ಗೋಣಿಕೊಪ್ಪಲು, ಮಾ. ೧೭: ಸಮಸ್ಯೆಗಳಿಗೆ ಇನ್ನೂ ಪರಿಹಾರ ಲಭಿಸಿಲ್ಲ. ಶತಮಾನದಿಂದಲೂ ಅರಣ್ಯ ಪ್ರದೇಶದಲ್ಲಿ ವಾಸವಿದ್ದರೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ.
ಅನೇಕ ಹೋರಾಟ ನಡೆಸಿದರೂ ಇಲ್ಲಿಯ ತನಕ ಅರಣ್ಯ ಹಕ್ಕು ಮಸೂದೆಯನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದೆ ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆದಿವಾಸಿಗಳು ಅಹೋರಾತ್ರಿ ಹೋರಾಟ ಆರಂಭಿಸಿದ್ದಾರೆ.
ಬಾಳೆಲೆ ಬಳಿಯ ಕುಂಬಾರಕಟ್ಟೆಯಿAದ ಪಾದಯಾತ್ರೆಯಲ್ಲಿ ಹೊರಟ ಪ್ರತಿಭಟನಾನಿರತರು ಗೋಣಿಗದ್ದೆ ಮೂಲಕ ನಾಗರಹೊಳೆ ರಾಷ್ಟಿçÃಯ ಉದ್ಯಾನ ಬಳಿಯಲ್ಲಿ ತಮ್ಮ ಪ್ರತಿಭಟನೆ ಮುಂದುವರಿಸಲಿದ್ದಾರೆ. ಪ್ರತಿಭಟನೆಯಲ್ಲಿ ಬುಡಕಟ್ಟು ಕೃಷಿಕರ ಸಂಘದ ಪ್ರಮುಖರಾದ ಜೆ.ಕೆ. ತಿಮ್ಮ, ಜೆ.ಕೆ.ಸೋಮಯ್ಯ, ಶಿವು, ಇನ್ನಿತರ ಪ್ರಮುಖ ನಾಯಕರು ಹಾಜರಿದ್ದರು.
ಪ್ರತಿಭಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧÀ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಹಾಗೂ ಪದಾಧಿಕಾರಿಗಳು ಭೇಟಿ ನೀಡಿ ಆದಿವಾಸಿಗಳ ಹೋರಾಟದ ಬಗ್ಗೆ ಮಾಹಿತಿ ಪಡೆದರು. ರೈತ ಸಂಘದ ಪದಾಧಿಕಾರಿಗಳಾದ ಚೆಟ್ರುಮಾಡ ಸುಜಯ್ ಬೋಪಯ್ಯ, ಪುಚ್ಚಿಮಾಡ ಸುಭಾಷ್, ಬಾಚಮಾಡ ಭವಿಕುಮಾರ್, ಆಲೆಮಾಡ ಮಂಜುನಾಥ್, ಚೆಟ್ಟಂಗಡ ಕಂಬ ಕಾರ್ಯಪ್ಪ, ಮಲ್ಚೀರ ಅಶೋಕ್, ಗಿರೀಶ್, ತೀತರಮಾಡ ರಾಜ, ದಾದ, ಪುಚ್ಚಿಮಾಡ ಸುನೀಲ್, ಗಣೇಶ್, ಮುಂತಾದವರು ಉಪಸ್ಥಿತರಿದ್ದರು.