ಕೂಡಿಗೆ, ಮಾ. ೨೧: ಕೂಡಿಗೆ ಸೈನಿಕ ಶಾಲೆಗೆ ಹೊಂದಿಕೊAಡAತೆ ಇರುವ ಹಾರಂಗಿ ನದಿ ತಟದಲ್ಲಿ ನಿನ್ನೆ ಸಂಜೆ ಕಾಡ್ಗಿಚ್ಚು ಕಾಣಿಸಿಕೊಂಡಿತು. ಸೈನಿಕ ಶಾಲೆಯ ತಡೆಗೋಡೆ ಸಮೀಪದಲ್ಲಿ ನದಿ ದಂಡೆಯ ಕಾಡಿಗೆ ಬೆಂಕಿ ಹೊತ್ತಿಕೊಂಡ ಸಂದರ್ಭ ಕೊಡಲೇ ಕಾರ್ಯಪ್ರವೃತ್ತರಾದ ಶಾಲೆಯ ಸಿಬ್ಬಂದಿ ವರ್ಗ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿತು.