಅಡ್ಡಿ ಇರುವುದಿಲ್ಲ. ಆದರೆ ಈ ಸಂದರ್ಭ ಕೇವಲ ಪ್ರಸಾದ ವಿನಿಯೋಗಕ್ಕೆ ಅವಕಾಶವಿರುತ್ತದೆ ಹೊರತು ಅನ್ನದಾನಕ್ಕೆ ಅವಕಾಶ ಇರುವುದಿಲ್ಲ. ಈಗಾಗಲೇ ಈ ನಿಯಮವನ್ನು
(ಮೊದಲ ಪುಟದಿಂದ) ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಮುಂದೆಯೂ ಇದು ಪುನರಾವರ್ತನೆ ಆಗದಂತೆ ಆಯಾ ದೇವಾಲಯಗಳ ಆಡಳಿತ ಮಂಡಳಿಗಳು ಗಮನಹರಿಸುವಂತೆ ಸೂಚಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜ್ ಅವರು ಮಾತನಾಡಿ, ಚೆಕ್ಪೋಸ್ಟ್ಗಳಲ್ಲಿ ಕಟ್ಟುನಿಟ್ಟಾಗಿ ವಾಹನ ತಪಾಸಣೆ ಮಾಡಲಾಗುತ್ತಿದೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ, ಜಿಲ್ಲಾ ಪಂಚಾಯಿತಿ ಸಿಇಓ ಡಾ. ಆಕಾಶ್ ಇದ್ದರು.