ಮಡಿಕೇರಿ, ಮಾ. ೧೫: ದುರ್ಗಮವಾದ ಆಫ್ರಿಕಾದ ಕಿಲಿಮಂಜಾರೋ ಶಿಖರವನ್ನು ಯಶಸ್ವಿಯಾಗಿ ಏರುವ ಮೂಲಕ ಅಲ್ಲಿ ಭಾರತದ ಧ್ವಜ ಹಾರಿಸಿ ಕೊಡಗಿನ ಮಹಿಳೆಯೋರ್ವರು ಸಾಹಸ ಮೆರೆದಿದ್ದಾರೆ.
ಮೂಲತಃ ಜಿಲ್ಲೆಯವರಾದ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ವಕೀಲ ಜಮ್ಮಡ ಅಯ್ಯಣ್ಣ ಅವರ ಪತ್ನಿ ಪ್ರೀತ್ ಅಪ್ಪಯ್ಯ (ತಾಮನೆ ಕುಂಞಯAಡ) ಅವರು ಈ ಸಾಹಸ ತೋರಿದ್ದಾರೆ. ಈ ಹಿಂದಿನಿAದಲೂ ಸಾಹಸೀ ಮನೋಭಾವದ ಹವ್ಯಾಸ ಹೊಂದಿರುವ ಪ್ರೀತ್ ಅವರು ಕ್ರೌನ್ ಆಫ್ಟಾನ್ಜೇನಿಯಾ ಎಂದು ಕರೆಯಲ್ಪಡುವ ಕಿಲಿಮಂಜಾರೋ ಶಿಖರವನ್ನು ಮಾರ್ಚ್ ೮ರ ಮಹಿಳಾ ದಿನದಂದು ಏರುವ ಮೂಲಕ ಹೆಸರು ಮಾಡಿದ್ದಾರೆ. ದುರ್ಗಮವಾದ ಬೆಟ್ಟವನ್ನು ಇವರು ಒಬ್ಬಂಟಿಯಾಗಿ ಏರಿದ್ದಾರೆ. ಕಿಲಿಮಂಜಾರೋ ಮತ್ತು ಮೌಂಟ್ ಉಹುರು ಶಿಖರ ಆಫ್ರಿಕಾದ ಅತಿ ಎತ್ತರದ ಶಿಖರವಾಗಿದೆ. ಸಮುದ್ರ ಮಟ್ಟದಿಂದ ೫೮೯೫ ಮೀಟರ್ (೧೯,೩೪೧ ಅಡಿ) ಎತ್ತರವೇರಿದ ಇವರು ಅಲ್ಲಿ ಭಾರತದ ರಾಷ್ಟçಧ್ವಜವನ್ನು ಕೊಡವ ಸಾಂಪ್ರದಾಯಿಕ ಸೀರೆಯಲ್ಲಿ ಹಾರಿಸಿದ್ದಾರೆ. ಇದು ತಮ್ಮ ಮೊದಲ ಅಂತರರಾಷ್ಟಿçÃಯ ಚಾರಣವಾಗಿದ್ದು, ಹೆಮ್ಮೆಯ ಕ್ಷಣವಾಗಿತ್ತು ಎಂದು ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.
೨೦೧೭ರಲ್ಲಿ ಇವರಿಗೆ ನರದ ಸಮಸ್ಯೆ ಎದುರಾಗಿದ್ದು, ಮುಂದಿನ ದಿನಗಳಲ್ಲಿ ದುಸ್ಸಾಹಸ ಬಿಡುವಂತೆ ವೈದ್ಯರು ಸೂಚಿಸಿದ್ದರು. ಆದರೂ ಯೋಗ ಮತ್ತಿತರ ಚಟುವಟಿಕೆ ಮೂಲಕ ದೈಹಿಕ ಕ್ಷಮತೆ ಹೆಚ್ಚಿಸಿಕೊಂಡು ಇವರು ಈ ಸಾಧನೆ ತೋರಿದ್ದಾರೆ. ಪರ್ವತಾರೋಹಿಯಾಗಿರುವ ಪುತ್ರ ಆರ್ಯನ್ ಕುಟ್ಟಪ್ಪ ಹಾಗೂ ಮತ್ತೋರ್ವ ಪುತ್ರ ಪ್ರಥಮ್ ಪೂಣಚ್ಚ ಅವರ ಪ್ರೋತ್ಸಾಹ ಇದಕ್ಕೆ ಕಾರಣವಾಗಿದೆ. ಈ ಹಿಂದೆ ಹಿಮಾಲಯ ಸೇರಿದಂತೆ ಕೊಡಗಿನ ವಿವಿಧೆಡೆ ಚಾರಣ ನಡೆಸಿರುವುದಾಗಿ ಅವರು ಹೇಳಿದರು.
ಭಾರತದಿಂದ ಕಿಲಿಮಂಜಾರೋವನ್ನು ಈ ಬಾರಿ ಒಬ್ಬಳೇ ಏರಿರುವ ಬಗ್ಗೆ ಪ್ರೀತ್ ಹರ್ಷ ವ್ಯಕ್ತಪಡಿಸಿದರು. ಯೋಗ ಗುರು ಮಹಾದೇವ ಅವರಿಂದ ತರಬೇತಿ ಪಡೆದು ಈ ಸಾಹಸಕ್ಕೆ ಮುಂದಾಗಿದ್ದ ಇವರು ಪರ್ವತದ ಹಾದಿಯಲ್ಲಿ ಮಳೆಕಾಡು, ಮಂದಾರಹಟ್, ಮುರ್ಲ್ಯಾಂಡ್ನ ಅರಣ್ಯ ಪ್ರದೇಶಗಳ ಬೇಸ್ ಕ್ಯಾಂಪ್ ದಾಟಿ ಸತತ ೧೦ ಗಂಟೆಗಳ ನಡಿಗೆಯೊಂದಿಗೆ ಕಿಲಿಮಂಜಾರೋದ ಎತ್ತರವನ್ನೇರಿದ್ದಾರೆ.
ಇವರು ಜಿಲ್ಲೆಯ ಆನಂದಪುರದವರಾದ ಹಾನರರಿ ಕ್ಯಾಪÀ್ಟನ್ ದಿ. ಕುಂಞಯAಡ ಅಪ್ಪಯ್ಯ ಹಾಗೂ ಗೌರಮ್ಮ ದಂಪತಿ ಪುತ್ರಿ. ಇವರ ಸಹೋದರ ಮಾಚಯ್ಯ (ಮಾಚು) ಅವರು ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿದ್ದಾರೆ.