ನಾಪೋಕ್ಲು, ಮಾ. ೨೧: ನಾಪೋಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಮೂರನೇ ದಿನದ ಪಂದ್ಯಾಟದಲ್ಲಿ ಮೂವೆರ, ಮುಕ್ಕಾಟಿರ, ಚೊಟ್ಟೆಯಂಡಮಾಡ, ಐತಿಚಂಡ, ಮರುವಂಡ, ನಾಟೋಳಂಡ, ಕನ್ನಂಡ, ಚೆರುಮಂದAಡ, ಮುಕ್ಕಾಟಿರ (ಮೂವತೊಕ್ಲು), ಮಾಚಿಮಾಡ, ಮಲ್ಲಜ್ಜಿರ, ತೀತಿರ(ಹುದಿಕೇರಿ), ಆಪಟ್ಟಿರ, ಜಮ್ಮಡ, ತೆಕ್ಕಡ, ಬೊಳ್ಳಂಡ, ಆಪಾಡಂಡ, ಪುಚ್ಚಿಮಾಡ, ಅವರೆಮಾದಂಡ, ಚೀಯಕಪೂವಂಡ ತಂಡಗಳು ಮುಂದಿನ ಸುತ್ತು ಪ್ರವೇಶಿವೆ.

ಮೈದಾನ ೧ ರ ಮೂವೆರ ಮತ್ತು ಬಡುವಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಮೂವೆರ ತಂಡವು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಮುಕ್ಕಾಟಿರ (ಕಡಗದಾಳು) ಮತ್ತು ಅನ್ನಾಡಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಅನ್ನಾಡಿಯಂಡ ತಂಡವನ್ನು ೫-೦ ಗೋಲಿನ ಅಂತರದಿAದ ಪರಾಭವ ಗೊಳಿಸಿತು. ಚೊಟ್ಟೆಯಂಡಮಾಡ ಮತ್ತು ದೇಯಂಡ ತಂಡಗಳ ನಡುವಿನ ಸೆಣಸಾಟದಲ್ಲಿ ಚೊಟ್ಟೆಯಂಡಮಾಡ ತಂಡವು ದೇಯಂಡ ತಂಡವನ್ನು ೪-೦ ಗೋಲುಗಳ ಅಂತರದಿAದ ಮಣಿಸಿತು. ಐತಿಚಂಡ ಮತ್ತು ಕಟ್ಟೆರ ತಂಡಗಳ ನಡುವಿನ ಪಂದ್ಯದಲ್ಲಿ ಐತಿಚಂಡ ತಂಡವು ಕಟ್ಟೆರ ತಂಡವನ್ನು ೪-೦ ಗೋಲುಗಳಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮರುವಂಡ ಮತ್ತು ಬೊಪ್ಪಡತಂಡ ತಂಡಗಳ ನಡುವಿನ ಪಂದ್ಯದಲ್ಲಿ ಮರುವಂಡ ತಂಡವು ಬೊಪ್ಪಡತಂಡ ತಂಡವನ್ನು ೨-೦ ಗೋಲುಗಳಿಂದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ನಾಟೋಳಂಡ ಮತ್ತು ಪಟ್ರಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಟೋಳಂಡ ತಂಡವು ಪಟ್ರಂಗಡ ತಂಡವನ್ನು ೩-೦ ಗೋಲುಗಳ ಅಂತರದಿAದ ಮಣಿಸಿತು. ಕನ್ನಂಡ ಮತ್ತು ಚಿಲ್ಲವಂಡ ತಂಡಗಳ ನಡುವಿನ ಪಂದ್ಯದಲ್ಲಿ ಕನ್ನಂಡ ತಂಡವು ಚಿಲ್ಲವಂಡ ತಂಡವನ್ನು ೭-೦ ಗೋಲುಗಳ ಅಂತರದಿAದ ಮಣಿಸಿ ಮುನ್ನುಗ್ಗಿತು.

ಮೈದಾನ ೨ರಲ್ಲಿ ನಡೆದ ಅಜ್ಜಿನಂಡ ಮತ್ತು ಚೆರುಮಂದAಡ ತಂಡಗಳ ನಡುವಿನ ಪಂದ್ಯದಲ್ಲಿ ಚೆರುಮಂದAಡ ತಂಡವು ಅಜ್ಜಿನಂಡ ತಂಡವನ್ನು ೪-೧ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ನೂರೆರ ಮತ್ತು ಮುಕ್ಕಾಟಿರ (ಮೂವತೊಕ್ಲು) ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಮಾಚಿಮಾಡ ಮತ್ತು ಮಂಡಿರ (ಮಾದಾಪುರ) ತಂಡಗಳ ನಡುವಿನ ಪಂದ್ಯದಲ್ಲಿ ಮಾಚಿಮಾಡ ತಂಡವು ಮಂಡಿರ ತಂಡವನ್ನು ೪-೦ ಗೋಲುಗಳ ಅಂತರದಿAದ ಮಣಿಸಿ ಮುನ್ನಡೆ ಸಾಧಿಸಿತು. ಮಲ್ಲಜ್ಜಿರ ಮತ್ತು ಹಂಚೆಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಲ್ಲಜ್ಜಿರ ತಂಡವು ಹಂಚೆಟ್ಟಿರ ತಂಡವನ್ನು ೫-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಪೊಂಜAಡ ಮತ್ತು ತೀತಿರ(ಹುದಿಕೇರಿ) ತಂಡಗಳ ನಡುವಿನ ಪಂದ್ಯದಲ್ಲಿ ತೀತಿರ ತಂಡವು ಪೊಂಜAಡ ತಂಡವನ್ನು ೫-೩ ಗೋಲುಗಳ ಅಂತರದಿAದ ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು. ಬಲ್ಲಿಮಡ ಮತ್ತು ಆಪಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಆಪಟ್ಟಿರ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಕುಯಿಮಂಡ ಮತ್ತು ಜಮ್ಮಡ ತಂಡಗಳ ನಡುವಿನ ಪಂದ್ಯದಲ್ಲಿ ಜಮ್ಮಡ ತಂಡವು ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ಮೈದಾನ ೩ರಲ್ಲಿ ನಡೆದ ಪಾಡೆಯಂಡ ಮತ್ತು ತೆಕ್ಕಡ ತಂಡಗಳ ನಡುವಿನ ಮೊದಲ ಸೆಣಸಾಟದಲ್ಲಿ ತೆಕ್ಕಡ ತಂಡವು ಪಾಡೆಯಂಡ ತಂಡವನ್ನು ೧-೦ ಗೋಲುಗಳ ಅಂತರದಿAದ ಮಣಿಸಿ ಮುನ್ನುಗ್ಗಿತು. ಬೊಳ್ಳಂಡ ಮತ್ತು ಮೊಣ್ಣಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಳ್ಳಂಡ ತಂಡವು ಮೊಣ್ಣಂಡ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿತು. ಆಪಾಡಂಡ ಮತ್ತು ಕಾಳಿಮಡ ತಂಡಗಳ ನಡುವಿನ ಪಂದ್ಯದಲ್ಲಿ ಆಪಾಡಂಡ ತಂಡವು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಮಲ್ಲಂಗಡ ಮತ್ತು ಪುಚ್ಚಿಮಡ ತಂಡಗಳ ನಡುವೆ ನಡೆದ ಸೆಣಸಾಟದಲ್ಲಿ ಪುಚ್ಚಿಮಡ ತಂಡವು ಮಲ್ಲಂಗಡ ತಂಡವನ್ನು ೮-೦ ಗೋಲುಗಳ ಅಂತರದಿAದ ಸೋಲಿಸಿತು. ಅವರೆಮಾದಂಡ ಮತ್ತು ಚನ್ನಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅವರೆಮಾದಂಡ ತಂಡವು ಚನ್ನಪಂಡ ತಂಡವನ್ನು ೧-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಬೊಜ್ಜಂಗಡ ಮತ್ತು ಚೀಯಕಪೂವಂಡ ತಂಡಗಳ ನಡುವೆ ನಡೆದ ಸೆಣಸಾಟದಲ್ಲಿ ಚೀಯಕ ಪೂವಂಡ ತಂಡವು ಬೊಜ್ಜಂಗಡ ತಂಡವನ್ನು ೪-೧ ಗೋಲುಗಳ ಅಂತರದಿAದ ಪರಾಭವಗೊಳಿಸಿತು.

- ಪಿ.ವಿ. ಪ್ರಭಾಕರ್