ಮಡಿಕೇರಿ, ಮಾ. ೩೦: ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಅವರ ತೇಜೋವದೆಗೆ ಪ್ರಯತ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಯಬಿಟ್ಟಿದ್ದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿ ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಕೊಡಗು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರಲ್ಲಿ ದೂರು ದಾಖಲಿಸಿದ್ದಾರೆ.

ತಾ. ೩೦ರಂದು ಏoಜಚಿvಚಿ iಟಿಜಿoಡಿmಚಿಣioಟಿ ಔಟಿಟಥಿ ಎಂಬ ವಾಟ್ಸಾಫ್ ಗ್ರೂಪ್‌ನಲ್ಲಿ ಗ್ರೂಪ್ ಸದಸ್ಯ ರೋಷನ್ ದೇವಯ್ಯ ಎಂಬ ವ್ಯಕ್ತಿ ಎ.ಎಸ್. ಪೊನ್ನಣ್ಣ ಅವರ ಫೋಟೊ ಬಳಸಿ ವೈಯಕ್ತಿಕ ತೇಜೋವದೆ ಮಾಡಿದ್ದು, ಇದು ಭಾರತೀಯ ಚುನಾವಣಾ ನೀತಿ ಸಂಹಿತೆ ಅನ್ವಯ ಅಪರಾಧವಾಗಿದ್ದು ತಪ್ಪಿತಸ್ಥರ ಮೇಲೆ ತಕ್ಷಣವೇ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.