ಅಮ್ಮತ್ತಿ, ಮಾ ೨೩: ಕೊಡಗಿನಿಂದ ಅಕ್ರಮ ಬಾಂಗ್ಲಾ ಕಾರ್ಮಿಕರನ್ನು ಹೊರ ಹಾಕದಿದ್ದಲ್ಲಿ ಮುಂದೆ ಕೊಡಗಿನಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿ ಕೊಡಗಿನ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಘು ಸಕಲೇಶಪುರ ಆತಂಕ ವ್ಯಕ್ತಪಡಿಸಿದರು. ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ವೀರಾಜಪೇಟೆ ಪ್ರಖಂಡದ ವತಿಯಿಂದ ಅಮ್ಮತ್ತಿ ಘಟಕದ ೨೫ನೇ ವರ್ಷದ ಸತ್ಯನಾರಾಯಣ ಪೂಜೆಯ ಪ್ರಯುಕ್ತ ಕೊಡವ ಸಮಾಜದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಕೊಡಗಿನಲ್ಲಿ ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಸೇರಿಕೊಂಡಿರುವ ಅಕ್ರಮ ಬಾಂಗ್ಲಾ ನುಸುಳುಗೋರರು ಕಳ್ಳತನ, ಅತ್ಯಾಚಾರ, ಸುಲಿಗೆ ಮಾಡುತ್ತಿದ್ದಾರೆ. ಇತ್ತೀಚೆಗೆ ದಕ್ಷಿಣ ಕೊಡಗಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ವಿಫಲ ಯತ್ನ ನಡೆಸಿ ಆಕೆಗೆ ಮರಣಾಂತಿಕವಾಗಿ ಹಲ್ಲೆ ನಡೆಸಿರುವುದು ಉದಾಹರಣೆಯಾಗಿದೆ. ಹೀಗೆ ಮುಂದುವರೆದರೆ ಇವರೆಲ್ಲಾ ಮುಂದೊAದು ದಿನ ಇಲ್ಲಿನ ತೋಟ ಮಾಲೀಕರಿಗೆ ಕಂಟಕವಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಕೊಡಗಿನಲ್ಲಿ ಲವ್ ಜಿಹಾದ್ ಹೆಚ್ಚಾಗುತ್ತಿದ್ದು ನಮ್ಮ ಹಿಂದೂ ಹೆಣ್ಣು ಮಕ್ಕಳು ಹೆಚ್ಚಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಹಿಂದೂ ಸಮಾಜವನ್ನು ಮುಗಿಸಲು ಈ ರೀತಿಯ ಜಿಹಾದ್ ನಡೆಯುತ್ತಿದ್ದು, ಇದನ್ನು ಗಂಭಿರವಾಗಿ ಪರಿಗಣಿಸಬೇಕಾಗಿದೆ. ನಮ್ಮಲ್ಲಿ ಧಾರ್ಮಿಕ ಶಿಕ್ಷಣದ ಕೊರತೆಯಿಂದ ಹೀಗಾಗುತಿದ್ದು, ನಾವೆಲ್ಲರೂ ಎಚ್ಚೆತ್ತು ಲವ್ ಜಿಹಾದಿನ ಬಗ್ಗೆ ನಮ್ಮ ಹೆಣ್ಣು ಮಕ್ಕಳಿಗೆ ಜಾಗೃತಿ ಮೂಡಿಸಬೇಕಿದೆ ಎಂದರು.

ಕಾAಗ್ರೆಸ್ಸಿಗರಿಗೆ ರಾಮ ಮಂದಿರ ಬೇಡ, ದತ್ತ ಪೀಠ ಬೇಡ; ಮುಸ್ಲಿಂ ತುಷ್ಟಿಕರಣವಷ್ಟೆ ಸಾಕು. ಹಾಗಾಗಿ ಭಾರತ ಉಳಿಯಬೇಕಾದರೆ ನಾವು ಕಾಂಗ್ರೆಸ್ ಬದಿಗಿಡಲೇಬೇಕು ಹಾಗೂ ಭಾರತವನ್ನು ವಿಶ್ವಗುರು ಮಾಡಲು ಶ್ರಮಿಸುತ್ತಿರುವ ಮೋದಿಯೊಂದಿಗಿರಬೇಕು; ಹಾಗಾದಲ್ಲಿ ಮಾತ್ರ ನಮ್ಮ ಮಣ್ಣಿನಲ್ಲಿ ನಮಗೆ ಪೂಜೆ ಮಾಡಲು ಸಾಧ್ಯವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಪ್ರಾಸ್ತಾವಿಕ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ಕಳೆದ ೨೫ ವರ್ಷಗಳಿಂದ ಪ್ರತಿ ವರ್ಷ ಯುಗಾದಿ ಪ್ರಯುಕ್ತ ಸತ್ಯನಾರಾಯಣ ಪೂಜೆ ನಡೆಸುತ್ತಾ ಬರುತ್ತಿರುವುದು ಶ್ಲಾಘನೀಯ ಕಾರ್ಯ. ಜಾತಿಗಳನ್ನು ಬದಿಗಿಟ್ಟು ಹಿಂದೂಗಳು ಒಗ್ಗೂಡಿ ಹಿಂದೂ ಧರ್ಮದ ರಕ್ಷಣೆ ಮಾಡಬೇಕಿದೆ. ಕೇಸರಿ ಶಲ್ಯ ಹಾಕಿರುವ ಕಾರ್ಯಕರ್ತರು ಹಿಂದೂ ಸಮಾಜದ ಉಳಿವಿಗಾಗಿ ಸೇವೆಗೂ ಸಿದ್ಧ ಸಮರಕ್ಕೂ ಬದ್ದ ಎಂಬುದರ ಸಂಕೇತವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮ್ಮತ್ತಿ ಘಟಕದ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ಪ್ರಥಮ್ ಕರುಂಬಯ್ಯ ವಹಿಸಿದ್ದರು. ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಮುಖ್ ಬಿ.ಎಂ. ಕುಮಾರ್, ಬಜರಂಗದಳದ ಜಿಲ್ಲಾ ಸಂಯೋಜಕ ಅನಿಶ್ ಕುಮಾರ್, ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಅಂಬಿಕಾ ಉತ್ತಪ್ಪ ಸೇರಿದಂತೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಸಂಘ ಪರಿವಾರದ ಪ್ರಮುಖೆ ರೀನಾ ಪ್ರಕಾಶ್, ವಿವಿಧ ಹಿಂದೂ ಸಂಘನೆಗಳ ಕಾರ್ಯಕರ್ತರುಗಳು ಇದ್ದರು.

ಇದೇ ಸಂದÀರ್ಭ ರಘು ಸಕಲೇಶಪುರ ಅವರನ್ನು ಹಿಂದೂ ಸಂಘಟನೆಯ ಪ್ರಮುಖರು ಮತ್ತು ಕಾರ್ಯಕರ್ತರುಗಳು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮಕ್ಕೂ ಮೊದಲು ಹಿಂದೂ ಕಾರ್ಯಕರ್ತರು ಅಮ್ಮತ್ತಿ ಕಾರ್ಮಾಡು ಮಾರುಕಟ್ಟೆ ಸಮೀಪದಿಂದ ಶೋಭಾ ಯಾತ್ರೆ ಮೂಲಕ ಮುಖ್ಯ ರಸ್ತೆಯಲ್ಲಿ ಸಾಗಿ ಕೊಡವ ಸಮಾಜದ ಸಭಾಂಗಣಕ್ಕೆ ಆಗಮಿಸಿದರು.