ಹೆಲಿಕಾಪ್ಟರ್ ಪತನ-ಇಬ್ಬರು ಪೈಲೆಟ್‌ಗಳ ಸಾವು

ಅರುಣಾಚಲ ಪ್ರದೇಶ, ಮಾ. ೧೬: ಅರುಣಾಚಲ ಪ್ರದೇಶದ ಬೊಮ್ಡಿಲಾ ಬಳಿ ಪತನಗೊಂಡಿದ್ದ ಭಾರತೀಯ ಸೇನಾಯ ‘ಚೀತಾ' ಹೆಲಿಕಾಪ್ಟರ್‌ನ ಇಬ್ಬರು ಪೈಲೆಟ್‌ಗಳು ಮೃತಪಟ್ಟಿದ್ದಾರೆ. ಚೀತಾ ಹೆಲಿಕಾಪ್ಟರ್ ಇಂದು ಬೆಳಿಗ್ಗೆ ೯.೧೫ರ ಸುಮಾರಿಗೆ ಕಾರ್ಯಾಚರಣೆ ಹಾರಾಟ ಪ್ರಾರಂಭಿಸಿತ್ತು. ಸ್ವಲ್ಪ ಸಮಯದ ನಂತರ ಹೆಲಿಕಾಪ್ಟರ್ ಸಂಪರ್ಕವನ್ನು ಕಳೆದುಕೊಂಡಿತು. ನಂತರ ಬೋಮ್ಡಿಲಾ ಪಶ್ಚಿಮದ ಮಂಡ್ಲಾ ಬಳಿ ಪತನಗೊಂಡಿತ್ತು. ಮೃತ ಪೈಲಟ್‌ಗಳನ್ನು ಲೆಫ್ಟಿನೆಂಟ್ ಕರ್ನಲ್ ವಿವಿಬಿ ರೆಡ್ಡಿ ಮತ್ತು ಮೇಜರ್ ಜಯಂತ್ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಯಾವುದೇ ಸಿಗ್ನಲ್ ಸಿಗುವುದಿಲ್ಲ. ಇಲ್ಲಿ ಹವಾಮಾನವು ಅತ್ಯಂತ ಮಂಜಿನಿAದ ಕೂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಚೀತಾ ಹೆಲಿಕಾಪ್ಟರ್ ಬಲಿಯಾಗುತ್ತಿರುವುದು ಇದೇ ಮೊದಲಲ್ಲ. ೨೦೨೨ರ ಅಕ್ಟೋಬರ್‌ನಲ್ಲಿ ತವಾಂಗ್‌ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು. ಅಂದು ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರು ಪೈಲಟ್‌ಗಳ ಪೈಕಿ ಒಬ್ಬರು ಸಾವನ್ನಪ್ಪಿದರು. ಪೈಲಟ್ ಕರ್ನಲ್ ಸೌರಭ್ ಯಾದವ್ ಅವರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದರು.

‘ಅವಕಾಶ ನೀಡಿದರೆ ಸಂಸತ್ತಿನಲ್ಲಿ ಮಾತನಾಡುವೆ’

ನವದೆಹಲಿ, ಮಾ. ೧೬: ವಿದೇಶದಿಂದ ವಾಪಸ್ಸಾದ ಬಳಿಕ ಗುರುವಾರ ಸಂಸತ್ ಭವನಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲಂಡನ್ ಪ್ರವಾಸದ ವೇಳೆ ಭಾರತ ಅಥವಾ ಸಂಸತ್ತಿನ ವಿರುದ್ಧವಾಗಿ ನಾನು ಏನನ್ನೂ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಸಭಾಪತಿ ಅವಕಾಶ ನೀಡಿದರೆ ಸಂಸತ್ತಿನಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು. ಅವರು ನನಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಿದರೆ, ನಂತರ ನನ್ನ ಅನಿಸಿಕೆಗಳನ್ನು ನಾನು ಹೇಳುತ್ತೇನೆ. ಸಂಸತ್ತಿನ ಒಳಗೆ ಮಾತನಾಡುವುದು ಬಿಜೆಪಿಗೆ ಇಷ್ಟವಾಗುವುದಿಲ್ಲ. ಅವಕಾಶ ನೀಡದಿದ್ದರೆ ಸಂಸತ್ತಿನ ಹೊರಗೆ ಮಾತನಾಡುವುದಾಗಿ ಅವರು ಸಂಸತ್ತಿನಿAದ ಹೊರಡುವಾಗ ಸುದ್ದಿಗಾರರಿಗೆ ತಿಳಿಸಿದರು. ಇಂಗ್ಲೆAಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಭಾರತೀಯ ಪ್ರಜಾಪ್ರಭುತ್ವದ ರಚನೆಗಳು ದಾಳಿಗೆ ಒಳಗಾಗುತ್ತಿವೆ ಮತ್ತು ದೇಶದ ಸಂಸ್ಥೆಗಳ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ನಡೆಯುತ್ತಿದೆ. ಭಾರತೀಯ ಪ್ರಜಾಪ್ರಭುತ್ವದ ರಚನೆಗಳು ಕ್ರೂರ ದಾಳಿಗೆ ಒಳಗಾಗಿವೆ ಮತ್ತು ದೇಶದ ಸಂಸ್ಥೆಗಳ ಮೇಲೆ ಪೂರ್ಣ ಪ್ರಮಾಣದ ದಾಳಿ ನಡೆದಿದೆ. ಅಮೆರಿಕ ಮತ್ತು ಯುರೋಪ್‌ನಂತಹ ಪ್ರಜಾಸತ್ತಾತ್ಮಕ ರಾಷ್ಟçಗಳು ಇದನ್ನು ಗಮನಿಸುವಲ್ಲಿ ವಿಫಲವಾಗಿವೆ ಎಂದು ರಾಹುಲ್ ಆರೋಪಿಸಿದ್ದಾರೆ.

ರಷ್ಯಾದ ಯುದ್ಧ ವಿಮಾನ, ಅಮೆರಿಕದ ಡ್ರೋನ್ ಮುಖಾಮುಖಿ

ನವದೆಹಲಿ, ಮಾ. ೧೬: ರಷ್ಯಾದ ಯುದ್ಧ ವಿಮಾನ ಮತ್ತು ಅಮೆರಿಕದ ಡ್ರೋನ್ ನಡುವಿನ ಮುಖಾಮುಖಿಯ ಸುದ್ದಿಯ ವೀಡಿಯೋವೊಂದು ಇದೀಗ ಹೊರಬಿದ್ದಿದೆ. ತಾ. ೧೪ ರಂದು ಕಪ್ಪು ಸಮುದ್ರದ ಮೇಲೆ ಯುಎಸ್ ಡ್ರೋನ್ ಮತ್ತು ರಷ್ಯಾದ ಯುದ್ಧ ವಿಮಾನ ಮುಖಾಮುಖಿಯಾಗಿದ್ದು ಈ ವೇಳೆ ಡ್ರೋನ್ ಮೇಲೆ ರಷ್ಯಾದ ಜೆಟ್ ಇಂಧನ ಸುರಿಯುತ್ತಿರುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದನ್ನು ಅಮೆರಿಕಾ ಇದೀಗ ಬಿಡುಗಡೆ ಮಾಡಿದೆ. ಈ ಘರ್ಷಣೆಯಲ್ಲಿ ಒಕಿ-೯ ಡ್ರೋನ್ ಕಪ್ಪು ಸಮುದ್ರಕ್ಕೆ ಬಿದ್ದಿತ್ತು. ಈ ಸಂಬAಧ ಅಮೆರಿಕಾ ರಷ್ಯಾ ವಿರುದ್ಧ ಆರೋಪ ಮಾಡಿದ್ದು ಅಸುರಕ್ಷಿತ ಮತ್ತು ವೃತ್ತಿಪರವಲ್ಲದ ಪ್ರತಿಬಂಧದ ಎಂದು ಕಳವಳ ವ್ಯಕ್ತಪಡಿಸಿತ್ತು. ಅಲ್ಲದೆ ತನ್ನ ಡ್ರೋನ್ ಅಂರ‍್ರಾಷ್ಟಿçÃಯ ವಾಯುಪ್ರದೇಶದಲ್ಲಿದ್ದು ಅದು ಬೇರೆ ಯಾವುದೇ ದೇಶದ ಗಡಿಯನ್ನು ಉಲ್ಲಂಘಿಸಿಲ್ಲ ಎಂದು ಯುಎಸ್ ಮಿಲಿಟರಿ ಹೇಳಿತ್ತು. ಮತ್ತೊಂದೆಡೆ, ಈ ಪ್ರದೇಶದ ಮೇಲೆ ಬೇಹುಗಾರಿಕೆ ನಡೆಸುತ್ತಿರುವಾಗ ಡ್ರೋನ್ ಅನ್ನು ನಾಶ ಮಾಡಲು ಪ್ರಯತ್ನಿಸಲಿಲ್ಲ ಎಂದು ರಷ್ಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದು ಡ್ರೋನ್ ಯುದ್ಧವನ್ನು ಅಭ್ಯಾಸ ಮಾಡುತ್ತಿರುವುದು ಕಂಡುಬAದಿದ್ದು, ಈ ಪ್ರಯತ್ನದಲ್ಲಿ ಅದು ನೀರಿನ ಮೇಲ್ಮೈಗೆ ಡಿಕ್ಕಿ ಹೊಡೆದಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ನಮ್ಮ ವಿಮಾನಗಳು ಅಮೆರಿಕದ ಡ್ರೋನ್‌ಗೆ ಬಡಿದಿಲ್ಲ, ನಾವು ಯಾವುದೇ ರೀತಿಯ ಶಸ್ತಾçಸ್ತಾçಗಳನ್ನು ಬಳಸಿಲ್ಲ ಎಂದು ಸಚಿವಾಲಯ ಹೇಳಿದೆ.

ಉಪಗ್ರಹಗಳ ಉಡಾವಣೆಗೆ ಸಿದ್ಧತೆ

ನವದೆಹಲಿ, ಮಾ. ೧೬: ಒನ್‌ವೆಬ್ ಅಭಿವೃದ್ಧಿಪಡಿಸಿರುವ ೩೬ ಉಪಗ್ರಹಗಳನ್ನು ತಾ. ೨೬ ರಂದು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧವಾಗಿದೆ. ಬ್ರಿಟನ್ ಮೂಲದ ನೆಟ್‌ವರ್ಕ್ ಆಕ್ಸೆಸ್ ಅಸೋಸಿಯೇಟೆಡ್ ಲಿ(ಒನ್‌ವೆಬ್)ಅನ್ನು ಭಾರತದ ಟೆಲಿಕಾಂ ಪ್ರಮುಖ ಭಾರ್ತಿ ಗ್ರೂಪ್ ಬೆಂಬಲಿಸುತ್ತದೆ. ತಾ. ೨೬ ರಂದು ಉಪಗ್ರಹಗಳ ಯಶಸ್ವಿ ಉಡಾವಣೆಯೊಂದಿಗೆ, ಕಂಪೆನಿಯು ತನ್ನ ಉeಟಿ ೧ ಸಮೂಹದ ಜಾಗತಿಕ ಹೆಜ್ಜೆಗುರುತನ್ನು ಪೂರ್ಣಗೊಳಿಸುತ್ತದೆ. ಒನ್‌ವೆಬ್ ಅದಾಗಲೇ ಕಕ್ಷೆಯಲ್ಲಿ ೫೮೨ ಉಪಗ್ರಹಗಳನ್ನು ಹೊಂದಿದೆ. ತಾ. ೨೬ ರಂದು ೩೬ ಉಪಗ್ರಹ ಉಡಾವಣೆಯೊಂದಿಗೆ ಒಟ್ಟು ಸಂಖ್ಯೆ ೬೧೮ಕ್ಕೆ ಏರಿಕೆಯಾಗಲಿದೆ. ೩೬ ಉಪಗ್ರಹಗಳ ಎರಡನೇ ಬ್ಯಾಚ್ ಅನ್ನು ಭಾರತೀಯ ಕಾಲಮಾನ ತಾ. ೨೬ ರಂದು ಬೆಳಿಗ್ಗೆ ೯ ಗಂಟೆಗೆ ಇಸ್ರೋ ರಾಕೆಟ್ ಐಗಿಒ೩ ಉಡಾವಣೆ ಮಾಡಲಿದೆ. ಇದಕ್ಕೂ ಮೊದಲು ೧೮ ಉಪಗ್ರಹಗಳ ಮೊದಲ ಬ್ಯಾಚ್ ಅನ್ನು ೨೦೨೨ರ ಅಕ್ಟೋಬರ್ ೨೩ ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ರಾಕೆಟ್‌ನೊಂದಿಗೆ ಉಡಾವಣೆ ಮಾಡಲಾಗಿತ್ತು.

ಬಿ.ಎಸ್. ಯಡಿಯೂರಪ್ಪ ಅವರಿಗೆ ಘೇರಾವ್

ಮೂಡಿಗೆರೆ, ಮಾ. ೧೬: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಇಂದು ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ವೇಳೆಯಲ್ಲಿ ದೊಡ್ಡ ಹೈಡ್ರಾಮವೇ ನಡೆಯಿತು. ಶಾಸಕ ಎಂ.ಪಿ. ಕುಮಾರಸ್ವಾಮಿಗೆ ಈ ಬಾರಿ ಟಿಕೆಟ್ ನೀಡದಂತೆ ಒತ್ತಾಯಿಸಿ ಪಕ್ಷದ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಘೇರಾವ್ ಹಾಕಿದರು. ಎಂ.ಪಿ. ಕುಮಾರಸ್ವಾಮಿ ವಿರುದ್ಧ ಭಿತ್ತಿಪತ್ರ ಹಿಡಿದು ಘೋಷಣೆ ಕೂಗಿದ ಕಾರ್ಯಕರ್ತರು, ಯಾವುದೇ ಕಾರಣಕ್ಕೂ ಎಂ.ಪಿ. ಕುಮಾರಸ್ವಾಮಿಗೆ ಬಿಜೆಪಿ ಟಿಕೆಟ್ ನೀಡದಂತೆ ಒತ್ತಾಯಿಸಿದರು. ಈ ಹೈಡ್ರಾಮದಿಂದ ಬೇಸರಗೊಂಡ ಯಡಿಯೂರಪ್ಪ ರೋಡ್ ಶೋ ರದ್ದುಗೊಳಿಸಿದರು. ನಂತರ ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಭಿತ್ತಪತ್ರ ಹಿಡಿಯದಂತೆ, ಘೋಷಣೆ ಕೂಗದಂತೆ ತಾಕೀತು ಮಾಡಿದ ನಂತರ ಕಾರ್ಯಕರ್ತರು ಸುಮ್ಮನಾದರು.

ಕೋಲ್ಡ್ ಸ್ಟೋರೇಜ್ ಕುಸಿತ-ಕಾರ್ಮಿಕರು ಸಿಲುಕಿರುವ ಶಂಕೆ

ಸAಭಾಲ್, ಮಾ. ೧೬: ಸಂಭಾಲ್ ಜಿಲ್ಲೆಯಲ್ಲಿ ಗುರುವಾರ ಕೋಲ್ಡ್ ಸ್ಟೋರೇಜ್ ಕುಸಿದು ಬಿದ್ದಿದ್ದು, ೨೦ಕ್ಕೂ ಹೆಚ್ಚು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ವರದಿಗಳ ಪ್ರಕಾರ, ಈ ಘಟನೆಯು ಚಂದೌಸಿಯ ಮಾವಾಯಿ ಗ್ರಾಮದ ಕೋಲ್ಡ್ ಸ್ಟೋರೇಜ್‌ನಲ್ಲಿ ನಡೆದಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳೊAದಿಗೆ ತಕ್ಷಣ ಸ್ಥಳಕ್ಕೆ ತಲುಪುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಟ್ಟಡ ಕುಸಿತದ ನಂತರ ಅಮೋನಿಯಾ ಅನಿಲ ಸೋರಿಕೆಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಒಳಗೆ ಬಂದು ಸೋರಿಕೆಯನ್ನು ತಡೆದಿದ್ದಾರೆ ಎಂದು ವರದಿಯಾಗಿದೆ. ಏಳರಿಂದ ಎಂಟು ಜೆಸಿಬಿ ಯಂತ್ರಗಳು ಅವಶೇಷಗಳನ್ನು ತೆರವುಗೊಳಿಸಲು ಮತ್ತು ಅದರ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ಕೆಲಸ ಮಾಡುತ್ತಿವೆ.

ಸಾರಿಗೆ ಇಲಾಖೆ ಸಿಬ್ಬಂದಿ ವೇತನ ಪರಿಷ್ಕರಣೆ

ಬೆಂಗಳೂರು, ಮಾ. ೧೬: ಸಾರಿಗೆ ಇಲಾಖೆ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬAಧ ಗುರುವಾರ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಶೇ. ೧೫ ರಷ್ಟು ವೇತನ ಹೆಚ್ಚಳ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದ ೨೭ ವರ್ಷಗಳಲ್ಲಿ ಅತ್ಯಧಿಕ ವೇತನ ಪರಿಷ್ಕರಣೆಯನ್ನು ನಮ್ಮ ಸರ್ಕಾರ ಈಗ ಮಾಡಿದೆ ಎಂದು ಹೇಳಿದ್ದಾರೆ. ಈ ನಿರ್ಧಾರದಿಂದ ರಾಜ್ಯದ ಎಲ್ಲ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಅಂದಾಜು ರೂ. ೫೫೦ ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.