ಸೋಮವಾರಪೇಟೆ, ಮಾ.೧೭: ಜೇಸೀ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ನಮ್ಮ ಸಂಭ್ರಮ ಹಾಗೂ ಜೇಸೀ ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸ್ಥಳೀಯ ಮಹಿಳಾ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೇಸೀ ವಲಯ ಸಂಯೋಜಕಿ ಎಂ. ಮಧುರಾ, ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಸ್ವಾತಂತ್ರö್ಯವನ್ನು ಸ್ವೇಚ್ಛಾಚಾರ ಮಾಡಿಕೊಳ್ಳದೇ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಕಾರ್ಯ ಆಗಬೇಕಿದೆ ಎಂದರು.
ಕೊಡಗಿನ ಗೌರಮ್ಮ ಅವರು ಮಹಿಳಾ ಸ್ವಾತಂತ್ರö್ಯ ಮತ್ತು ಸಮಾನತೆಯ ಬಗ್ಗೆ ತಮ್ಮ ಸಾಹಿತ್ಯದ ಮೂಲಕ ದನಿ ಎತ್ತಿದ್ದರು. ಸ್ವಾತಂತ್ರö್ಯ ಪೂರ್ವದಲ್ಲಿಯೇ ಮಹಿಳೆಯರ ಸಬಲೀಕರಣಕ್ಕೆ ಅಡಿಗಲ್ಲು ಇಟ್ಟಿದ್ದರು. ಅವರ ಕಾಳಜಿಯಂತೆ ಇಂದು ಮಹಿಳೆಯರು ಎಲ್ಲಾ ರಂಗದಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಅಭಿಪ್ರಾಯಿಸಿದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಐಮುಡಿಯಂಡ ರಾಣಿ ಮಾಚಯ್ಯ ಮಾತನಾಡಿ, ಸಮಾಜದಲ್ಲಿ ಸ್ತಿçà ಪುರುಷರು ಸಮಾನರು. ನಮ್ಮ ಮಕ್ಕಳಿಗೆ ಮಾನವೀಯ ಮೌಲ್ಯವುಳ್ಳ ಗುಣಗಳನ್ನು ಕಲಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಸಾಹಿತಿಗಳಾದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರಿಗೆ ಜೇಸೀ ಸಾಹಿತ್ಯ ರತ್ನ, ಸಿಆರ್ಪಿಎಫ್ನಲ್ಲಿ ಸೇವೆ ಸಲ್ಲಿಸುತ್ತಿರುವ ಬಿ.ಪಿ. ವೇದಾವತಿ ಅವರಿಗೆ ಜೇಸೀ ಸೇವಾ ರತ್ನ, ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಎಸ್.ಎಸ್. ಶಾಶ್ವತಿ ಅವರಿಗೆ ಜೇಸೀ ಖೇಲ್ ರತ್ನ, ಕೃಷಿ ಕ್ಷೇತ್ರದ ಸಾಧನೆಗಾಗಿ ಪ್ರಮೀಳಾ ಅವರಿಗೆ ಜೇಸೀ ಕೃಷಿ ರತ್ನ, ಸ್ವ ಉದ್ಯೋಗ ಕ್ಷೇತ್ರದ ಸಾಧನೆಗಾಗಿ ಪಾರ್ವತಿ ಅಣ್ಣಯ್ಯ ಅವರಿಗೆ ಜೇಸೀ ಸಾಧನಾ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೇಡಿ ಜೇಸೀ ಅಧ್ಯಕ್ಷೆ ಪವಿತ್ರ ಲಕ್ಷಿö್ಮಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜೇಸೀ ಸಂಸ್ಥೆಯ ಅಧ್ಯಕ್ಷೆ ಎಂ.ಎ. ರುಬೀನಾ, ಮಹಿಳಾ ಸಮಾಜದ ಅಧ್ಯಕ್ಷೆ ಸುಮಾ ಸುದೀಪ್, ನಿಕಟಪೂರ್ವ ಜೇಸೀ ಅಧ್ಯಕ್ಷ ನೆಲ್ಸನ್ ಡಿಸೋಜ, ಕಾರ್ಯದರ್ಶಿ ಜಗದಾಂಭ ಗುರುಪ್ರಸಾದ್ ಅವರುಗಳು ಉಪಸ್ಥಿತರಿದ್ದರು.