ಕೂಡಿಗೆ, ಮಾ. ೧೫: ಇತ್ತೀಚೆಗೆ ಪ್ರೀತಿಸಿ ವಿವಾಹವಾಗಿದ್ದ ಯುವತಿ ಮೃತಪಟ್ಟಿದ್ದು, ಮೃತಳ ಪತಿ ಹಾಗೂ ಆತನ ಪೋಷಕರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಹೆಬ್ಬಾಲೆ ಗ್ರಾ.ಪಂ. ವ್ಯಾಪ್ತಿಯ ೬ನೇ ಹೊಸಕೋಟೆ ಗ್ರಾಮದ ರಾಜು ಎಂಬವರ ಪುತ್ರಿ ಅಕ್ಷಿತಾ (೧೮) ಹಾಗೂ ಅದೇ ಗ್ರಾಮದ ದಶರಥ ಹಾಗೂ ಗಿರಿಜಾ ಎಂಬವರ ಪುತ್ರ ಹೇಮಂತ್ ಪರಸ್ಪರ ಪ್ರೀತಿಸುತ್ತಿದ್ದು ಕಳೆದ ಮೂರು ದಿನಗಳ ಹಿಂದೆ ದೇವಸ್ಥಾನಕ್ಕೆ ತೆರಳಿ ವಿವಾಹವಾಗಿದ್ದಾರೆ. ಬಳಿಕ ಇಬ್ಬರೂ ಕೂಡ ಹೇಮಂತ್ ಮನೆಗೆ ಆಗಮಿಸಿದ್ದಾರೆ. ಮಂಗಳವಾರ ವಿವಾಹಿತೆ ಅಕ್ಷಿತಾ ದಿಢೀರನೆ ಮೃತಪಟ್ಟಿದ್ದಾಳೆ ಎಂದು ಆಕೆಯ ಪತಿ ಹೇಮಂತ್ ಮೃತಳ ಮನೆಯವರಿಗೆ ಮಾಹಿತಿ ನೀಡಿದ್ದಾನೆ. ಮನೆಯವರು ಪರಿಶೀಲನೆ ನಡೆಸಿದ ಸಂದರ್ಭ ಮೃತಳ ಹೊಟ್ಟೆಯ ಕೆಳಭಾಗದಿಂದ ತೀವ್ರ ರಕ್ತಸ್ರಾವವಾಗುತ್ತಿರುವುದು ಕಂಡುಬAದಿದೆ. ಇದು ಸಹಜ ಸಾವಲ್ಲ, ಕೊಲೆ ಎಂದು ಆರೋಪಿಸಿರುವ ಮೃತಳ ತಂದೆ ರಾಜು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪತಿ ಹೇಮಂತ್, ಮಾವ ದಶರಥ ಹಾಗೂ ಅತ್ತೆ ಗಿರಿಜಾ ಎಂಬವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ತಹಶೀಲ್ದಾರ್ ಟಿ.ಎಂ. ಪ್ರಕಾಶ್ ಸಮ್ಮುಖದಲ್ಲಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಹೆಚ್ಚಿನ ಪರೀಕ್ಷೆಗೆ ಮೃತದೇಹವನ್ನು ಮಡಿಕೇರಿಗೆ ರವಾನಿಸಲಾಗಿದೆ.
ಕುಶಾಲನಗರ ಗ್ರಾಮಾಂತರ ಪೊಲೀಸರು ಮೂವರ ವಿರುದ್ಧ ಕೊಲೆ ಆರೋಪ, ಜಾತಿ ದೌರ್ಜನ್ಯ ನಿಂದನೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಇತ್ತ ಮೃತ ಅಕ್ಷಿತಾಳ ಪತಿ ಹೇಮಂತ್ ಕೂಡ ಮಂಗಳವಾರ ರಾತ್ರಿ ವಿಷ ಸೇವಿಸಿದ ಹಿನ್ನೆಲೆಯಲ್ಲಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ರವಾನಿಸಲಾಗಿದೆ.
ಪ್ರತಿಭಟನೆ
ಅಕ್ಷಿತಾಳ ಸಾವಿಗೆ ಸಂಬAಧಿಸಿದAತೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆAದು ಮೃತಳ ಪೋಷಕರು ಎಸ್ಡಿಪಿಐ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಎಸ್ಪಿ ಕೆ. ರಾಮರಾಜನ್ ಅವರು ಆರೋಪಿಗಳನ್ನು ಆದಷ್ಟು ಶೀಘ್ರವಾಗಿ ಬಂಧಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದುಕೊAಡರು.