ಗೋಣಿಕೊಪ್ಪಲು, ಮಾ. ೨೬: ಗೋಣಿಕೊಪ್ಪ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ನೂತನ ಸಾಲಿನ ಅಧ್ಯಕ್ಷರಾಗಿ ಆಯ್ಕೆಗೊಂಡ ಡಾ. ಶರತ್ ಕೆ. ಮ್ಯಾಥ್ಯೂ, ಕಾರ್ಯದರ್ಶಿಯಾಗಿ ಡಿ.ಬಿ. ರವಿ, ಖಜಾಂಚಿ ಅಂತೋಣಿ ಟಿ.ಜೆ. ಪದಗ್ರಹಣ ಸ್ವೀಕರಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ಕೊಡಗಿನಲ್ಲಿ ಕಳೆದ ಮೂರು ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಆ ಸಂದರ್ಭ ನೊಂದವರ ಕಷ್ಟಕ್ಕೆ ನೂರಾರು ಸಂಘ ಸಂಸ್ಥೆಗಳು ಸಹಾಯಕ್ಕೆ ನಿಂತಿದ್ದವು.

ಸಮಾಜಮುಖಿ ಕಾರ್ಯಗಳು ಹೆಚ್ಚಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಹೆಚ್ಚಾಗಬೇಕು. ಸೀನಿಯರ್ ಚೇಂಬರ್ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ರಾಷ್ಟಿçÃಯ ಉಪಾಧ್ಯಕ್ಷ ಜಿ.ಕೆ. ಹರಿಪ್ರಸಾದ್ ರೈ ನೂತನ ಆಡಳಿತ ಮಂಡಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ಕೆಲಸ ನಿರ್ವಹಿಸುವ ಮೂಲಕ ಸೀನಿಯರ್ ಚೇಂಬರ್ ಯಶಸ್ವಿಯಾಗಿದೆ. ಎಲ್ಲಾಕಡೆ ಸೀನಿಯರ್ ಚೇಂಬರ್ ಆರಂಭವಾಗಬೇಕು. ಆ ನಿಟ್ಟಿನಲ್ಲಿ ಗೋಣಿಕೊಪ್ಪ ಸೀನಿಯರ್ ಚೇಂಬರ್ ಕಾರ್ಯ ಪ್ರವೃತ್ತಗೊಳ್ಳಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಸಚಿನ್ ಬೆಳ್ಯಪ್ಪ, ಕಾರ್ಯದರ್ಶಿ ರತ್ತು ಉತ್ತಪ್ಪ, ಖಜಾಂಚಿ ಅಲ್ಲುಮಾಡ ಸುನೀಲ್ ಸೇರಿದಂತೆ ಇನ್ನಿತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಬಿ.ಎನ್. ಪ್ರಕಾಶ್, ಚೆರಿಯಂಡ ಶರತ್, ನಾಗೇಂದ್ರ ರೈ, ಅಂತೋಣಿ ಜೋಸೆಫ್, ಡಾ. ಆಶೀಕ್ ಚಂಗಪ್ಪ, ಜಿತೇಂದ್ರ, ಎಂ.ಎಸ್. ಕಾಶಿಯಪ್ಪ, ಅಲ್ಲುಮಾಡ ಸುನೀಲ್, ವಕೀಲ ಸಂಜೀವ್, ಮನ್ನಕಮನೆ ಬಾಲಕೃಷ್ಣ, ಸಣ್ಣುವಂಡ ರಚನ್ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಅತಿಥಿಗಳ ಪರಿಚಯವನ್ನು ಮನ್ನಕಮನೆ ಸೌಮ್ಯ ಬಾಲು ಹಾಗೂ ರೋಹಿಣಿ ತಿಮ್ಮಯ್ಯ ನೆರವೇರಿಸಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಘಟನೆ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ವಿತರಿಸÀಲಾಯಿತು.

ನಿಕಟಪೂರ್ವ ಅಧ್ಯಕ್ಷ ಸಚಿನ್ ಬೆಳ್ಯಪ್ಪ ಸ್ವಾಗತಿಸಿ, ಭಾಗ್ಯ ಪೊನ್ನಪ್ಪ ಹಾಗೂ ಡಾ. ನಂದಿತ ಕಾರ್ಯಕ್ರಮ ನಿರೂಪಿಸಿ, ಸೀನಿಯರ್ ಚೇಂಬರ್‌ನ ಕಾರ್ಯದರ್ಶಿ ಡಿ.ಬಿ. ರವಿ ವಂದಿಸಿದರು.