ಮಡಿಕೇರಿ, ಮಾ. ೧೭: ಈ ಬಾರಿಯ ಕೊಡವ ಕೌಟುಂಬಿಕ ಹಾಕಿ ಉತ್ಸವ ಆಯೋಜಿಸುತ್ತಿರುವ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಇಂದು ಕುಟುಂಬದ ಹಿರಿಯರನ್ನು ಸ್ಮರಿಸಿ ದೇವಾಟ್‌ಪರಂಬುವಿನಲ್ಲಿ ಟಿಪ್ಪುವಿನಿಂದ ಹತ್ಯಾಕಾಂಡ ನಡೆದಿದೆ ಎಂಬ ಇತಿಹಾಸವಿರುವ ಸ್ಥಳದಲ್ಲಿ ಮೀದಿ ಸಮರ್ಪಿಸಿದರು.ತಾ. ೧೮ ರಿಂದ (ಇಂದಿನಿAದ) ಹಾಕಿ ಉತ್ಸವ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮೀದಿ ಸಮರ್ಪಿಸ ಲಾಯಿತು. ಈ ಹಿಂದಿನ ಇತಿಹಾಸದಂತೆ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಅಯ್ಯಂಗೇರಿ ಮೂಲದವರಾಗಿದ್ದಾರೆ. ಈ ಸಂದರ್ಭ ಕುಟುಂಬದ ಹಿರಿಯರು ನರಮೇದಕ್ಕೆ ಬಲಿಯಾಗಿರುವ ಐತಿಹ್ಯವಿದೆ. ನಂತರದಲ್ಲಿ ಬಲ್ಲಮಾವಟಿಯಲ್ಲಿ ನೆಲೆಕಂಡು ಸಂತತಿ ವೃದ್ಧಿಯಾದ ಈ ಕುಟುಂಬ ಪ್ರಸ್ತುತ ಬಲ್ಲಮಾವಟಿ ಸೇರಿದಂತೆ ವಿವಿಧೆಡೆ ನೆಲೆಸಿದ್ದು, ಇದೀಗ ೨೩ನೇ ವರ್ಷದ ಕೌಟುಂಬಿಕ ಹಾಕಿಯನ್ನು ಆಯೋಜಿಸುತ್ತಿದ್ದಾರೆ. ಕುಟುಂಬದ ಪ್ರಮುಖರಾದ ಮನು ಮುತ್ತಪ್ಪ ಸೇರಿದಂತೆ ಹಲವರು ಮೀದಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.