ಮಡಿಕೇರಿ, ಮಾ. ೧೭: ಮಡಿಕೇರಿ ನಗರದ ನಾಲ್ಕು ಶಕ್ತಿ ಕರಗ ದೇವತೆಗಳಲ್ಲೊಂದಾದ ಶ್ರೀ ದಂಡಿನ ಮಾರಿಯಮ್ಮ ದೇವಿಯ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ನಡೆಯಿತು.
ಉತ್ಸವದ ಅಂಗವಾಗಿ ನಿನ್ನೆಯಿಂದ ದೇವಾಲಯದಲ್ಲಿ ಪ್ರಸಾದ ಸಿದ್ಧಿ ರಾಕ್ಷೆÆÃಘ್ನ ಹೋಮ, ವಾಸ್ತು ಹೋಮ, ದಿಶಾ ಬಲಿ, ಮಂಗಳಾರತಿ ನೆರವೇರಿತು. ಇಂದು ಬೆಳಿಗ್ಗೆಯಿಂದ ಗಣಪತಿ ಹೋಮ, ಕಲಶ ಪೂಜೆ, ಕಲಶಾಭಿಷೇಕ, ನಾಗದೇವರಿಗೆ ಪಂಚಾಮೃತಾ ಭಿಷೇಕ, ನಾಗಪೂಜೆ, ಆಶ್ಲೇಷ ಬಲಿ, ದೇವಿಗೆ ಅಲಂಕಾರ ಪೂಜೆ ಬಳಿಕ ಮಹಾಪೂಜೆ ನೆರವೇರಿತು. ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆÉ ಏರ್ಪಡಿಸಲಾಗಿತ್ತು.