ಮಡಿಕೇರಿ, ಮಾ. ೧೫: ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದ ಕಾವೇರಿ ಹಾಲ್‌ನಲ್ಲಿ ೯ ಮುಸ್ಲಿಂ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಲ್-ಅಮೀನ್ ಸಮಿತಿಯ ಮಹಾಪೋಷಕ ಹಾಗೂ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್, ಅಲ್-ಅಮೀನ್ ಸಮಿತಿಯು ಬಡ, ಅನಾಥರಾಗಿರುವ ೪೪೫ಕ್ಕೂ ಅಧಿಕ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ.

ಇದರಲ್ಲಿ ೪೩೦ಕ್ಕೂ ಅಧಿಕ ಸಂಖ್ಯೆಯಲ್ಲಿ ಕೊಡಗು ಜಿಲ್ಲೆಯ ಬಡ ಕುಟುಂಬದ ಹೆಣ್ಣು ಮಕ್ಕಳಾಗಿದ್ದಾರೆ.

ಕಳೆದ ಎರಡು ದಶಕಗಳಿಂದ ಅಲ್-ಅಮೀನ್ ಸಮಿತಿಯು ಬಡ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ರಮ ವನ್ನು ನಡೆಸುವುದರ ಮೂಲಕ, ಬಡ ಕುಟುಂಬಗಳ ಕಣ್ಣೀರೊರೆಸುವ ಕೆಲಸವನ್ನು ಮಾಡುತ್ತಾ ಬಂದಿದೆ.

ಈ ವರ್ಷ ೯ ಬಡ ಹೆಣ್ಣುಮಕ್ಕಳ ವಿವಾಹವನ್ನು ಯಶಸ್ವಿಯಾಗಿ ನಡೆಸಿ ಕೊಡಲಾಗಿದೆ ಎಂದು ಹೇಳಿದರು.

ಮುಖ್ಯ ಭಾಷಣ ಮಾಡಿದ, ಕೊಡಗು ಜಿಲ್ಲಾ ಎಸ್.ಕೆ.ಎಸ್. ಎಸ್.ಎಫ್. ಅಧ್ಯಕ್ಷ ಹಾಗೂ ಕುಶಾಲನಗರ ದಾರುಲ್ ಹುದಾ ಮದರಸ ಪ್ರಾಂಶುಪಾಲ ತಮ್ಲೀಖ್ ದಾರಿಮಿ, ಹೊಸ ಕನಸುಗಳೊಂದಿಗೆ ನವ ವಧು-ವರರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿಯವರು ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.

ಕಡು ಬಡತನದಲ್ಲಿ ಜೀವನ ನಡೆಸುತ್ತಿರುವ ಜಿಲ್ಲೆಯ ಹೆಣ್ಣುಮಕ್ಕಳ ವಿವಾಹವನ್ನು ಕಳೆದ ಎರಡು ದಶಕ ಗಳಿಂದ ಅಲ್-ಅಮೀನ್ ಸಮಿತಿಯ ವರು ನೆರವೇರಿಸಿಕೊಟ್ಟಿದ್ದಾರೆ. ಬಡತನದಲ್ಲಿ ಜೀವನ ಸಾಗಿಸುತ್ತಿರುವ ಪೋಷಕರು ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಡಲು ಕಷ್ಟಪಡುವುದನ್ನು ಕಂಡು, ಕೊಡಗು ಜಿಲ್ಲೆಯಲ್ಲಿ ಅಲ್-ಅಮೀನ್ ಸಮಿತಿಯವರು ಬಡ ಕುಟುಂಬದ ಹೆಣ್ಣುಮಕ್ಕಳ ದಾಂಪತ್ಯ ಜೀವನ ನಡೆಸಲು ದಾರಿ ಮಾಡಿಕೊಟ್ಟಿದ್ದಾರೆ. ಇವರ ಸೇವಾ ಕಾರ್ಯಕ್ಕೆ ಇಡೀ ಜಿಲ್ಲೆಯ ಜನರು ಕೈಜೋಡಿಸಬೇಕಾಗಿದೆ ಎಂದು ತಮ್ಲೀಖ್ ದಾರಿಮಿ ಹೇಳಿದರು.

ಕೊಡಗು ಜಿಲ್ಲೆಯ ನಾಯಿಬ್ ಖಾಝಿಗಳಾದ ಎಂ.ಎA. ಅಬ್ದುಲ್ಲಾ ಫೈಜಿ ಎಡಪಾಲ, ಶಾದುಲಿ ಫೈಝಿ ಕೊಂಡAಗೇರಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ವಧು-ವರರಿಗೆ ಶುಭ ಕೋರಿದರು.

ಸಯ್ಯದ್ ಅಲ್ ಹೈದ್ರೋಸಿ ಶರ್ಫುದ್ದೀನ್ ತಂಙಳ್ ವೇಣೂರು ಪ್ರಾರ್ಥನೆ ನೆರವೇರಿಸಿ, ನಿಖ್ಹಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಅಲ್-ಅಮೀನ್ ಸಮಿತಿಯ ಅಧ್ಯಕ್ಷ ಬಿ.ಎಚ್. ಅಹಮದ್, ಅಲ್-ಅಮೀನ್ ಮಾಜಿ ಅಧ್ಯಕ್ಷ ಬಿ.ಎಚ್. ಮುಹಮ್ಮದ್, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಮೀನ್ ಮೊಹಸ್ಸೀನ್, ಬಾಪೂ ಹಾಜಿ ಕೊಡಗರಹಳ್ಳಿ, ಉಸ್ಮಾನ್ ಫೈಝಿ, ಎಂ.ಎA. ಮಸೀದಿ ಖತೀಬರಾದ ಹಮೀದ್ ಮದನಿ, ಸಯ್ಯದ್ ಖಾತಿಮ್ ತಂಙಳ್, ಶಂಶುಲ್ ಉಲಮಾ ಟ್ರಸ್ಟ್ ಅಧ್ಯಕ್ಷ ಬಶೀರ್ ಹಾಜಿ ಇದ್ದರು. ಅಲ್ -ಅಮೀನ್ ಕೊಡಗು ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಎಂ.ಇ. ಮೊಹಮ್ಮದ್ ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರಧಾನ ಕಾರ್ಯದರ್ಶಿ ಎ.ಇ. ಮೊಹಿದೀನ್ ಸ್ವಾಗತಿಸಿ, ವಂದಿಸಿದರು.

(ಕೆ.ಎA ಇಸ್ಮಾಯಿಲ್ ಕಂಡಕರೆ)