*ಗೋಣಿಕೊಪ್ಪ, ಮಾ. ೧೩: ಅಂತರರಾಷ್ಟಿçÃಯ ಮಹಿಳಾ ದಿನಚಾರಣೆ ಅಂಗವಾಗಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕ ಮಹಾ ಸಂಸ್ಥೆ ಗೋಣಿಕೊಪ್ಪದ ರಶ್ಮಿ ಭಾನುಪ್ರಕಾಶ್ ಅವರಿಗೆ ೨೦೨೩ನೇ ಸಾಲಿನ ಕೊಡಗು ಜಿಲ್ಲಾ ಮಹಿಳಾ ಸಾಧಕಿ ಎಂಬ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬೆಂಗಳೂರಿನ ಎಂ.ವಿ ಸಭಾಂಗಣದಲ್ಲಿ ನಡೆದ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಐಎಸ್‌ಆರ್‌ಒ ಸಂಸ್ಥೆಯ ನಿವೃತ್ತ ನಿರ್ದೇಶಕಿ ಡಾ. ಟಿ.ಕೆ. ಅನುರಾಧ, ಮೈಕ್ರೊಸಾಫ್ಟ್ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐರಿನ್ ಫೋಸ್, ಅಧಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ತೇಜಶ್ವಿನಿ ಅನಂತ್‌ಕುಮಾರ್, ಐಎಎಫ್ ಸ್ನೇಹ ಶೇಖ್‌ವತ್, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿವಿ ಗೋಪಾಲ ರೆಡ್ಡಿ, ಹಿರಿಯ ಉಪಾಧ್ಯಕ್ಷರುಗಳಾದ ರಮೇಶ್ ಚಂದ್ರ ಲಹೋಟಿ, ಎಂ.ಜಿ. ಬಾಲಕೃಷ್ಣ ಮತ್ತು ಇತರ ಮುಖ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.