ಮಡಿಕೇರಿ, ಮಾ. ೧೩: ಮಡಿಕೇರಿ ಸನಿಹದ ಭಗವತಿ ನಗರದಲ್ಲಿರುವ ಕರವಲೆ ಭಗವತಿ ಮಹಿಷ ಮರ್ಧಿನಿ ದೇವಾಲಯದ ವಾರ್ಷಿಕ ಹಬ್ಬ ತಾ. ೧೪ ರಿಂದ (ಇಂದಿನಿAದ) ತಾ. ೧೭ ರವರೆಗೆ ನಡೆಯಲಿದೆ.

ತಾ. ೧೪ ರಂದು (ಇಂದು) ಸಂಜೆ ೭ ಗಂಟೆಗೆ ಕೊಡಿಮರ ನಿಲ್ಲಿಸುವುದು, ರಾತ್ರಿ ೮ ಗಂಟೆಗೆ ಅಂದಿಬೆಳಕು ಮಹಾಪೂಜೆ ನೆರವೇರಲಿದೆ. ತಾ. ೧೫ ರಂದು ಬೆಳಿಗ್ಗೆ ೬ ಗಂಟೆಯಿAದ ಮಡಿಬೆಳಕು, ಅಭಿಷೇಕ ಸೇವೆ, ಕುಂಕುಮ, ತುಳಸಿ ಅರ್ಚನೆ, ನೈವೇದ್ಯಸೇವೆ ಬಳಿಕ ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ ನೆರವೇರಲಿದೆ.

ಸಂಜೆ ೭ ಗಂಟೆಗೆ ತೂಚಂಬಲಿ ಹಾಗೂ ಮಹಾಪೂಜೆ ನಡೆಯಲಿದೆ. ತಾ. ೧೬ ರಂದು ಬೆಳಿಗ್ಗೆ ೬ ಗಂಟೆಯಿAದ ಇರುಬೆಳಕು, ದೇವರ ನೃತ್ಯ, ಅಭಿಷೇಕ ಸೇವೆಯೊಂದಿಗೆ ಮಹಾಪೂಜೆ ನೆರವೇರಲಿದೆ.

ಮಧ್ಯಾಹ್ನ ೨ ಗಂಟೆಗೆ ದೊಡ್ಡ ಹಬ್ಬ ನಡೆಯಲಿದ್ದು, ಎತ್ತು ಪೋರಾಟ, ಕಾಯಿಗೆ ಗುಂಡು ಹೊಡೆಯುವುದು, ದೇವರ ನೃತ್ಯ ಬಲಿ, ಭಂಡಾರ ಸಮರ್ಪಣೆ ನಡೆಯಲಿದೆ. ಸಂಜೆ ೭ ಗಂಟೆಗೆ ಶ್ರೀ ವಿಷ್ಣುಮೂರ್ತಿ ಹಾಗೂ ಕುಟ್ಟಿಚಾತನ್ ಕೋಲ ನಂತರ ಅನ್ನಸಂತರ್ಪಣೆ ಇದೆ. ತಾ. ೧೭ ರಂದು ಬೆಳಿಗ್ಗೆ ೮ ಗಂಟೆಯಿAದ ವಿವಿಧ ಪೂಜಾದಿ ಸೇವೆಗಳೊಂದಿಗೆ ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ ನೆರವೇರಲಿದೆ. ಸಂಜೆ ೫ ಗಂಟೆಗೆ ದೇವರ ಜಳಕ; ೭ ಗಂಟೆಗೆ ದೇವರ ನೃತ್ಯ ಬಲಿ, ಭಂಡಾರ ಸಮರ್ಪಣೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.