ಚಪ್ಪರದಿಂದ ಗ್ಯಾಲರಿಯತ್ತ...: ಆರಂಭದಲ್ಲಿ ಪ್ರೇಕ್ಷಕರಿಗೆ ಅನುಕೂಲವಾಗುವಂತೆ ಚಪ್ಪರವನ್ನು ಮೈದಾನದ ಸುತ್ತಲೂ ಹಾಕಲಾಗುತ್ತಿತ್ತು. ಕಾಲಾ ನಂತರದಲ್ಲಿ ಹಾಕಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಾ ಬಂದ ಕಾರಣದಿಂದಾಗಿ ಇದೀಗ ತಾತ್ಕಾಲಿಕ ಗ್ಯಾಲರಿಯನ್ನು ನಿರ್ಮಿಸಲಾಗುತ್ತಿದೆ. ದೇಶದ ವಿವಿಧೆಡೆ ನಡೆಯುವ ಪ್ರಮುಖ ಪಂದ್ಯಾವಳಿಗೆ ನಿರ್ಮಿಸುವಂತಹ, ಲಕ್ಷಾಂತರ ವೆಚ್ಚದ ಗ್ಯಾಲರಿ ಇದಾಗಿದೆ. ಸುಮಾರು ೨೫ ರಿಂದ ೩೦ ಸಾವಿರದಷ್ಟು ಪ್ರೇಕ್ಷಕರು ಕುಳಿತು ಪಂದ್ಯ ವೀಕ್ಷಿಸಲು ಅನುಕೂಲವಾಗುವ ಗ್ಯಾಲರಿ, ವಿ.ಐ.ಪಿ. ಗ್ಯಾಲರಿ ಇತ್ಯಾದಿ ಆಕರ್ಷಣೆಯಾಗಲಿದೆ.