ಭಾಗಮAಡಲ, ಮಾ. ೨೧: ಸಮೀಪದ ಅಯ್ಯಂಗೇರಿಯ ಶ್ರೀ ಕೃಷ್ಣ ಯುವಕ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಮೂರನೇ ವರ್ಷದ ಗೊಲ್ಲ ಜನಾಂಗದ ನಡುವಿನ ಕ್ರಿಕೆಟ್ ಪಂದ್ಯಾಟದಲ್ಲಿ ಟೀಮ್ ಪೊನ್ನುಕಂಡ ತಂಡ ಗೆಲುವು ಸಾಧಿಸಿತು. ಬೇಂಗ್‌ನಾಡ್ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಭಾಗಮAಡಲದ ಶ್ರೀ ಕಾವೇರಿ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ ಅಯ್ಯಂಗೇರಿಯ ಬಿದ್ದಿಯಂಡ ಪಳಂಗಪ್ಪ ಪ್ರಾಯೋಜಿತ ಟ್ರೋಫಿಯನ್ನು ವಿತರಿಸಲಾಯಿತು. ದ್ವಿತೀಯ ಸ್ಥಾನ ಪಡೆದ ಬೇಂಗ್‌ನಾಡು ತಂಡಕ್ಕೆ ಅಯ್ಯಂಗೇರಿಯ ಬಿದ್ದಿಯಂಡ ದೇಚವ್ವ ಪ್ರಾಯೋಜಿತ ಟ್ರೋಫಿ ವಿತರಿಸಲಾಯಿತು.

ಗೊಲ್ಲ ಜನಾಂಗದ ಪ್ರಾಥಮಿಕ ಶಾಲಾ ಮಕ್ಕಳಿಗೆ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಮಹಿಳೆಯರಿಗೆ ಪಾಸಿಂಗ್ ದಿ ಬಾಲ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕ್ರೀಡಾಕೂಟವನ್ನು ಉದ್ಘಾಟಿಸಿದ ಜಿಲ್ಲಾ ಖಜಾನೆಯ ನಿವೃತ್ತ ಅಧಿಕಾರಿ ಬಿದ್ದಿಯಂಡ ಮಾಚಯ್ಯ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ಕ್ರೀಡಾಕೂಟಗಳನ್ನು ಏರ್ಪಡಿಸುವುದರಿಂದ ಜನಾಂಗ ಬಾಂಧವರಲ್ಲಿ ಸಾಮರಸ್ಯ ಬೆಳೆಯುತ್ತದೆ ಎಂದರು. ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಪ್ರಥಮ ದರ್ಜೆ ಸಹಾಯಕ ಬಿದ್ದಿಯಂಡ ಬಾನು ಮಾಚಯ್ಯ, ಶ್ರೀ ಕೃಷ್ಣ ಯುವಕ ಸಂಘದ ಅಧ್ಯಕ್ಷ ಚೀಗಂಡ ಲತೇಶ್, ಪ್ರಥಮ ನಗದು ಬಹುಮಾನ ದಾನಿ ನಿವೃತ್ತ ಬಿಎಸ್‌ಎಫ್ ಯೋಧ ಈಶ್ವರ, ಪ್ರಥಮ ಟ್ರೋಫಿ ದಾನಿಗಳಾದ ಬಿದ್ದಿಯಂಡ ಪಳಂಗಪ್ಪ ಮತ್ತು ಬಿದ್ದಿಯಂಡ ಪದ್ಮಿನಿ ಪಳಂಗಪ್ಪ ದ್ವಿತೀಯ ಟ್ರೋಫಿ ದಾನಿಗಳಾದ ಬಿದ್ದಿಯಂಡ ದೇಚವ್ವ, ವೈಯಕ್ತಿಕ ಟ್ರೋಫಿ ದಾನಿ ಉದ್ದುಮಾಡಂಡ ಪ್ರತೀಶ್, ದಾನಿಗಳಾದ ಮೋಹನ್ ವಿ., ಚಿನ್ನತಪ್ಪ ದೇವತಕ್ಕ ಬಿದ್ದಿಯಂಡ ಸುಭಾಷ್, ಗ್ರಾ.ಪಂ. ಮಾಜಿ ಸದಸ್ಯ ಆಚೀರ ಚಂಗಪ್ಪ, ಕಡವಡಿರ ಕೆ. ಸಂತೋಷ್, ಕಾಫಿ ಬೆಳಗಾರ ಕೆ. ರಮೇಶ್, ನಿವೃತ್ತ ಸೈನಿಕ ಚಿಂಗAಡ ಶಿವಾಜಿ ನಾಣಯ್ಯ ಉಪಸ್ಥಿತರಿದ್ದರು. ಅಯ್ಯಂಗೇರಿಯ ಕಾಫಿ ಬೆಳೆಗಾರ ತೊತ್ತಿಯಂಡ ಜೀವನ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು.