*ಗೋಣಿಕೊಪ್ಪ, ಮಾ. ೧೫: ಗೋಣಿಕೊಪ್ಪದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ಹಿನ್ನೆಲೆ ಪಟ್ಟಣವನ್ನು ಅಲಂಕಾರ ಮಾಡುವ ತರಾತುರಿಯಲ್ಲಿ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಅಂಟಿಸಿದ ಕಂಬದಲ್ಲಿ ಮುಖ್ಯಮಂತ್ರಿಗಳ ಕಟೌಟ್ ನೇತು ಹಾಕಲಾಗಿದೆ ಹೊರತು ಯಾವುದೇ ದುರುದ್ದೇಶ ಇಟ್ಟು ಮಾಡಿದ ಕೃತ್ಯವಲ್ಲ ಎಂದು ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತೀಯ ಜನತಾ ಪಕ್ಷ ನಮ್ಮ ದೇಶದ ಸಂವಿಧಾನವನ್ನು ಅಪಾರವಾಗಿ ಗೌರವಿಸುತ್ತದೆ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ದಿಟ್ಟವಾಗಿ ಪ್ರೇಮಿಸುತ್ತದೆ. ಸ್ವಾತಂತ್ರ÷್ಯ ಹೋರಾಟಗಾರರನ್ನು ಮತ್ತು ದೇಶಭಕ್ತಿಯನ್ನು ಎದೆಯೊಳಗೆ ಬಿತ್ತಿಕೊಂಡು ಉಸಿರಾಡುತ್ತಿರುವ ಏಕೈಕ ರಾಷ್ಟಿçÃಯ ಪಕ್ಷ ಎಂದರೆ ಅದು ಭಾರತೀಯ ಜನತಾ ಪಕ್ಷವಾಗಿದೆ. ಇಂತಹ ಪಕ್ಷ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅಗೌರವದಿಂದ ಕಂಡಿದೆ ಎಂಬುದು ಕಪೋಲಕಲ್ಪಿತವಾಗಿದೆ ಎಂದು ಹೇಳಿದ್ದಾರೆ.

ವಿಜಯ ಸಂಕಲ್ಪ ಯಾತ್ರೆಯಲ್ಲಿ ನೆರೆದ ಕಾರ್ಯಕರ್ತರನ್ನು ಕಂಡು ಅರಗಿಸಿಕೊಳ್ಳಲಾಗದ ವಿರೋಧಿಗಳು ಈ ರೀತಿಯ ಹುನ್ನಾರದ ಅಸ್ತçವನ್ನು ಹರಿಯ ಬಿಟ್ಟಿದ್ದಾರೆ. ಇಂತಹ ಸುಳ್ಳು ವದಂತಿಗಳಿಗೆ ದಲಿತ ಸಂಘರ್ಷ ಸಮಿತಿಗಳು ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.