ನಾಪೋಕ್ಲು, ಮಾ. ೩೦: ನಾಪೋಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಪ್ಪಚೆಟ್ಟೋಳಂಡ ಕುಟುಂಬದ ವತಿಯಿಂದ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಹನ್ನೆರಡನೆಯ ದಿನದ ಪಂದ್ಯಾಟದಲ್ಲಿ ಬಿದ್ದಂಡ ಹಾಗೂ ಬೊಳಕಾರಂಡ ತಂಡಗಳು ರೋಚಕ ಪ್ರದರ್ಶನ ನೀಡಿ ಸಡ್‌ನ ಡೆತ್‌ನಲ್ಲಿ ಗೆಲುವಿನ ನಗೆ ಬೀರಿದರು.

ಬಿದ್ದಂಡ ಮತ್ತು ಅರೆಯಡ ತಂಡಗಳ ನಡುವಿನ ಸೆಣಸಾಟದಲ್ಲಿ ಮೊದಲಿಗೆ ಎರಡೂ ತಂಡಗಳು ೧-೧ ಗೋಲಿನ ಸಮಬಲ ಸಾಧಿಸಿ, ನಂತರ ನಡೆದ ಟೈ ಬ್ರೇಕರ್‌ನಲ್ಲಿಯೂ ಕೂಡ ಸಮ ಬಲದೊಂದಿಗೆ ಮುನ್ನಡೆದವು. ಇದಾದ ಬಳಿಕ ನಡೆದ ಸಡನ್‌ಡೆತ್‌ನಲ್ಲಿ ಬಿದ್ದಂಡ ತಂಡವು ಅರೆಯಡ ತಂಡವನ್ನು ೭-೬ ಗೋಲುಗಳ ಅಂತರದಿAದ ಮಣಿಸಿ ವಿಜಯಪತಾಕೆ ಹಾರಿಸಿತು. ಬೊಳಕಾರಂಡ ಮತ್ತು ಕೇಲೇಟಿರ ತಂಡಗಳ ನಡುವಿನ ಪಂದ್ಯದ ಮೊದಲ ಸುತ್ತಿನಲ್ಲಿ ಎರಡೂ ತಂಡಗಳು ಯಾವುದೇ ಗೋಲು ದಾಖಲಿಸಲಿಲ್ಲ. ನಂತರ ನಡೆದ ಟೈ ಬ್ರೇಕರ್ ಪಂದ್ಯದಲ್ಲಿ ಎರಡು ತಂಡಗಳು ೩-೩ ಗೋಲುಗಳ ಸಮಬಲ ಸಾಧಿಸಿ, ಬಳಿಕ ಸಡನ್‌ಡೆತ್ ಸುತ್ತಿನಲ್ಲಿ ಬೊಳಕಾರಂಡ ತಂಡವು ಕೇಲೇಟಿರ ತಂಡವನ್ನು ೪-೩ ಗೋಲುಗಳ ಅಂತರದಿAದ ಮಣಿಸಿ ಮುನ್ನಡೆಯಿತು.

ಹಾಗೆಯೇ, ಮಾತಂಡ, ಮಂಡೆಪAಡ, ಕುಪ್ಪಂಡ(ಕೈಕೇರಿ), ಪುಟ್ಟಿಚಂಡ, ಪಟ್ಟಡ, ನಾಪಂಡ, ಪುಲ್ಲಂಗಡ, ಕಂಬೀರAಡ, ಕಳ್ಳಿಚಂಡ, ಕರಿನೆರವಂಡ, ಬೊಳ್ಳಂಡ, ಚೀಯಕಪೂವಂಡ, ಬೊಟ್ಟೋಳಂಡ, ಮಣವಟ್ಟಿರ, ಕೊಂಗೇಟಿರ, ಮೇರಿಯಂಡ, ವಾಟೇರಿರ, ಎಳ್ತಂಡ, ಅಚ್ಚಪಂಡ ತಂಡಗಳು ಮುಂದಿನ ಸುತ್ತು ಪ್ರವೇಶಿವೆ.

ಮೈದಾನ ೧ರಲ್ಲಿ ಮಾತಂಡ ಮತ್ತು ಚೇನಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಮಾತಂಡ ತಂಡವು ಚೇನಂಡ ತಂಡವನ್ನು ೫-೪ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಮಂಡೆಪAಡ ತಂಡವು ಕಡೇಮಡ ತಂಡವನ್ನು ೨-೦ ಗೋಲಿನ ಅಂತರದಿAದ, ಕುಪ್ಪಂಡ ತಂಡವು ಬಿದ್ದಾಟಂಡ ತಂಡವನ್ನು ೩-೦ ಗೋಲಿನ ಅಂತರದಿAದ, ಪುಟ್ಟಿಚಂಡ ತಂಡವು ಕಾವಾಡಿಚಂಡ ತಂಡವನ್ನು ೩-೧ ಗೋಲಿನ ಅಂತರದಿAದ, ಬಲ್ಲಚಂಡ ತಂಡವನ್ನು ಟೈಬ್ರೇಕರ್‌ನ ೩-೨ ಗೋಲುಗಳ ಅಂತರದಿAದ, ನಾಪಂಡ ತಂಡವು ಚೇಂದAಡ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿ ವಿಜಯಪತಾಕೆ ಹಾರಿಸಿತು.

ಮೈದಾನ ೨ರಲ್ಲಿ ನಡೆದ ಆದೇಂಗಡ ಮತ್ತು ಪುಳ್ಳಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಪುಳ್ಳಂಗಡ ತಂಡವು ಆದೇಂಗಡ ತಂಡವನ್ನು ೪-೦ ಗೋಲುಗಳ ಅಂತರದಿAದ ಮಣಿಸಿ ಮುನ್ನುಗ್ಗಿತು. ಕಂಬೀರAಡ ತಂಡವು ಮಚ್ಚಾರಂಡ ತಂಡವನ್ನು ೧-೦ ಗೋಲಿನ ಅಂತರದಿAದ, ಕಳ್ಳಿಚಂಡ ತಂಡವು ಕಂಗಾAಡ ತಂಡವನ್ನು ೨-೦ ಗೋಲುಗಳ ಅಂತರದಿAದ, ಕರಿನೆರವಂಡ ತಂಡವು ಕರವಂಡ ತಂಡವನ್ನು ೨-೦ ಗೋಲಿನ ಅಂತರದಿAದ, ಬೊಳ್ಳಂಡ ತಂಡವು ಅಪ್ಪಂಡೆರAಡ ತಂಡವನ್ನು ೩-೦ ಗೋಲುಗಳ ಅಂತರದಿAದ, ಚೀಯಕಪೂವಂಡ ತಂಡವು ಮನೆಯಪಂಡ ತಂಡವನ್ನು ೨-೧ ಗೋಲುಗಳ ಅಂತರದಿAದ, ಬೊಟ್ಟೋಳಂಡ ತಂಡವು ಕುಲ್ಲಚಂಡ ತಂಡವನ್ನು ೧-೦ ಗೋಲಿನ ಅಂತರದಿAದ ಮಣಿಸಿ ಮುನ್ನಡೆ ಸಾಧಿಸಿತು.

ಮೈದಾನ ೩ರಲ್ಲಿ ನಡೆದ ಪಂದ್ಯಾಟದಲ್ಲಿ ಪಟ್ಟಮಡ ತಂಡವು ಮಣವಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಮಣವಟ್ಟಿರ ತಂಡವು ಪಟ್ಟಮಡ ತಂಡವನ್ನು ೨-೦ ಗೋಲುಗಳ ಅಂತರದಿAದ ಮಣಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಕೊಂಗೇಟಿರ ತಂಡವು ಬೇರೆರ ತಂಡವನ್ನು ೨-೦ ಗೋಲುಗಳ ಅಂತರದಿAದ, ಮೇರಿಯಂಡ ತಂಡವು ಕುಮ್ಮಂಡ ತಂಡವನ್ನು ೨-೧ ಗೋಲುಗಳ ಅಂತರದಿAದ, ವಾಟೇರಿರ ತಂಡವು ಕೊಂಡಿರ ತಂಡವನ್ನು ೧-೦ ಗೋಲಿನ ಅಂತರದಿAದ, ಎಳ್ತಂಡ ತಂಡವು ಮುಂಡಚಾಡಿರ ತಂಡವನ್ನು ಟೈ ಬ್ರೇಕರ್‌ನ ೪-೨ ಗೋಲುಗಳ ಅಂತರದಿAದ, ಅಚ್ಚಪಂಡ ತಂಡವು ಅಲ್ಲುಮಡ ತಂಡವನ್ನು ೧-೦ ಗೋಲಿನ ಅಂತರದಿAದ ಮಣಿಸಿ ಮುನ್ನಡೆ ಸಾಧಿಸಿತು.

- ಪಿ.ವಿ.ಪ್ರಭಾಕರ್