ವೀರಾಜಪೇಟೆ, ಮಾ. ೧೩: ಇತಿಹಾಸ ಪ್ರಸಿದ್ಧ ಬೊಟ್ಟಿಯತ್ ನಾಡ್ ಈಶ್ವರ ದೇವರ ವಾರ್ಷಿಕೋತ್ಸವ ತಾ. ೧೫ ಹಾಗೂ ೧೬ ರಂದು ನಡೆಯಲಿದೆ ಎಂದು ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ತಿಳಿಸಿದ್ದಾರೆ.

ಪೊನ್ನಂಪೇಟೆ ತಾಲೂಕು ಕುಂದ ಮುಗುಟಗೇರಿ ಗ್ರಾಮದಲ್ಲಿರುವ ಆರು ಗ್ರಾಮಗಳಿಗೆ ಸೇರಿದ ನಾಡ್ ದೇವಸ್ಥಾನ ಅಥವಾ ಈಶ್ವರ ದೇವಸ್ಥಾನಕ್ಕೆ ಶತಶತಮಾನಗಳ ಇತಿಹಾಸವಿದ್ದು, ಇದರ ವಾರ್ಷಿಕ ಉತ್ಸವ ಈಗಾಗಲೇ ತಾ. ೮ ರಂದು ಸಂಜೆ ಕೊಡಿಮರ ನಿಲ್ಲಿಸುವುದರ ಮೂಲಕ ಆರಂಭಗೊAಡಿದ್ದು, ತಾ. ೧೫ ರಂದು ನೆರ್ಪು ಹಾಗೂ ತಾ. ೧೬ ರಂದು ದೇವರ ಅವಭೃತ ಸ್ಥಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕುಂದಾ, ಮುಗುಟಿಗೇರಿ, ಈಚೂರು, ಹುದೂರು, ಹಳ್ಳಿಗಟ್ಟು, ಅರ್ವತೋಕ್ಲು ಈ ಆರು ಗ್ರಾಮಗಳಿಗೆ ಸೇರಿರುವ ನಾಡ್ ದೇವಸ್ಥಾನದಲ್ಲಿ (ಕುಂದಾ ಬೆಟ್ಟದ ಕೆಳಗಿರುವ ಈಶ್ವರ ದೇವಸ್ಥಾನ) ತಾ. ೮ ರಿಂದ ಪ್ರತಿನಿತ್ಯ ಮುಂಜಾನೆ ಮತ್ತು ಸಂಜೆ ಉತ್ಸವ ಮೂರ್ತಿ ಹೊರಗೆ ಬರುವ ಮೂಲಕ ವಿಶೇಷ ಪೂಜೆ ಸೇರಿದಂತೆ ಮಧ್ಯಾಹ್ನ ಮತು

್ತ ಸಂಜೆ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ತಾ. ೧೩ ಹಾಗೂ ೧೪ ರಂದು ಬೆಳಿಗ್ಗೆ ಮತ್ತು ರಾತ್ರಿ ವಿಶೇಷ ಪೂಜೆಯ ಜೊತೆಗೆ ಮಧ್ಯಾಹ್ನ ವಿಶೇಷ ‘ಹರಕೆ ಬೊಳಕ್’ ಪೂಜೆ ಏರ್ಪಡಿಸಲಾಗಿದೆ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕೂಡ ಇರುತ್ತದೆ.