ಮಡಿಕೇರಿ, ಮಾ. ೧೫: ಆಸ್ಟೆçÃಲಿಯಾದ ಸಿಡ್ನಿಯಲ್ಲಿ ಜರುಗಿದ ಅಂತರರಾಷ್ಟಿçÃಯ ಮಟ್ಟದ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಪದಕದ ಸಾಧನೆ ತೋರಿ ರಾಜ್ಯಕ್ಕೆ ಮರಳಿದ ಕೊಡಗಿನ ಮೂವರು ಹಿರಿಯ ಕ್ರೀಡಾಪಟುಗಳನ್ನು ಇಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ಫ್ಯಾಮ್ ಇಂಡಿಯಾ ಸಂಸ್ಥೆಯ ನಟರಾಜನ್ ಸೇರಿದಂತೆ ಇವರ ಕುಟುಂಬ ವರ್ಗದವರು, ಕ್ರೀಡಾಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಿ ಗೌರವಿಸಿದರು. ಕೊಡಗಿನವರಾದ ಪಾಲೆಕಂಡ ಬೋಪಯ್ಯ ಅವರು, ಜಾವಲಿನ್ ಥ್ರೋದಲ್ಲಿ ಪ್ರಥಮ, ೧೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನಗಳಿಸಿದರೆ, ಇವರ ಸಹೋದರ ಬೆಳ್ಳಿಯಪ್ಪ ೧೦೦ ಮೀಟರ್ ಓಟದಲ್ಲಿ ತೃತೀಯ, ೧೫೦೦ ಮೀಟರ್ ನಡಿಗೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರೊಂದಿಗೆ ತೆರಳಿದ್ದ ಹಿರಿಯ ಮಹಿಳಾ ಕ್ರೀಡಾಪಟು ಮಾರಮಾಡ ಮಾಚಮ್ಮ ಅವರು ಕೂಡ ಜಾವಲಿನ್ ಥ್ರೋದಲ್ಲಿ ದ್ವಿತೀಯ ಸ್ಥಾನದೊಂದಿಗೆ ಪದಕಗಳಿಸಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.
ಭಾರತದಿAದ ಒಟ್ಟು ೯ ಮಂದಿ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು, ಇವರ ಪೈಕಿ ಕೊಡಗು ಜಿಲ್ಲೆಯಿಂದ ತೆರಳಿದ್ದ ಈ ಮೂವರು ಕ್ರೀಡಾಪಟುಗಳು ಪದಕದ ಸಾಧನೆ ತೋರಿರುವದು ಕ್ರೀಡಾ ಜಿಲ್ಲೆ ಖ್ಯಾತಿಯ ಕೊಡಗಿಗೂ ಹಿರಿಮೆ ತಂದಿದೆ.
ಪದಕ ಗಳಿಸಿದ ಈ ಕ್ರೀಡಾಪಟು ಗಳನ್ನು ಆಸ್ಟೆçÃಲಿಯಾದಲ್ಲಿರುವ ಜಿಲ್ಲೆಯ ಹಲವರು ಭೇಟಿ ಮಾಡಿ ಶುಭ ಕೋರಿದ್ದರು. ಜಿಲ್ಲೆಯವರಾದ ಚೆರಿಯಂಡ ನಿಕಂ, ಮಾರಮಾಡ ಚಂಗಪ್ಪ, ಕಂಜಿತAಡ ಪೂಣಚ್ಚ, ಪಾಲಿಬೆಟ್ಟದವರಾದ ಜೇಕಬ್ ಅವರುಗಳು ಹಿರಿಯ ಕ್ರೀಡಾ ತಾರೆಗಳನ್ನು ಭೇಟಿ ಮಾಡಿ ಉಪಚರಿಸಿ ಸಂತಸ ವ್ಯಕ್ತಪಡಿಸಿದರು.