ಕೂಡಿಗೆ, ಮಾ. ೨೩: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ಸಾಂಪ್ರ ದಾಯಿಕವಾಗಿ ನಡೆದುಕೊಂಡು ಬರುತ್ತಿರುವ ಹೊನ್ನಾರು ಉತ್ಸವ ಆಚರಿಸಲಾಯಿತು.

ಯುಗಾದಿ ಹಬ್ಬದಂದು ಗ್ರಾಮದ ಗ್ರಾಮಸ್ಥರು ಒಂದೆಡೆ ಸೇರಿ ದೇವಾಲಯ ಸಮಿತಿಯ ವತಿಯಿಂದ ವರ್ಷದ ಹೊಸ ಪಂಚಾAಗ ನೋಡಿದ ನಂತರ ಹೊನ್ನಾರು (ಚಿನ್ನದ ಸಾಲು) ಉತ್ಸವ ಆಚರಣೆಗೆ ಸಿದ್ದರಾಗಿ ಗ್ರಾಮದಲ್ಲಿರುವ ಜೋಡಿ ಎತ್ತುಗಳನ್ನು ಸಿಂಗರಿಸಿ ದೇವಾಲಯ ಆವರಣಕ್ಕೆ ಬಂದು ಶ್ರೀ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ನಂತರ ದೇವರ ಭೂಮಿಯಲ್ಲಿ ಸಂಪ್ರ ದಾಯದಂತೆ ಪೂರ್ವದಿಂದ ಪಶ್ಚಿಮಕ್ಕೆ ಜೋಡೆತ್ತಿನ ಮೂಲಕ ದೇವಾಲಯದ ಅರ್ಚಕ ಸೋಮಶೇಖರ್ ಪೂಜೆ ಸಲ್ಲಿಸಿದ ನಂತರ ಹೊನ್ನಾರು ಉತ್ಸವವು ಚಾಲನೆಗೊಂಡಿತು.

ಮೀನಾ ರಾಶಿಗೆ ಸೇರಿರುವ ಟಿ.ಎಂ. ಚಿದಾನಂದ ಎಂಬವರ ಜೋಡಿ ಎತ್ತುಗಳನ್ನು ಮತ್ತು ಉಳುಮೆಯ ರೈತ ನೇಗಿಲು, ನೊಗವನ್ನು ಪೂಜೆ ಮಾಡಿ ನಂತರ ದೇವರ ಭೂಮಿಯಲ್ಲಿ ಉಳುಮೆ ಮಾಡಲಾಯಿತು.

ಉತ್ಸವದಲ್ಲಿ ಗ್ರಾಮದ ೫೦ಕ್ಕೂ ಹೆಚ್ಚು ಜೋಡಿ ಎತ್ತುಗಳ ಸಿಂಗಾರಗೊAಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ತೊರೆನೂರು ಗ್ರಾಮದ ಹೆದ್ದಾರಿಯ ಸಮೀಪದಲ್ಲಿರುವ ಜೋಡಿ ಬಸವೇಶ್ವರನಿಗೆ ಪೂಜೆ ಸಲ್ಲಿಸಲಾಯಿತು. ನಂತರ ಉತ್ಸವದಲ್ಲಿ ಭಾಗವಹಿಸಿದ ಜೋಡಿ ಎತ್ತಿನ ಮಾಲೀಕರು ಜಮೀನಿನ ಉಳುಮೆಯ ಪ್ರಥಮ ಸಾಲು ಎಂದು ಯುಗಾದಿ ದಿನದಂದು ಸಾಲು ಹೊಡೆದರು.ಈ ಪದ್ಧತಿಯನ್ನು ಕಳೆದ ೫೫ ವರ್ಷಗಳಿಂದಲೂ ಈ ಗ್ರಾಮದಲ್ಲಿ ವೈಭವದಿಂದ ಆಚರಣೆ ಮಾಡಿ ಕೊಂಡು ಬರುತ್ತಿದ್ದಾರೆ. ಈ ಸಂದರ್ಭ ಗ್ರಾಮವು ತಳಿರು ತೋರಣಗಳಿಂದ ಸಿಂಗಾರಗೊAಡಿತ್ತು. ಗ್ರಾಮದ ಮಹಿಳೆಯರು ಗ್ರಾಮದ ಬೀದಿಗಳಲ್ಲಿ ವಿವಿಧ ರಂಗೋಲಿಗಳ ಮೂಲಕ ಹೊನ್ನಾರು ಉತ್ಸವವನ್ನು ಸ್ವಾಗತಿಸಿದರು.

ಹೊನ್ನಾರು ಉತ್ಸವದಲ್ಲಿ ಭಾಗವಹಿಸಿದ್ದ ಎಲ್ಲಾ ಜೋಡಿ ಎತ್ತಿನ ರೈತರುಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಇದರ ಅಂಗವಾಗಿ ಸಂಜೆ ಶ್ರೀ ಬಸವೇಶ್ವರ ಮೂರ್ತಿಯನ್ನು ವಿದ್ಯುತ್ ಅಲಂಕೃತವಾದ ಮಂಟಪದಲ್ಲಿ ಕುಳ್ಳಿರಿಸಿ ವಿಶೇಷ ಪೂಜೆ ಸಲ್ಲಿಸಿ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯು ಅದ್ಧೂರಿಯಾಗಿ ನಡೆಯಿತು

ಈ ಸಂದರ್ಭ ಶ್ರೀ ಬಸವೇಶ್ವರ ಸಮಿತಿಯ ಅಧ್ಯಕ್ಷ ಹೆಚ್.ಬಿ. ಚಂದ್ರಪ್ಪ, ಕಾರ್ಯದರ್ಶಿ ಟಿ.ಎಸ್. ಸೋಮಶೇಖರಾಚಾರಿ, ಉಪಾಧ್ಯಕ್ಷ ಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯ ಟಿ.ಸಿ. ಶಿವಕುಮಾರ್, ನಿರ್ದೇಶಕ ರಾದ ದೇವರಾಜ್, ಟಿ.ಎಸ್. ಪ್ರಕಾಶ್, ಟಿ.ಟಿ. ಗೋವಿಂದ, ಗಣೇಶ್, ಕುಮಾರ್ ಬೆಳ್ಳುಳ್ಳಿ, ಟಿ.ಎನ್. ಶಿವನಾಂದ, ಟಿ.ಎಸ್. ಚಂದ್ರಶೇಖರ್, ತ್ರೀನೇಶ್, ರವಿಚಂದ್ರ, ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು. ಯುಗಾದಿ ಹಬ್ಬ ಅಂಗವಾಗಿ ನಡೆದ ಹೊನ್ನಾರು ಉತ್ಸವದಲ್ಲಿ ತೊರೆನೂರು ಗ್ರಾಮದ ಬಾಲಕರು ಸಂಪ್ರದಾಯದAತೆ ಉಡುಗೆ ತೊಟ್ಟು ಚಿಕ್ಕ ಪ್ರಾಯದ ಕರುಗಳನ್ನು ಸಿದ್ಧತೆ ಮಾಡಿಕೊಂಡು ಹೊನ್ನಾರು ಉತ್ಸವದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

- ನಾಗರಾಜಶೆಟ್ಟಿ