ಗುಡ್ಡೆಹೊಸೂರು, ಮಾ. ೧೫: ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ತಾ. ೨೪ ರಿಂದ ೨೬ರ ತನಕ ಶ್ರೀ ವಿಷ್ಣುಮೂರ್ತಿ ದೈವ ಹಾಗೂ ಉಪದೈವಗಳ ಕಳಿಯಾಟ ನಡೆಯಲಿದೆ. ತಾ. ೨೪ ರಂದು ರಾತ್ರಿ ೮ ಗಂಟೆಗೆ ಕಳಿಯಾಟಕ್ಕೆ ಕೂಡುವುದು. ರಾತ್ರಿ ೯.೩೦ಕ್ಕೆ ಶ್ರೀ ವಯನಾಟ್ ಕುಲವನ್ ದೈವಸ್ಥಾನದಿಂದ ಕಲಶ ತರುವುದು. ೧೦ ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವ ಮತ್ತು ಗುರುಕಾರೋಣರ ದೈವ ಕೋಲ ನಡೆಯಲಿದೆ. ತಾ. ೨೫ ರಂದು ಪೂರ್ವಾಹ್ನ ೮ ಗಂಟೆಗೆ ಶ್ರೀ ಪೋಟ್ಟ ದೈವ, ಅಪರಾಹ್ನ ೩ ಗಂಟೆಗೆ ರಕ್ತೇಶ್ವರಿ ದೈವ, ರಾತ್ರಿ ೮.೩೦ ರಿಂದ ಶ್ರೀ ವಿಷ್ಣುಮೂರ್ತಿ, ಶ್ರೀಧರ್ಮದೈವ, ಶ್ರೀ ಪಾಷಾಣಮೂರ್ತಿ ದೈವ ಕೋಲ ಮತ್ತು ಹರಕೆ-ಪ್ರಸಾದ ನಂತರ ತುಲಾಭಾರ ಸೇವೆ ನಡೆಯಲಿದೆ. ತಾ. ೨೬ ರ ರಾತ್ರಿ ೮ ಗಂಟೆಯಿAದ ಮೂರು ದೈವಗಳ ಕೋಲ ನಡೆಯಲಿದೆ. ತಾ. ೨೭ರ ಬೆಳಿಗ್ಗೆ ೮ ಗಂಟೆಯಿAದ ಪಂಜುರ್ಲಿ ದೈವ ಕೋಲ ನಡೆಯಲಿದೆ. ಮೂರು ದಿನಗಳ ಕಾಲ ದೈವಸ್ಥಾನದಲ್ಲಿ ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ ಎಂದು ಕೆ.ಎಲ್. ರಾಮಣ್ಣ, ವಿಶ್ವನಾಥ ಗೌಡ ಅವರು ತಿಳಿಸಿದ್ದಾರೆ.