ಮುಳ್ಳೂರು, ಏ. ೧: ಸಮೀಪದ ಆಲೂರು-ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ೫ನೇ ವರ್ಷದ ವಾರ್ಷಿಕ ಮಹಾಸಭೆ ಸಂಗಯನಪುರ ಗ್ರಾಮದ ಅರೆಭಾಷೆ ಗೌಡ ಸಮಾಜದ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮಹಾಸಭೆಯನ್ನು ಅರೆಭಾಷೆ ಗೌಡ ಸಮಾಜದ ಹಿರಿಯ ಮುಖಂಡ ಅತ್ತೆಡಿ ಪೂವಯ್ಯ ಉದ್ಘಾಟಿಸಿ ಮಾತನಾಡಿ, ಅರೆಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವ ಉದ್ದೇಶ ದಿಂದ ಸಮಾಜವನ್ನು ಸ್ಥಾಪಿಸಲಾಗಿದ್ದು ಸಮುದಾಯದ ಬಾಂಧವರು ಸಹಕರಿಸಿ ಪ್ರೋತ್ಸಾಹಿಸಿದರೆ ಮಾತ್ರ ಸಮಾಜ ಬೆಳವಣಿಗೆ ಸಾಧಿಸಲು ಸಾಧ್ಯವಾಗುತ್ತದೆ ಎಂದರು. ಸಮಾಜದ ಹಿರಿಯ ಎಡಕೇರಿ ಜಯರಾಮ್ ಮಾತನಾಡಿ, ಅರೆಭಾಷೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಸಮುದಾಯದ ಇಂದಿನ ಯುವಕರು, ಯುವತಿಯರು ಅನುಸರಿ ಸಬೇಕಿದೆ. ಇದರಿಂದ ಅರೆಭಾಷೆ ಗೌಡ ಸಮುದಾಯದ ಬಾಂಧವರು ಮುಂದಿನ ಪೀಳಿಗೆಯವರಿಗೂ ಮಾದರಿಯಾಗಲು ಸಾಧ್ಯವಾಗುತ್ತದೆ ಎಂದರು.

ನಿವೃತ್ತ ಪ್ರಾಂಶುಪಾಲ ನಂಗಾರು ಲಿಂಗರಾಜು ಮಾತನಾಡಿ, ಅರೆಭಾಷೆ ಗೌಡ ಸಮೂದಾಯದ ಬಾಂಧವರು ಸಮಾಜದಲ್ಲಿ ಇತರೆ ಸಮುದಾಯ ದವರಿಗೆ ಮಾದರಿಯಾಗುವ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು, ಸಮಾಜದ ಬಾಂಧವರ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಲು ಸ್ಕಾಲರ್‌ಶಿಪ್, ಹಣಕಾಸಿನ ನೆರವು ನೀಡುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸುವಂತೆ ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಮಾತನಾಡಿ, ೫ ವರ್ಷದ ಹಿಂದೆ ಅರೆಭಾಷೆ ಗೌಡ ಸಮಾಜದ ಬಾಂಧವರ ಬಾಂಧವ್ಯ, ಭಾಷೆ, ಸಂಸ್ಕೃತಿಯನ್ನು ಕಟ್ಟಿ ಬೆಳೆಸುವ ಉದ್ದೇಶದಿಂದ ಸಮಾಜವನ್ನು ಸ್ಥಾಪಿಸಲಾಗಿದ್ದು, ಸುತ್ತಮುತ್ತಲಿನ ಸಮಾಜದ ಬಾಂಧವರು ಸಮಾಜದ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿರುವ ಹಿನ್ನೆಲೆಯಲ್ಲಿ ಈಗ ಸಮಾಜದಲ್ಲಿ ೭೨೪ ಮಂದಿ ಸದಸ್ಯರಿದ್ದಾರೆ. ಸಂಗಯನಪುರ ಗ್ರಾಮದಲ್ಲಿ ಅರೆಭಾಷೆ ಗೌಡ ಸಮಾಜ ನಿರ್ಮಾಣಕ್ಕಾಗಿ ಗ್ರಾಮದ ಅರೆಭಾಷೆ ಗೌಡ ಸಮಾಜದ ಬಾಂಧವರು ೨ ಎಕರೆ ಜಾಗವನ್ನು ನೀಡಿರುವುದು ಶ್ಲಾಘನಿಯ. ಜಾಗಕ್ಕೆ ಸಂಬAಧಪಟ್ಟ ಕಡತ ದಾಖಲೆ ಸರಕಾರದ ಮಟ್ಟದಲ್ಲಿ ಪ್ರಗತಿಯಲ್ಲಿದೆ ಎಂದರು. ಮಹಾಸಭೆಯಲ್ಲಿ ಸಂಘದ ಬೆಳವಣಿಗೆ, ಆರ್ಥಿಕ ವಿಚಾರ, ಮುಂತಾದ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಸಂಘದ ಕಾರ್ಯದರ್ಶಿ ಕುಯ್ಯಮುಡಿ ಜಯಕುಮಾರ್ ವಾರ್ಷಿಕ ವರದಿ ಮಂಡಿಸಿದರು. ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಭಟ್ಯನ ಈರಪ್ಪ, ಖಜಾಂಚಿ ಅಜಂಗಲ ರಾಮಣ್ಣ, ಸಂಘದ ಸಹ ಕಾರ್ಯದರ್ಶಿ ಪರ್ಲಕೋಟಿ ಶೈಲ ಸತೀಶ್ ಪ್ರಮುಖರಾದ ಪಟ್ಟಡ ಲೀಲಾ ಕುಮಾರ್, ಆಡಳಿತ ಮಂಡಳಿ ನಿರ್ದೇಶಕರು ಹಾಜರಿದ್ದರು.