ಮಡಿಕೇರಿ, ಮಾ. ೩೦: ಭಾರೀ ಜನಪ್ರಿಯತೆ ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-೨೦ ಕ್ರಿಕೆಟ್ ಕಲರವ ತಾ. ೩೧ರಿಂದ (ಇಂದಿನಿAದ) ಆರಂಭಗೊಳ್ಳಲಿದೆ. ೧೬ನೆಯ ಆವೃತ್ತಿಯ ಚುಟುಕು ಕ್ರಿಕೆಟ್‌ನತ್ತ ಕ್ರೀಡಾಭಿಮಾನಿಗಳು ಕಾತರದಿಂದಿದ್ದಾರೆ. ಈ ಬಾರಿ ಕೊಡಗು ಜಿಲ್ಲೆಯಿಂದ ಪಂಜಾಬ್ ಕಿಂಗ್ಸ್ ಪರವಾಗಿ ಮಾಚಿಮಾಡ ವಿದ್ವತ್ ಕಾವೇರಪ್ಪ ಮೊದಲ ಬಾರಿಗೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕರ್ನಾಟಕ ತಂಡದ ಪರವಾಗಿ ರಣಜಿ ಸೇರಿದಂತೆ ವಿವಿಧ ಪ್ರಮುಖ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಗಮನ ಸೆಳೆದಿರುವ
(ಮೊದಲ ಪುಟದಿಂದ) ವೇಗದ ಬೌಲರ್ ವಿದ್ವತ್ ಕಾವೇರಪ್ಪ ಅವರು ಕೊಡಗಿನ ಪಾಲಿಗೆ ಪ್ರಮುಖ ಆಕರ್ಷಣೆಯಾಗಿದ್ದಾರೆ. ಪಂಜಾಬ್ ಕಿಂಗ್ಸ್ ವಿದ್ವತ್ ಅವರನ್ನು ೨೦ ಲಕ್ಷ ಮೂಲ ಬೆಲೆಗೆ ಖರೀದಿ ಮಾಡಿದೆ. ಕಳೆದ ಐಪಿಎಲ್‌ನಲ್ಲೂ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ರಾಜ್ಯದ ಮತ್ತೋರ್ವ ಆಟಗಾರ ಕೊಡಗಿನವರಾದ ಕೆ.ಸಿ. ಕಾರ್ಯಪ್ಪ ಅವರು ಈ ಬಾರಿಯೂ ಇದೇ ತಂಡದಲ್ಲಿ ಮುಂದುವರಿಯಲಿದ್ದಾರೆ.