ಕೊಡ್ಲಿಪೇಟೆ, ಮಾ. ೧೨: ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಕಾವೇರಿ ನೀರಾವರಿ ನಿಗಮದ ಮೂಲಕ ಪ್ರಸಕ್ತ ಸಾಲಿನಲ್ಲಿ (೨೦೨೨-೨೦೨೩) ಗೊರೂರು ಹೇಮಾವತಿ ಪುನರ್ವಸತಿ ಉಪ ವಿಭಾಗದ ಉಸ್ತುವಾರಿಯಲ್ಲಿ ರೂ.೭.೮೦ ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳು ನಡೆದಿದ್ದು, ಬಹುತೇಕ ರಸ್ತೆ ಕೆಲಸ ಪೂರ್ಣಗೊಂಡಿದೆ.
ರೂ. ೭.೮೦ ಕೋಟಿ ವೆಚ್ಚದ ಬೃಹತ್ ಯೋಜನೆಯಡಿ ರೂ. ೭.೨೦ ಕೋಟಿ ವೆಚ್ಚದ ಕಾಮಗಾರಿಗಳು ಈಗಾಗಲೇ ಮುಕ್ತಾಯಗೊಂಡಿದ್ದು, ರೂ. ೬೦ ಲಕ್ಷದ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ವಾರದೊಳಗೆ ಬಹುತೇಕ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಅಭಿಯಂತರರು ತಿಳಿಸಿದ್ದಾರೆ.
ಹಲವು ದಶಕಗಳ ಬೇಡಿಕೆಯಾಗಿದ್ದ ಬೆಸೂರು ಗ್ರಾ.ಪಂ. ವ್ಯಾಪ್ತಿಯ ಕಟ್ಟೆಪುರ ರಸ್ತೆಯನ್ನೂ ಒಳಗೊಂಡAತೆ ಹೇಮಾವತಿ ನದಿ ಪಾತ್ರದಲ್ಲಿರುವ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕೊಡ್ಲಿಪೇಟೆ, ಬೆಸೂರು, ಬ್ಯಾಡಗೊಟ್ಟ, ಹಂಡ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಕಾಂಕ್ರಿಟ್ ರಸ್ತೆಗಳು ನಿರ್ಮಾಣವಾಗಿವೆ.
ವಿಶೇಷ ಘಟಕ ಯೋಜನೆಯಡಿ ರೂ. ೪ ಕೋಟಿ ಹಾಗೂ ಗಿರಿಜನ ಉಪ ಯೋಜನೆಯ ವಿಶೇಷ ಘಟಕ ಯೋಜನೆಯಡಿ ರೂ. ೩.೮೦ ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆದಿವೆ. ವಿಶೇಷ ಘಟಕ ಯೋಜನೆಯಡಿ ತಲಾ ರೂ. ೫೦ ಲಕ್ಷ ಅನುದಾನದಡಿ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪಿಗೆದಾಳು ರಸ್ತೆ, ಬ್ಯಾಡಗೊಟ್ಟ ಗ್ರಾ.ಪಂ.ನ ಕಣಾರಳ್ಳಿ, ತಳಗೂರು, ನವಗ್ರಾಮ ರಸ್ತೆಗಳು ಅಭಿವೃದ್ಧಿ ಗೊಂಡಿದ್ದರೆ, ತಾಳೂರು ರಸ್ತೆ ರೂ. ೪೦ಲಕ್ಷ ವೆಚ್ಚದಲ್ಲಿ ಕಾಂಕ್ರಿಟಿಕರಣ ಗೊಂಡಿದೆ.
ಇದರೊAದಿಗೆ ಹಂಡ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. ೪೦ ಲಕ್ಷ ವೆಚ್ಚದಡಿ ಕಿತ್ತೂರು ರಸ್ತೆ, ನಾಕಲಗೋಡು ರಸ್ತೆ ಅಭಿವೃದ್ಧಿಯಾಗಿ ದ್ದರೆ, ಕೊಡ್ಲಿಪೇಟೆ ಗ್ರಾ.ಪಂ.ನಲ್ಲಿ ೨೫ ಲಕ್ಷ ವೆಚ್ಚದಲ್ಲಿ ಅರ್ಕನಹಳ್ಳಿ ರಸ್ತೆ, ಶಾಂತಪುರ ರಸ್ತೆ,
(ಮೊದಲ ಪುಟದಿಂದ) ರೂ. ೩೦ ಲಕ್ಷ ವೆಚ್ಚದಡಿ ದೊಡ್ಡಕೊಡ್ಲಿ ರಸ್ತೆಗಳು ಕಾಂಕ್ರಿಟೀಕರಣಗೊAಡಿವೆ.
ಇನ್ನು ಟಿಎಸ್ಪಿ ಯೋಜನೆಯಡಿ ಬೆಸೂರು ಗ್ರಾಮ ಪಂಚಾಯಿತಿಯ ಹಿಪ್ಪುಗಳಲೆ, ಕಟ್ಟೆಪುರ ರಸ್ತೆ, ಕಟ್ಟೆಪುರ-ಕಾಫಿ ಕಣ ರಸ್ತೆಗಳು ರೂ. ೧.೬೦ ಕೋಟಿ ವೆಚ್ಚದಲ್ಲಿ ಉನ್ನತೀಕರಣಗೊಂಡಿವೆ. ಇದರಲ್ಲಿ ರೂ. ೧.೨೦ ಕೋಟಿ ವೆಚ್ಚದಲ್ಲಿ ಹಿಪ್ಪುಗಳಲೆ-ಕಟ್ಟೆಪುರ ರಸ್ತೆ ಅಭಿವೃದ್ಧಿಯಾಗಿದ್ದರೆ, ಕಾಫಿಕಣ ರಸ್ತೆಯನ್ನು ರೂ. ೪೦ ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಳಿಸಲಾಗಿದೆ. ಇದೇ ಯೋಜನೆಯಡಿ ಕೊಡ್ಲಿಪೇಟೆ ಗ್ರಾ.ಪಂ. ವ್ಯಾಪ್ತಿಯ ಹೊಸಳ್ಳಿ ಗ್ರಾಮದ ರಸ್ತೆಯನ್ನು ರೂ. ೪೦ ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
ಕಾವೇರಿ ನೀರಾವರಿ ನಿಗಮದ ಮೂಲಕ ಕೊಡ್ಲಿಪೇಟೆ ಗ್ರಾ.ಪಂ.ನ ಶಿರಗಾವರ ಸೇತುವೆಯ ರಕ್ಷಣಾ ಕಾಮಗಾರಿ ಸೇರಿದಂತೆ ರಸ್ತೆ ಅಭಿವೃದ್ಧಿಗೆ ರೂ. ೧.೮೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪೂರ್ಣಗೊಂಡಿದೆ.
ಕೊಡಗು ಹಾಗೂ ಹಾಸನ ಜಿಲ್ಲೆಯ ಗಡಿ ಗ್ರಾಮವಾಗಿರುವ ಗ್ರಾಮದಲ್ಲಿ ಸೇತುವೆಯಿಂದ ಈ ಬದಿಯಲ್ಲಿ (ಕೊಡಗು) ೯೦೦ ಮೀಟರ್ ರಸ್ತೆ ಡಾಂಬರೀಕರಣ, ಸೇತುವೆಯ ಆಚೆ ಬದಿಯಲ್ಲಿರುವ ಆಲೂರು (ಹಾಸನ) ವ್ಯಾಪ್ತಿಯಲ್ಲಿ ೩೦೦ ಮೀಟರ್ ರಸ್ತೆಯನ್ನು ಡಾಂಬರೀಕರಣಗೊಳಿಸಲಾಗಿದೆ. ಇದರೊಂದಿಗೆ ಸೇತುವೆಯ ರಕ್ಷಣಾ ಕಾಮಗಾರಿಗಳು ಪೂರ್ಣಗೊಂಡಿವೆ.
ಕಾಡಾನೆಗಳ ಹಾವಳಿ ನಿರಂತರವಾಗಿರುವ ಕಟ್ಟೆಪುರ ವ್ಯಾಪ್ತಿಯ ರಸ್ತೆಯಂತೂ ಇನ್ನಿಲ್ಲದಷ್ಟು ಹದಗೆಟ್ಟಿದ್ದು, ಸಂಚಾರಕ್ಕೆ ಅಯೋಗ್ಯವಾಗಿತ್ತು. ಈ ರಸ್ತೆಯನ್ನು ಉನ್ನತೀಕರಣಗೊಳಿಸುವಂತೆ ಗ್ರಾಮಸ್ಥರು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೇರಿದಂತೆ ಸಂಬAಧಿಸಿದ ಇಲಾಖೆಗಳಿಗೆ ಮನವಿ ಮಾಡುತ್ತಲೇ ಬಂದಿದ್ದರು.
ಕೊನೆಗೂ ಗ್ರಾಮಸ್ಥರ ಸಮಸ್ಯೆಗೆ ಮುಕ್ತಿ ದೊರಕಿದ್ದು, ಕಳೆದ ಕೆಲ ತಿಂಗಳ ಹಿಂದಷ್ಟೇ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಈ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಕ್ಷಿಪ್ರಗತಿಯಲ್ಲಿ ಕಾಮಗಾರಿ ಆರಂಭಗೊAಡಿದ್ದು, ಇದೀಗ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಕಾವೇರಿ ನೀರಾವರಿ ನಿಗಮದ ಅಭಿಯಂತರರು ಕಾಮಗಾರಿಗಳ ಉಸ್ತುವಾರಿ ವಹಿಸಿದ್ದು, ಈ ಭಾಗದ ಸಾರ್ವಜನಿಕರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.
ಒಟ್ಟಾರೆ ಕೊಡಗು ಮತ್ತು ಹಾಸನ ಜಿಲ್ಲೆಯ ಗಡಿಯನ್ನು ಹಂಚಿಕೊAಡಿರುವ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಕಾವೇರಿ ನೀರಾವರಿ ನಿಗಮದಿಂದ ರೂ. ೭.೮೦ ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಗಳು ನಿರ್ಮಾಣಗೊಂಡಿದ್ದು, ಈ ಭಾಗದ ಮಂದಿಗೆ ಅನುಕೂಲವಾದಂತಾಗಿದೆ. ಇದರೊಂದಿಗೆ ಜಿಲ್ಲಾ ಪಂಚಾಯತ್ ಇಂಜಿನಿಯರಿAಗ್ ವಿಭಾಗ, ಸಣ್ಣ ನೀರಾವರಿ ಇಲಾಖೆಯಿಂದಲೂ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದ್ದು, ತಕ್ಷಣ ಪೂರ್ಣಗೊಳಿಸಲು ಕ್ರಮ ವಹಿಸಬೇಕೆಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.
-ವಿಜಯ್ ಹಾನಗಲ್