ಗೋಣಿಕೊಪ್ಪ ವರದಿ, ಮಾ. ೧೨: ಉತ್ತರಾಖಂಡದ ಮುಸ್ಸೂರಿ ಲಾಲ್ ಬಹೂದ್ದೂರ್ ಶಾಸ್ತಿç ನ್ಯಾಷನಲ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ೨೦೨೨ ನೇ ಬ್ಯಾಚ್ ಐಎಎಸ್ ಶಿಬಿರಾರ್ಥಿಗಳಿಗೆ ನಲ್ಲೂರು ಗ್ರಾಮದ ಪ್ರಗತಿಪರ ಕೃಷಿಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೋಮೇಂಗಡ ಗಣೇಶ್ ತಿಮ್ಮಯ್ಯ ಸಮಗ್ರ ಕೃಷಿ ಬಗ್ಗೆ ತರಬೇತಿ ನೀಡಿದರು.
ಕೃಷಿ ಉಳಿಯಲು ಹೈನುಗಾರಿಕೆ ಮತ್ತು ಜೇನು ಕೃಷಿ ಮುಖ್ಯ. ಕಾಫಿ ಬೆಳೆ ಮತ್ತು ಏಲಕ್ಕಿ ಬೆಳೆಗಳಲ್ಲಿ ಹೂ, ಫಸಲು ಪಡೆಯಲು ಜೇನು ನೊಣಗಳ ಪರಾಗಸ್ಪರ್ಶ ಮುಖ್ಯ. ಜೇನು ಸಾಕಣೆಗೆ ಒತ್ತು ನೀಡಬೇಕಿದೆ. ಮಣ್ಣಿನ ರಕ್ಷಣೆ, ಅರಣ್ಯ ಕೃಷಿ, ಬಿದಿರು, ತರಕಾರಿ, ಹಣ್ಣು, ಕಾಡುಮರಗಳ ಸಂರಕ್ಷಣೆಗೆ ಒತ್ತು ನೀಡಲು ಸಲಹೆ ನೀಡಿದರು. ಮಣ್ಣಿನ ರಕ್ಷಣೆಗೆ ಆಮ್ಲೀಯತೆಯಿಂದ ಕಾಪಾಡಿಕೊಳ್ಳಲು ನೈಸರ್ಗಿಕ ಕೃಷಿ, ಸಾವಯವ ಕೃಷಿಗೆ ಒತ್ತು ನೀಡಬೇಕು ಎಂಬ ಮಾಹಿತಿ ನೀಡಿದರು.
ಕರ್ನಾಟಕ, ಕೇರಳ, ತಮಿಳು ನಾಡು, ಆಂಧ್ರಪ್ರದೇಶ, ಮಹಾರಾಷ್ಟç ರಾಜ್ಯಗಳ ಸುಮಾರು ೪೦೦ ಶಿಬಿರಾರ್ಥಿ ಗಳು ಇದ್ದರು. ಇವರೊಂದಿಗೆ ಗಣೇಶ್ ತಿಮ್ಮಯ್ಯ ಅವರ ಪುತ್ರಿ ನಿಖಿತಾ ತಿಮ್ಮಯ್ಯ ಪಾಲ್ಗೊಂಡರು. ಶಿಬಿರದ ಉಪ ನಿರ್ದೇಶಕ ಅಭಿರಾಮ್ ಜಿ ಶಂಕರ್ ಇದ್ದರು.