ಮಡಿಕೇರಿ, ಮಾ. ೩೦: ಮೂರ್ನಾಡು ವಿದ್ಯಾಸಂಸ್ಥೆಯ ಜನರಲ್ ಕೆ.ಎಸ್. ತಿಮ್ಮಯ್ಯ ಅಕಾಡೆಮಿ ಫಾರ್ ಸ್ಪೋಟ್ಸ್ ಆಂಡ್ ಗೇಮ್ಸ್ ವತಿಯಿಂದ ೧೨ನೇ ವರ್ಷದ ಉಚಿತ ಹಾಕಿ ಬೇಸಿಗೆ ಶಿಬಿರವನ್ನು ಈ ಬಾರಿಯೂ ಕೂಡ ಆಯೋಜಿಸಲಾಗುತ್ತಿದ್ದು, ಏಪ್ರಿಲ್ ೧ರಿಂದ ೧೬ರವರೆಗೆ ಪ್ರತಿದಿನ ಬೆಳಿಗ್ಗೆ ೭ ರಿಂದ ೯ ರವರೆಗೆ ಮೂರ್ನಾಡು ವಿದ್ಯಾಸಂಸ್ಥೆಯ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನುರಿತ ಕ್ರೀಡಾ ತರಬೇತುದಾರರಿಂದ ಹಾಕಿ ತರಬೇತಿಯನ್ನು ನೀಡಲಾಗುವುದು. ಆಸಕ್ತ ಬಾಲಕ-ಬಾಲಕಿಯರು ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ಸಂಸ್ಥೆಯ ದೈಹಿಕ ನಿರ್ದೇಶಕರುಗಳಾದ ಅವರೆಮಾದಂಡ ಜಿ. ಗಣೇಶ್-೯೪೪೯೩೩೯೩೩೬, ಕಂಬೀರAಡ ಕೆ. ಬೋಪಣ್ಣ-೯೮೮೬೨೦೩೩೧೫, ಕೋರನ ಯು. ಮಂಜುನಾಥ್-೮೮೬೧೪೧೦೯೧೭ ಮತ್ತು ಪಡಿಜ್ಞಾರಂಡ ಕೆ. ರಾಕೇಶ್-೯೯೦೧೨೩೮೦೨೧ ಅವರನ್ನು ಸಂಪರ್ಕಿಸಲು ಕೋರಿದೆ.