ಪೊನ್ನಂಪೇಟೆ, ಮಾ. ೩೦: ನಲ್ವತ್ತೋಕ್ಲು (ಚೋಕಂಡಹಳ್ಳಿ) ಮೊಯಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ.

ಮಸೀದಿ ಆವರಣದಲ್ಲಿ ಇತ್ತೀಚಿಗೆ ನಡೆದ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಸಾಲಿಗೂ ಸೂಫಿ ಹಾಜಿ ಅವರನ್ನೇ ಮುಂದುವರಿಸಲು ನಿರ್ಧರಿಸಿದ ಸದಸ್ಯರು, ಅವರನ್ನು ಅವಿರೋಧವಾಗಿ ಪುನರಾಯ್ಕೆಗೊಳಿಸಿದ್ದಾರೆ.

ಆಡಳಿತ ಮಂಡಳಿ ಉಪಾಧ್ಯಕ್ಷರಾಗಿ ಡಿ. ಎಫ್. ಅಶ್ರಫ್ ಅಲಿ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಎಂ. ಯೂಸುಫ್, ಸಹ ಕಾರ್ಯದರ್ಶಿಯಾಗಿ ಪಿ. ಎ. ಬಷೀರ್ ಆಯ್ಕೆಗೊಂಡಿದ್ದಾರೆ. ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಿ. ಹೆಚ್. ಸಮದ್, ಕೆ. ಎಂ. ಫಸಿ, ಪಿ. ಎ. ಮಜೀದ್, ಕೆ. ಎಂ. ಹ್ಯಾರಿಸ್, ಡಿ. ಎಂ. ಸಿರಾಜ್, ಕೆ. ಎಂ. ಸಾಬಾನ್, ಎಂ. ಎ. ಶಫೀಕ್ ಮತ್ತು ಟಿ. ಎಂ. ಹಾಷಿಮ್ ಆಯ್ಕೆಯಾಗಿದ್ದಾರೆ.