ಮಡಿಕೇರಿ, ಮಾ. ೩೦: ನಗರದ ಪೇಟೆ ರಾಮಮಂದಿರ, ಕೋದಂಡ ರಾಮ, ದೇಚೂರು ಶ್ರೀರಾಮಮಂದಿರ, ಆಂಜನೇಯ ದೇವಾಲಯಗಳು ಸೇರಿದಂತೆ ಇನ್ನಿತರ ದೇವಾಲಯಗಳಲ್ಲಿಯೂ ವಿಶೇಷ ಧಾರ್ಮಿಕ ಕೈಂಕರ್ಯಗಳು ನಡೆದು ತೀರ್ಥ ಪ್ರಸಾದ ವಿನಿಯೋಗವಾಯಿತು.

ಮಡಿಕೇರಿ ಶ್ರೀ ಕೋದಂಡರಾಮ ದೇವಾಲಯದಲ್ಲಿ ರಾಮನವಮಿ ಪ್ರಯುಕ್ತ ಪೂಜೆ ನಡೆಯಿತು. ದೇವಾಲಯದ ಅರ್ಚಕ ಚಂದ್ರಕಾAತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿತು. ದೇವಾಲಯ ಟ್ರಸ್ಟ್ ಸದಸ್ಯರು, ರಾಮ ಸೇವಾ ಸಮಿತಿ ಸದಸ್ಯರು, ದೇವಾಲಯ ಪ್ರತಿಷ್ಠಾಪನ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಇದ್ದರು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.

ಮಡಿಕೇರಿ ಆಂಜನೇಯ ದೇವಾಲಯದಲ್ಲಿ ರಾಮೋತ್ಸವ ಸಮಿತಿ ವತಿಯಿಂದ ವಿವಿಧ ಕಾರ್ಯಕ್ರಮ ನಡೆಯಿತು. ಶಿವಶಕ್ತಿ ವೃಂದದಿAದ ವಿಷ್ಣು ಸಹಸ್ರನಾಮ, ಭಗವದ್ಗೀತ ಪಠಣ, ಸಹಸ್ರನಾಮ, ರಾಮರಕ್ಷಾಸ್ತೋತ್ರ, ಭಜನ್ ನಡೆಯಿತು. ದೇವಾಲಯದಲ್ಲಿ ಮಹಾಮಂಗಳಾರತಿ ಬಳಿಕ ಪಾನಕ, ಕೋಸಂಬರಿ, ತುಪ್ಪ ಬಾಳೆಹಣ್ಣು ಭಕ್ತಾದಿಗಳಿಗೆ ವಿತರಿಸಲಾಯಿತು. ದೇವಾಂಗ ಸಂಘದ ವತಿಯಿಂದ

ಕೂಡಿಗೆ: ಕುಶಾಲನಗರ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಸಂಘದ ವತಿಯಿಂದ ರಾಮನವಮಿ ಅಂಗವಾಗಿ ಕುಶಾಲನಗರ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ದೇವಾಲಯದ ಪ್ರಧಾನ ಅರ್ಚಕ ಪ್ರಸನ್ನ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.

ಈ ಸಂದರ್ಭದಲ್ಲಿ ದೇವಾಂಗ ಸಂಘದ ಅಧ್ಯಕ್ಷ ಡಿ.ಎಸ್. ರಾಜೇಶ್, ಕಾರ್ಯದರ್ಶಿ ಕೃಷ್ಣಕುಮಾರ್, ಮಹಿಳಾ ಸಂಘದ ಅಧ್ಯಕ್ಷೆ ಪದ್ಮ ಮಹೇಶ್, ಕಾರ್ಯದರ್ಶಿ ಶೋಭ, ನಂದಿನಿ, ಖಜಾಂಚಿ ರೂಪ, ಉಪಾಧ್ಯಕ್ಷೆ ಶುಭ ರವಿಕುಮಾರ್, ಸಂಘದ ಪ್ರಮುಖರಾದ ಟಿ.ವಿ. ಚಂದ್ರು, ಯತಿರಾಜ್, ಡಿ.ಪಿ. ಮಧು, ಡಿ.ಪಿ. ಗಣೇಶ್ ಸೇರಿದಂತೆ ಸಮಿತಿಯ ಸದಸ್ಯರು, ಸಮುದಾಯದ ಪ್ರಮುಖರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಆಗಮಿಸಿದ ಭಕ್ತರಿಗೆ ಬೆಲ್ಲದ ಪಾನಕ ಮತ್ತು ಕೋಸಂಬರಿಯನ್ನು ಪ್ರಸಾದವಾಗಿ ವಿತರಣೆ ಮಾಡಲಾಯಿತು.

ಶನಿವಾರಸಂತೆ: ಸ್ಥಳೀಯ ಶ್ರೀರಾಮ ಮಂದಿರದಲ್ಲಿ ರಾಮ ನವಮಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.ಸುಂಟಿಕೊಪ್ಪ: ಇಲ್ಲಿನ ಮಾದಾಪುರ ರಸ್ತೆಯ ಶ್ರೀರಾಮ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀ ಗೌರಿಗಣೇಶೋತ್ಸವ ಸಮಿತಿ ವತಿಯಿಂದ ಶ್ರೀರಾಮ ಮಂದಿರದಲ್ಲಿ ರಾಮನವಮಿ ಆಚರಿಸಲಾಯಿತು. ಬೆಳಿಗ್ಗೆ ಶ್ರೀ ರಾಮನಿಗೆ ಪಂಚಾಮೃತ ಅಭಿಶೇಕ, ರಾಮ ದಾರಕ ಹೋಮ, ಮಹಾಪೂಜೆ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಂತರ ನೆರಿದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಪಾನಕ ವಿತರಿಸಲಾಯಿತು. ಪೂಜಾ ಕೈಂಕರ್ಯವನ್ನು ದರ್ಶನ್ ಬಾರಿತ್ತಾಯ ಮತ್ತು ಸಂಗಡಿಗರು ನೆರವೇರಿಸಿದರು. ರಾಮನವಮಿ ಅಂಗವಾಗಿ ದೇವಾಲಯವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಈ ಸಂದರ್ಭ ಸಮಿತಿ ಅಧ್ಯಕ್ಷ ವಿಘ್ನೇಶ್, ಕಾರ್ಯದರ್ಶಿ ವಾಸುದೇವ ಸೇರಿದಂತೆ ಸಮಿತಿ ಸದಸ್ಯರು ಹಾಜರಿದ್ದರು.

ಬೆಳಿಗ್ಗೆ ಮೂಲ ಸನ್ನಿಧಾನದಲ್ಲಿ ಪಂಚಾಮೃತ ಸಹಿತ ವಿಷ್ಣು ಸೂಕ್ತ, ಶ್ರೀಸೂಕ್ತ, ಪುರುಷ ಸೂಕ್ತ, ಅಭಿಷೇಕ, ಅಲಂಕಾರ, ಗಣಪತಿ ಪೂಜೆ, ಪುಣ್ಯಾಹವಾಚನ, ಋತ್ವಿಕ್ ವರ್ಣ, ಕಲಶಾರಾಧನೆ ಹಾಗೂ ರಾಮತಾರಾಕ ಹೋಮ ನಡೆದು ಮಧ್ಯಾಹ್ನ ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗವಾಯಿತು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.

ಸAಜೆ ಸೀತಾಲಕ್ಷö್ಮಣ, ಆಂಜನೇಯ ಸಹಿತ ಶ್ರೀಪಟ್ಟಾಭಿರಾಮರ ಉತ್ಸವ ಮೂರ್ತಿಗಳನ್ನು ಮುಖ್ಯ ರಸ್ತೆಗಳಲ್ಲಿ ಪಲ್ಲಕ್ಕಿಯ ಮೂಲಕ ಮೆರವಣಿಗೆ ಮಾಡಲಾಯಿತು. ಉತ್ಸವ ಮೂರ್ತಿಗಳು ದೇವಾಲಯ ತಲುಪಿದ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಾಯಿತು.

ಪ್ರಧಾನ ಅರ್ಚಕ ಕೆ.ಎಸ್. ಪ್ರಸನ್ನ ಭಟ್, ಅರ್ಚಕರಾದ ಶಿವಶಂಕರ್ ಭಟ್, ಪ್ರಭಾಕರ್ ಭಟ್, ನಂದನ್ ಭಟ್ ಹಾಗೂ ಸುದರ್ಶನ್ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀರಾಮ ಮಂದಿರ ಆಡಳಿತ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಜರಿದ್ದರು.ಶ್ರೀರಾಮನಿಗೆ ಕಾಯಿತುರಿ ಅಲಂಕಾರ

ಶನಿವಾರಸAತೆ: ಪಟ್ಟಣದ ಶ್ರೀರಾಮ ಮಂದಿರದಲ್ಲಿ ರಾಮನವಮಿ ಪ್ರಯುಕ್ತ ಶ್ರೀರಾಮ, ಸೀತಾ, ಲಕ್ಷö್ಮಣ, ಆಂಜನೇಯ ಮೂರ್ತಿಗಳಿಗೆ ಕಾಯಿ ತುರಿ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪ್ರಧಾನ ಅರ್ಚಕ ಕೆ.ಎಸ್. ಪ್ರಸನ್ನ ಭಟ್, ಅರ್ಚಕರಾದ ನಂದನ್ ಭಟ್ ಹಾಗೂ ಸುದರ್ಶನ ಭಟ್ ದೇವರಿಗೆ ಶತ ಶ್ಲೋಕಿ ರಾಮಾಯಣ ಪಾರಾಯಣ ಮಾಡಿ, ಅಷ್ಟಾವಧಾನ ಸೇವೆ ಸಲ್ಲಿಸಿ, ಮಹಾ ಮಂಗಳಾರತಿ ನೆರವೇರಿಸಿದರು. ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗವಾಯಿತು. ಶ್ರೀರಾಮ ಮಂದಿರ ಸೇವಾ ಸಮಿತಿ ಪ್ರಮುಖರು, ಭಕ್ತಾದಿಗಳು ಹಾಜರಿದ್ದರು.ನಾಪೋಕ್ಲು: ರಾಮ ನÀವಮಿ ಅಂಗವಾಗಿ ಇಲ್ಲಿನ ರಾಮ ಮಂದಿರದಲ್ಲಿ ವಿಶೇಷ ಭಜನಾ ಕಾರ್ಯಕ್ರಮವನ್ನು ಶ್ರೀರಾಮ ಬಳಗದ ವತಿಯಿಂದ ನಡೆಯಿತು. ವಿಶ್ವ ಹಿಂದೂ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಸುಳ್ಯದ ಭಜನಾ ತಂಡದವರು ಶ್ರೀರಾಮ ಬಳಗ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು

ದೇವಾಲಯದಲ್ಲಿ ಗಣಪತಿ ಆರಾಧನೆಯ ಬಳಿಕ ಸತ್ಯನಾರಾಯಣ ಪೂಜೆ, ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಜರುಗಿತು. ಅರ್ಚಕ ರವಿ ಉಡುಪ ಪೂಜಾ ಕೈಂಕರ್ಯ ನೆರವೇರಿಸಿದರು.