ಮಡಿಕೇರಿ, ಮಾ. ೩೦: ಶ್ರೀರಾಮ ನವಮಿ ಆಚರಣೆ ಜಿಲ್ಲೆಯ ವಿವಿಧೆಡೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ವಿವಿಧೆಡೆ ಆಚರಣೆ ಅಂಗವಾಗಿ ಪಾನಕ, ಕೋಸಂಬರಿ ಹಂಚಿಕೆ ಮಾಡಲಾಯಿತು. ದೇವಾಲಯಗಳಲ್ಲಿ ವಿಗ್ರಹಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಭಕ್ತಾದಿಗಳು ದೇವಾಲಯಕ್ಕೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡರು. ಹಿಂದೂ ಸಂಘಟನೆಗಳ ವತಿಯಿಂದಲೂ ಹಲವೆಡೆ ರಾಮನವಮಿ ಆಚರಣೆ ನಡೆಯಿತು. ಕಣಿವೆ ರಾಮಲಿಂಗೇಶ್ವರ ಸನ್ನಿಧಿಯಲ್ಲಿ ರಥೋತ್ಸವ, ಸೋಮವಾರಪೇಟೆ ಸಾಮೂಹಿಕ ರಾಮನವಮಿ, ಮಡಿಕೇರಿಯಲ್ಲಿ ಇಸ್ಕಾನ್ ವತಿಯಿಂದ ರಥಯಾತ್ರೆ ನಡೆಯಿತು.

ಕಣಿವೆ, ಮಾ. ೩೦: ಗ್ರಾಮದ ಕಾವೇರಿ ನದಿ ದಂಡೆಯಲ್ಲಿನ ಶ್ರೀ ರಾಮಲಿಂಗೇಶ್ವರ ದೇವರ ವಾರ್ಷಿಕ ಬ್ರಹ್ಮರಥೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬೆಳಗ್ಗೆಯಿಂದ ದೇವಾಲಯದ ಗರ್ಭ ಗುಡಿಯಲ್ಲಿನ ಶ್ರೀ ರಾಮಲಿಂಗೇಶ್ವರನು ಪ್ರತಿಷ್ಠಾಪಿತ ಶಿವಲಿಂಗಕ್ಕೆ ವಿವಿಧ ಬಗೆಯ ಅಭಿಷೇಕಗಳನ್ನು ನೆರವೇರಿಸಿ, ಬಗೆ ಬಗೆಯ ಪುಷ್ಪಗಳಿಂದ ಅಲಂಕೃತಗೊಳಿಸಿ ಪೂಜಿಸಿ ಮಹಾ ಮಂಗಳಾರತಿ ನೆರವೇರಿಸಲಾಯಿತು. ರಥೋತ್ಸವದಲ್ಲಿ ಪ್ರತಿಷ್ಠಾಪಿಸುವ (ಮೊದಲ ಪುಟದಿಂದ) ಶ್ರೀರಾಮನ ಕಂಚಿನ ವಿಗ್ರಹಕ್ಕೆ ಕೇಸರಿ ಪೇಟವನ್ನು ಕಟ್ಟಿ ಅಲಂಕಾರಗೊಳಿಸಲಾಗಿತ್ತು. ಬೆಂಗಳೂರಿನ ನರಹರಿ ಭಟ್ ನೇತೃತ್ವದ ಅರ್ಚಕರ ತಂಡದಿAದ ವಿಶೇಷ ಪೂಜೆಗಳು ನೆರವೇರಿದವು.

ಬಳಿಕ ನೆರೆಯ ಹೆಬ್ಬಾಲೆ ಗ್ರಾಮದ ಬಸವೇಶ್ವರ ದೇವಾಲಯಕ್ಕೆ ಸಾಂಪ್ರದಾಯಿಕವಾಗಿ ಕಾಶಿಯಿಂದ ಅಂಚೆಯಲ್ಲಿ ಬರುವ ಪವಿತ್ರ ಗಂಗಾ ಜಲವನ್ನು ಅಲಂಕೃತ ತೆರೆದ ವಾಹನದಲ್ಲಿ ಹೆಬ್ಬಾಲೆ ದೇವಾಲಯ ಸಮಿತಿಯವರು ಮೆರವಣಿಗೆಯಲ್ಲಿ ತಂದಾಗ, ಹಕ್ಕೆ ಬಳಿ ರಾಮಲಿಂಗೇಶ್ವರ ದೇವಾಲಯ ಸಮಿತಿ ಪದಾಧಿಕಾರಿಗಳು ಅಧ್ಯಕ್ಷ ಕೆ.ಎನ್. ಸುರೇಶ್ ನೇತೃತ್ವದಲ್ಲಿ ಬರಮಾಡಿಕೊಂಡು ವೀರಭದ್ರ ನೃತ್ಯ ಹಾಗೂ ಚಂಡೇ ವಾದ್ಯದೊಂದಿಗೆ ಮುಖ್ಯ ರಸ್ತೆಯ ಮೂಲಕ ದೇವಾಲಯದ ಸನ್ನಿಧಿಗೆ ತರಲಾಯಿತು. ಬಳಿಕ ಅಲಂಕೃತ ಶ್ರೀ ರಾಮಲಿಂಗೇಶ್ವರ ಲಿಂಗ ಹಾಗೂ ಉತ್ಸವ ಮೂರ್ತಿಯ ಮೇಲೆ ಗಂಗೋಧಕ ಪ್ರೋಕ್ಷಣೆ ಮಾಡಿದ ನಂತರ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿದಾಗ ನೆರೆದಿದ್ದ ಸಹಸ್ರಾರು ಭಕ್ತ ಜನರು ರಥದ ಮೇಲೆ ಬಾಳೆ ಹಣ್ಣು ಹಾಗೂ ಜವುನಗಳನ್ನು ಎಸೆದು ಪುನೀತರಾದರು.

ಪೂಜಾ ವಿಧಿ-ವಿಧಾನಗಳ ನಂತರ ಕಣಿವೆ ಗ್ರಾಮದಲ್ಲಿನ ಅರಳಿ ಮರದವರೆಗೆ ರಥವನ್ನು ಎಳೆತಂದು ಸಂಜೆ ಸ್ವಸ್ಥಾನಕ್ಕೆ ಮರಳಿಸಲಾಯಿತು.

ರಥೋತ್ಸವದ ಅಂಗವಾಗಿ ದೇವಾಲಯ ಸಮಿತಿ ವತಿಯಿಂದ ನೆರೆದ ಸಹಸ್ರಾರು ಭಕ್ತರಿಗೆ ಮಹಾ ಪ್ರಸಾದ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ರಥೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ನಾಲ್ಕು ದಿನಗಳ ಕಾಲ ಜಾತ್ರೆ ನಡೆಯಲಿದೆ. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್, ಕಾರ್ಯದರ್ಶಿ ಟಿ.ಎನ್. ಶೇಷಾಚಲ, ಸಹ ಕಾರ್ಯದರ್ಶಿ ಕೆ.ಎಲ್. ಮಹೇಶ್ ಕುಮಾರ್, ಕಾರ್ಯಾಧ್ಯಕ್ಷ ಕೆ.ಎಸ್. ಮಾಧವ, ಉಪಾಧ್ಯಕ್ಷ ಕೆ.ಕೆ. ಮಂಜುನಾಥ ಸ್ವಾಮಿ, ಪ್ರಮುಖರಾದ ನಂಜುAಡ ಸ್ವಾಮಿ, ನಾಗೇಂದ್ರ ಸೇರಿದಂತೆ ಇನ್ನಿತರರು ಇದ್ದರು.

ಶ್ರದ್ಧಾಭಕ್ತಿಯ ರಥಯಾತ್ರೆ

ಮಡಿಕೇರಿ: ಅಂತರರಾಷ್ಟಿçÃಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ವತಿಯಿಂದ ರಾಮ ನವಮಿ ಆಚರಣೆ ನಡೆಯಿತು. ಈ ಪ್ರಯುಕ್ತ ಶ್ರೀ ರಾಮಚಂದ್ರ ವಿಜಯೋತ್ಸವ ರಥಯಾತ್ರೆ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಉತ್ಸವ ಮೂರ್ತಿಗಳನ್ನು ಭವ್ಯ ಅಲಂಕೃತ ರಥದಲ್ಲಿ ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸಿದ ಬಳಿಕ ರಥಯಾತ್ರೆ ಆರಂಭವಾಯಿತು. ಹರೇ ರಾಮ ಹರೇ ಕೃಷ್ಣ., ಸೀತರಾಮ ಜಯ ಸೀತರಾಮ.., ಎಂಬಿತ್ಯಾದಿ ಸಂಕೀರ್ತನೆಯೊAದಿಗೆ ರಾಮಕೃಷ್ಣನನ್ನು ಜಪಿಸುತ್ತಾ ಭಕ್ತರು ರಥವನ್ನು ಎಳೆದರು.

(ಮೊದಲ ಪುಟದಿಂದ) ಇಸ್ಕಾನ್ ಮಂದಿರದ ಬಳಿಯಿಂದ ಆರಂಭವಾದ ರಥಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ದಾರಿಯುದ್ದಕ್ಕೂ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ರಥಯಾತ್ರೆಯ ನಂತರ ಗಾಂಧಿ ಮೈದಾನದಲ್ಲಿ ರಾತ್ರಿ ಶ್ರೀರಾಮಚಂದ್ರ ಕಥೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸೋಮವಾರಪೇಟೆಯಲ್ಲಿ ಅದ್ಧೂರಿ ಶೋಭಾಯಾತ್ರೆ

ಸೋಮವಾರಪೇಟೆ, ಮಾ. ೩೦: ಇಲ್ಲಿನ ಶ್ರೀ ಆಂಜನೇಯ ದೇವಾಲಯ ಸಮಿತಿ ಹಾಗೂ ಹಿಂದೂ ಜಾಗರಣಾ ವೇದಿಕೆಯ ಆಶ್ರಯದಲ್ಲಿ ಆಯೋಜನೆಗೊಂಡಿದ್ದ ರಾಮನವಮಿ ಉತ್ಸವವು ಅದ್ಧೂರಿಯಾಗಿ ನಡೆಯಿತು. ರಾಮನವಮಿ ಅಂಗವಾಗಿ ಪಟ್ಟಣವನ್ನು ಕೇಸರಿ ಬಂಟಿAಗ್ಸ್ ಹಾಗೂ ಧ್ವಜಗಳಿಂದ ಅಲಂಕರಿಸಲಾಗಿತ್ತು. ಯುವ ಜನಾಂಗ ಪಟ್ಟಣದಲ್ಲಿ ಜೈ ಶ್ರೀರಾಮ್ ಘೋಷಣೆಯೊಂದಿಗೆ ವಾದ್ಯಗೋಷ್ಠಿಗೆ ಹೆಜ್ಜೆ ಹಾಕಿ ಸಂಭ್ರಮಿಸಿತು.

ಪಟ್ಟಣದ ಖಾಸಗಿ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ಕೇಸರಿ ಬಂಟಿAಗ್ಸ್ಗಳಿAದ ಅಲಂಕರಿಸಲಾಗಿತ್ತು. ಪಟ್ಟಣದ ಅಂಗಡಿ ಮುಂಗಟ್ಟುಗಳು, ಸಾವಿರಾರು ವಾಹನಗಳಲ್ಲಿ ಕೇಸರಿ ಧ್ವಜ ಅಳವಡಿಸಿ ಮೆರವಣಿಗೆ ನಡೆಸಲಾಯಿತು. ಶ್ರೀ ಆಂಜನೇಯ ದೇವಾಲಯ ಸಮಿತಿ ವತಿಯಿಂದ ವರ್ಷಂಪ್ರತಿ ರಾಮನವಮಿ ಉತ್ಸವವನ್ನು ನಡೆಸಿಕೊಂಡು ಬರುತ್ತಿದ್ದು,

(ಮೊದಲ ಪುಟದಿಂದ) ಹಿಂದೂ ಜಾಗರಣಾ ವೇದಿಕೆ ಸಹಯೋಗ ನೀಡಿದ ನಂತರ ಕಾರ್ಯಕ್ರಮ ಅದ್ದೂರಿತನ ಪಡೆದುಕೊಂಡಿದೆ. ರಾಮನವಮಿಯನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಿದ್ದು, ೪ ವರ್ಷಗಳಿಂದ ಶೋಭಾಯಾತ್ರೆಯ ಮೆರುಗು ನೀಡಲಾಗುತ್ತಿದ್ದು, ಈ ಬಾರಿಯ ಉತ್ಸವವೂ ಸಂಭ್ರಮಕ್ಕೆ ಸಾಕ್ಷಿಯಾಯಿತು.

ರಾಮನವಮಿ ಉತ್ಸವದ ಅಂಗವಾಗಿ ಕಳೆದ ೯ ದಿನಗಳಿಂದ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಪ್ರತಿನಿತ್ಯ ದೇವರಿಗೆ ವಿವಿಧ ಅಲಂಕಾರಗಳು, ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿದ್ದು, ಉತ್ಸವದ ದಿನವಾದ ಇಂದು ಶ್ರೀ ಆಂಜನೇಯ ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿಶೇಷ ಅಲಂಕಾರ, ಪೂಜೆಗಳು ನೆರವೇರಿದವು. ನೂರಾರು ಮಂದಿ ಭಕ್ತಾದಿಗಳು ದೇವಾಲಯಕ್ಕೆ ತೆರಳಿ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.

ಹಿಂದೂ ಜಾಗರಣಾ ವೇದಿಕೆಯ ಸಹಯೋಗದೊಂದಿಗೆ ಸಂಜೆ ಶ್ರೀ ರಾಮನ ವಿಗ್ರಹವನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಪಟ್ಟಣದ ಸುತ್ತಮುತ್ತಲ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸ್ತಬ್ಧಚಿತ್ರಗಳು, ವಾದ್ಯಗೋಷ್ಠಿ, ಕಲಾತಂಡಗಳು ಭಾಗವಹಿಸುವ ಮೂಲಕ ಉತ್ಸವದ ಸಂಭ್ರಮಕ್ಕೆ ಹೆಚ್ಚಿನ ಮೆರುಗು ನೀಡುವಲ್ಲಿ ಯಶಸ್ವಿಯಾಯಿತು.

ಭವ್ಯ ಶೋಭಾಯಾತ್ರೆಯು ಶ್ರೀ ಆಂಜನೇಯ ದೇವಾಲಯ ಹಾಗೂ ಕಕ್ಕೆಹೊಳೆ ಜಂಕ್ಷನ್‌ನಿAದ ಆರಂಭಗೊAಡು ಪಟ್ಟಣದ ಮುಖ್ಯ ಮಾರ್ಗಗಳಲ್ಲಿ ಸಂಚರಿಸಿದವು ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ್ದ ಸ್ತಬ್ಧಚಿತ್ರಗಳು, ವಾದ್ಯಗೋಷ್ಠಿಗೆ ಸಾರ್ವಜನಿಕರು, ಯುವ ಜನಾಂಗ ಹೆಜ್ಜೆ ಹಾಕಿ ಸಂಭ್ರಮಿಸಿದರು. ತಡರಾತ್ರಿಯವರೆಗೂ ಸಂಭ್ರಮದ ಮೆರವಣಿಗೆ ನಡೆಯಿತು.

ಸಂಜೆ ದೇವಾಲಯದಲ್ಲಿ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನದಾನ ನೆರವೇರಿತು. ಶ್ರೀ ರಾಮನವಮಿ ಉತ್ಸವ ಸಮಿತಿ ಅಧ್ಯಕ್ಷ ಸುಭಾಶ್ ತಿಮ್ಮಯ್ಯ, ದೇವಾಲಯ ಸಮಿತಿ ಅಧ್ಯಕ್ಷ ಬನ್ನಳ್ಳಿ ಗೋಪಾಲ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸೀತಾರಾಮ್, ಹಿಂದೂ ಜಾಗರಣಾ ವೇದಿಕೆಯ ಎಂ.ಬಿ. ಉಮೇಶ್, ಬೋಜೇಗೌಡ, ಸುನಿಲ್ ಸೇರಿದಂತೆ ಸಾವಿರಾರು ಮಂದಿ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು.