ಸಂಪಾಜೆ, ಮಾ. ೨೧: ಜಿಲ್ಲಾ ನೆಹರು ಯುವ ಕೇಂದ್ರ, ಜಿಲ್ಲಾ ಯುವ ಒಕ್ಕೂಟ, ಸಂಪಾಜೆ ಪಯಸ್ವಿನಿ ಯುವಕ ಸಂಘ ವತಿಯಿಂದ ದಿವಂಗತ ಬಾಲಚಂದ್ರ ಕಳಗಿ ಸ್ಮರಣಾರ್ಥ ಮುಕ್ತ ಹಗ್ಗಜಗ್ಗಾಟ ಕ್ರೀಡಾಕೂಟ ಸಂಪಾಜೆಯಲ್ಲಿ ನಡೆಯಿತು.

ಪುರುಷರ ಹೊನಲು ಬೆಳಕಿನ ಮುಕ್ತ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ಸ್ವಾಮಿ ಕೊರಗಜ್ಜ ವಿರಾಟ್ ಕೇಸರಿ ಸಂಪಾಜೆ, ದ್ವಿತೀಯ ಸ್ಥಾನವನ್ನು ಯುವ ಸ್ಫೂರ್ತಿ ಬೆಳ್ಳೆ, ತೃತೀಯ ಸ್ಥಾನವನ್ನು ಕುಂಜಾರ್ ಫ್ರೆಂಡ್ಸ್ ಉಜಿರೆ, ನಾಲ್ಕನೇ ಸ್ಥಾನವನ್ನು ಯುವ ಸ್ಫೂರ್ತಿ ಬೆಳ್ಳೆ ಉಡುಪಿ ಪಡೆದುಕೊಂಡಿತು.

ಸಮಾರAಭದಲ್ಲಿ ಬಾಲಚಂದ್ರ ಕಳಗಿಯವರ ಜೀವನದ ಕುರಿತು ಉದಯೋನ್ಮುಖ ಬರಹಗಾರ ಪ್ರತೀಕ್ ಪರಿವಾರರವರು ಬರೆದ ಕಿರುಪುಸ್ತಕವನ್ನು ಸಾಹಿತಿ, ಮಕ್ಕಳ ತಜ್ಞರೂ ಆಗಿರುವ ಡಾ.ಕುಶ್ವಂತ್ ಕೋಳಿಬೈಲು ಅವರು ಬಿಡುಗಡೆಗೊಳಿಸಿದರು.

ಸಂಪಾಜೆ ಗ್ರಾ.ಪಂ. ನಲ್ಲಿ ೨೨ ವರ್ಷಗಳ ಕಾಲ ನೀರುಗಂಟಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ದೇವಪ್ಪ ಕುಮಾರಮಂಗಿಲ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ೧೫ ವರ್ಷಗಳ ಕಾಲ ಅಪಘಾತ ರಹಿತ ಮೋಟಾರು ವಾಹನ ಚಾಲನೆಗಾಗಿ ಮುಖ್ಯಮಂತ್ರಿಗಳಿAದ ಚಿನ್ನದ ಪದಕ ಪಡೆದ ಶಿವರಾಮ ಪಾಲೆಪ್ಪಾಡಿ ಹಾಗೂ ಉದಯೋನ್ಮುಖ ಸಾಹಿತಿ ಪ್ರತೀಕ್ ಪರಿವಾರ ಅವರುಗಳನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ತೀರ್ಥ ಪ್ರಸಾದ್ ದುಗ್ಗಳ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಸಂಘದ ಮಾಜಿ ಅಧ್ಯಕ್ಷ ವಿಠಲ್ ಕಳಗಿ ಕಾರ್ಯಕ್ರಮ ಉದ್ಘಾಟಿಸಿರು. ಮುಖ್ಯ ಅತಿಥಿಗಳಾಗಿ ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ನಿರ್ಮಲ ಭರತ್, ಮಕ್ಕಳ ತಜ್ಞ ಡಾ. ಮೇ.ಕುಶ್ವಂತ್ ಕೋಳಿಬೈಲು, ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಅನಂತ್ ಎನ್.ಸಿ., ಉಪಾಧ್ಯಕ್ಷ ರಾಜಾರಾಮ್ ಕಳಗಿ, ಶ್ರೀ ಪಂಚಲಿAಗೇಶ್ವರ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಜಯಕುಮಾರ್ ಚೆದ್ಕಾರು, ಗ್ರಾ.ಪಂ. ಸದಸ್ಯ ಕುಮಾರ್ ಚೆದ್ಕಾರು, ನಿವೃತ್ತ ಪ್ರಾಧ್ಯಾಪಕ ವೆಂಕಪ್ಪ, ದಿ. ಬಾಲಚಂದ್ರ ಕಳಗಿ ಅವರ ಪತ್ನಿ ರಮಾದೇವಿ ಕಳಗಿ ಉಪಸ್ಥಿತರಿದ್ದರು.