ಶ್ರೀಮಂಗಲ, ಮಾ. ೨೧: ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಡಿಕೇರಿಯಲ್ಲಿ ಮೇ ೨೦ ರಂದು ಕೊಡವ ಯುವ ಮೇಳವನ್ನು ಅಯೋಜಿಸಿದ್ದು, ಇದರ ಕೈಪಿಡಿಯನ್ನು ಪೊನ್ನಂಪೇಟೆಯಲ್ಲಿ ಬಿಡುಗಡೆ ಮಾಡಲಾಯಿತು.

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕಾವೇರಿ ಪೊಮ್ಮಕ್ಕಡ ಕೂಟ ಆಯೋಜಿಸಿದ್ದ ಮೀನ್ಯಾರ್ ನಮ್ಮೆಯಲ್ಲಿ ಜಬ್ಭೂಮಿ ಸಂಘಟನೆ ಪ್ರಮುಖರೊಂದಿಗೆ ವೇದಿಕೆಯಲ್ಲಿದ್ದ ಗಣ್ಯರು ಕೈಪಿಡಿ ಬಿಡುಗಡೆ ಮಾಡಿದರು.

ಈ ಸಂದರ್ಭ ಮಾತನಾಡಿದ ಜಬ್ಬೂಮಿ ಸಂಚಾಲಕ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ ಅವರು ಇದೇ ಮೊದಲ ಬಾರಿಗೆ ಕೊಡವ ಯುವ ಮೇಳವನ್ನು ಅಯೋಜಿಸಲಾಗುತ್ತಿದೆ. ಕೊಡಗು ಹಾಗೂ ದೇಶದ ವಿವಿಧೆಡೆ ನೆಲೆಸಿರುವ ಕೊಡವ ಯುವ ಸಮುದಾಯವನ್ನು ಒಂದೆಡೆ ಸೇರಿಸಲು ವೇದಿಕೆ ಕಲ್ಪಿಸಲಾಗುತ್ತಿದೆ.ಒಂದೆಡೆ ಸೇರಿ ಕೊಡವ ಜನಾಂಗ ಮತ್ತು ಕೊಡಗಿನ ಬಗ್ಗೆ ದೂರದೃಷ್ಟಿಯಿಂದ ಚಿಂತಿಸಲು, ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಮೇಳ ಸಹಕಾರಿಯಾಗಲಿದೆ ಎಂದರು.

೬ ರಿಂದ ೮ ಸಾವಿರ ೧೮ರಿಂದ ೪೦ ವಯೋಮಿತಿಯ ಯುವ ಸಮುದಾಯವನ್ನು ಸೇರಿಸಲು ಸಂಘಟನೆ ನಡೆದಿದೆ,ಯುವ ಸಮುದಾಯದೊಂದಿಗೆ ಜನಾಂಗದ ಹಿರಿಯರು ಸಹ ಆಗಮಿಸಿ ಮಾರ್ಗದರ್ಶನ ನೀಡುವಂತೆ ಕೋರಿದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಕೆಪಿಸಿಸಿ ಕಾನೂನು ಘಟಕ ಅಧ್ಯಕ್ಷ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯೆ ಶಾಂತೇಯAಡ ವೀಣಾ ಅಚ್ಚಯ್ಯ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಗೋಣಿಕೊಪ್ಪ ಕಾವೇರಿ ಪೊಮ್ಮಕ್ಕಡ ಕೂಟ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ, ಬ್ರಹ್ಮಗಿರಿ ವಾರಪತ್ರಿಕೆಯ ಸಂಪಾದಕಿ ಉಳ್ಳಿಯಡ ಡಾಟಿ ಪೂವಯ್ಯ, ಜಬ್ಬೂಮಿ ಸಂಘಟನೆಯ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಪ್ರಮುಖರಾದ ಮಲ್ಲಮಾಡ ಪ್ರಭು ಪೂಣಚ್ಚ, ಉಳುವಂಗಡ ಲೋಹಿತ್ ಭೀಮಯ್ಯ, ಕನ್ನಂಡ ಕವಿತಾ, ಚೋಕಿರ ಅನಿತಾ, ಚಂಗುಲAಡ ಅಶ್ವಿನಿ, ಚಿರಿಯಪಂಡ ಪವನ್ ಬಿದ್ದಪ್ಪ, ಮಾಚಿಮಾಡ ತೇಜ್, ಕೊಟ್ಟಂಗಡ ಸೋಮಣ್ಣ, ಅಡ್ಡೆಂಗಡ ಪ್ರಧಾನ್, ಪೆಮ್ಮಂಡ ಸುಬ್ರಮಣಿ, ಮೂಕಳಮಾಡ ಗಣಪತಿ, ಅಲ್ಲುಮಾಡ ಶೀತಲ್ ಜಗದೀಶ್, ಕೊಕ್ಕಲೆಮಾಡ ಗೌತಮಿ ನೆಲ್ಲಮಕ್ಕಡ ಪ್ರತಿಷ್ಟಾ ಮಾದಯ್ಯ ಮುಂತಾದವರು ಹಾಜರಿದ್ದರು.