ವೀರಾಜಪೇಟೆ, ಮಾ. ೨೧: ಕರ್ನಾಟಕ ಸರಕಾರದ ವತಿಯಿಂದ ನೀಡಲಾಗುವ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಪೂಮಾಲೆ ಪತ್ರಿಕೆ ಸಂಪಾದಕರು, ವೀರಾಜಪೇಟೆ ತಾಲೂಕು ಜಾನಪದ ಪರಿಷತ್ತಿನ ಗೌರವ ಅಧ್ಯಕ್ಷರು ಆಗಿರುವ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರನ್ನು ವೀರಾಜಪೇಟೆ ಜಾನಪದ ಪರಿಷತ್ತಿನ ವತಿಯಿಂದ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಲಾಯಿತು. ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು, ವೀರಾಜಪೇಟೆ ತಾಲೂಕು ಜಾನಪದ ಪರಿಷತ್ ಘಟಕದ ಪದಾಧಿಕಾರಿಗಳು ಅಚ್ಚರಿಯೆಂಬAತೆ ಮನೆಗೆ ಬಂದು ನನ್ನನ್ನು ಸನ್ಮಾನಿಸಿರುವುದು ಅತೀವ ಸಂತೋಷ ವೆನಿಸಿದೆ. ಸಾರ್ಥಕತೆಯ ಭಾವ ಮೂಡಿದೆ ಎಂದು ಹೇಳಿದರು.
ಸನ್ಮಾನ ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಜಿತ ಕಾರ್ಯಪ್ಪ, ಖಜಾಂಚಿ ದೇರಪಂಡ ದ್ರುವ, ಸಂಘಟನಾ ಕಾರ್ಯದರ್ಶಿ ವಿಮಲ ದಶರಥ, ಉಪಾಧ್ಯಕ್ಷರಾದ ಚಂಬAಡ ಮುದ್ದಪ್ಪ, ನಿರ್ದೇಶಕರಾದ ಟಿ.ಡಿ. ಮೋಹನ್ ಹಾಗೂ ದಿಲಿ ಕುಮಾರ್, ಪ್ರಮೀಳಾ ನಾಚಯ್ಯ ಪಾಲ್ಗೊಂಡಿದ್ದರು.