ಮಡಿಕೇರಿ, ಮಾ. ೧೭: ಇಲ್ಲಿಗೆ ಸಮೀಪದ ಭಗವತಿ ನಗರದಲ್ಲಿರುವ ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯದ ವಾರ್ಷಿಕ ಉತ್ಸವ ಇಂದು ಸಂಪನ್ನಗೊAಡಿತು. ಕಳೆದ ತಾ.೧೪ರಿಂದ ಆರಂಭಗೊAಡು ವಿವಿಧ ಪೂಜಾದಿ ಕಾರ್ಯಗಳು, ದೇವರ ನೃತ್ಯ, ಕೋಲಗಳು ನೆರವೇರಿದವು. ಇಂದು ಬೆಳಿಗ್ಗೆಯಿಂದ ವಿವಿಧ ಪೂಜಾದಿ ಸೇವೆಗಳೊಂದಿಗೆ ಮಧ್ಯಾಹ್ನ ಮಹಾಪೂಜೆ ನೆರವೇರಿತು. ಸಂಜೆ ದೇವರ ಜಳಕ, ದೇವರ ನೃತ್ಯ ಬಲಿ, ಭಂಡಾರ ಸಮರ್ಪಣೆ ಬಳಿಕ ಅನ್ನ ಸಂತರ್ಪಣೆ ನೆರವೇರಿತು.