ಸೋಮವಾರಪೇಟೆ, ಮಾ. ೨೩: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಸೋಮವಾರಪೇಟೆ ಮೂಲಕ ಹಾಸನ ಮಾರ್ಗವಾಗಿ ಶಿವಮೊಗ್ಗಕ್ಕೆ ನೂತನ ಬಸ್ ಸೇವೆ ಆರಂಭಗೊAಡಿದೆ.

ಪ್ರತಿದಿನ ಬೆಳಿಗ್ಗೆ ೫ ಗಂಟೆಗೆ ಸೋಮವಾರಪೇಟೆಯಿಂದ ಹೊರಟು ಶನಿವಾರಸಂತೆ, ಅರಕಲಗೂಡು, ಹಾಸನಕ್ಕೆ ೭.೧೫ಕ್ಕೆ ತಲುಪಲಿದೆ. ೮.೩೦ಕ್ಕೆ ಅರಸೀಕೆರೆ, ಕಡೂರು, ತರೀಕೆರೆ, ಭದ್ರಾವತಿ ಮೂಲಕ ೧೧ ಗಂಟೆಗೆ ಶಿವಮೊಗ್ಗಕ್ಕೆ ನೂತನ ಬಸ್ ತಲುಪಲಿದೆ.

ಮಧ್ಯಾಹ್ನ ೧೨.೩೦ಕ್ಕೆ ಶಿವಮೊಗ್ಗದಿಂದ ಹೊರಟು ಅದೇ ಮಾರ್ಗದಲ್ಲಿ ರಾತ್ರಿ ೯ ಗಂಟೆಗೆ ಸೋಮವಾರಪೇಟೆಗೆ ಆಗಮಿಸಲಿದೆ. ನೇರ ಪ್ರಯಾಣಿಕರು ಇದರ ಉಪಯೋಗ ಪಡೆದುಕೊಳ್ಳಬಹುದು ಎಂದು ಸಂಚಾರ ನಿಯಂತ್ರಣಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.