ಮಡಿಕೇರಿ, ಮಾ.೧೭ : ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲೆಂದು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ವಿದ್ಯಾರ್ಥಿಯ ಬ್ಯಾಗ್ ಹಾಗೂ ಮೊಬೈಲ್ ಅನ್ನು ಯಾರೋ ಕಳವು ಮಾಡಿರುವ ಪ್ರಸಂಗ ನಡೆದಿದೆ.

ಮದೆ ಗ್ರಾಮ ನಿವಾಸಿ ಜಿತನ್ ಎಂಬಾತ ಮಡಿಕೇರಿಯ ಸ.ಪ.ಪೂ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಪರೀಕ್ಷೆ ಬರೆಯಲೆಂದು ಗಾಂಧಿ ಮೈದಾನ ಬಳಿ ಇರುವ ಕಾಲೇಜಿಗೆೆ ತೆರಳಿದ್ದು, ಬ್ಯಾಗ್ ಅನ್ನು ಹೊರಗಡೆ ಇರಿಸಿ ಪರೀಕ್ಷೆ ಬರೆದಿದ್ದಾನೆ. ನಂತರ ಹೊರ ಬಂದು ನೋಡುವಷ್ಟರಲ್ಲಿ ಬ್ಯಾಗ್ ಕಳವಾಗಿತ್ತು. ಬ್ಯಾಗ್‌ನಲ್ಲಿ ಆನ್‌ಲೈನ್ ತರಗತಿಗೆಂದು ಕಷ್ಟಪಟ್ಟು ಖರೀದಿಸಿದ್ದ ಮೊಬೈಲ್ ಕೂಡ ಇದ್ದು, ಅದು ಕಳವಾಗಿದೆ. ಬ್ಯಾಗ್ ಹಾಗೂ ಮೊಬೈಲ್ ಕಳೆದುಕೊಂಡಿರುವ ಜಿತನ್ ಮುಂದಿನ ಪರೀಕ್ಷೆ ಬಗ್ಗೆ ಚಿಂತಾಗ್ರಾAತನಾಗಿದ್ದಾನೆ. ಈ ಸಂಬAಧ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಮೊಬೈಲ್ ಪತ್ತೆಹಚ್ಚಿ ಕೊಡುವಂತೆ ಮನವಿ ಮಾಡಿಕೊಂಡಿದ್ದಾನೆ. ಪೊಲೀಸ್ ಮುಂದಿನ ಕ್ರಮ ಕೈಗೊಂಡಿದ್ದಾರೆ. -ಇಬ್ರಾಹಿಂ