ಧಾರವಾಡದಲ್ಲಿ ಐಐಟಿ ಕ್ಯಾಂಪಸ್-ರೈಲು ನಿಲ್ದಾಣ ಉದ್ಘಾಟನೆ

ಧಾರವಾಡ, ಮಾ. ೧೨: ಪ್ರಧಾನಿ ನರೇಂದ್ರ ಮೋದಿ ಧಾರವಾಡದಲ್ಲಿಂದು ನೂತನ ಐಐಟಿ ಕ್ಯಾಂಪಸ್ ಮತ್ತು ವಿಶ್ವದಲ್ಲಿಯೇ ಅತಿ ದೊಡ್ಡದಾದ ರೈಲು ನಿಲ್ದಾಣವನ್ನು ಉದ್ಘಾಟಿಸಿದರು. ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರರು ಉಪಸ್ಥಿತರಿದ್ದರು. ನಂತರ ಮಾತನಾಡಿದ ಪ್ರಧಾನಿ ಮೋದಿ, ೯ ವರ್ಷದ ಅವಧಿಯಲ್ಲಿ ದೇಶದ ಹಲವೆಡೆ ಐಐಟಿ, ಐಐಎಂ ಸ್ಥಾಪಿಸಲಾಗಿದೆ. ೨೦೧೯ರ ಫೆಬ್ರವರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದ್ದ ಐಐಟಿಯನ್ನು ಕೊರೊನಾ ಸಂಕಷ್ಟ ಕಳೆದ ೪ ವರ್ಷಗಳ ನಂತರ ಉದ್ಘಾಟಿಸಲಾಗಿದೆ. ನೂತನ ಐಟಿಟಿ ಕ್ಯಾಂಪಸ್‌ನಲ್ಲಿ ಉತ್ತಮ ಶಿಕ್ಷಣದ ಸೌಲಭ್ಯ ಇರಲಿದೆ. ಇದು ಉತ್ತಮ ಭವಿಷ್ಯಕ್ಕಾಗಿ ಯುವ ಮನಸ್ಸುಗಳನ್ನು ಪೋಷಿಸುತ್ತದೆ. ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯೂ ಗುಣಮಟ್ಟದ ಶಿಕ್ಷಣ ಪಡೆಯಲು ಅವಕಾಶವನ್ನು ಪಡೆಯಬೇಕು ಎಂದ ಅವರು, ವಿಶ್ವಕ್ಕೆ ಭಾರತದ ಡಿಜಿಟಲ್ ತಾಕತ್ತು ಪ್ರದರ್ಶನವಾಗಿದೆ ಎಂದರು. ಉತ್ತಮ, ಆಧುನಿಕ ಮೂಲಸೌಕರ್ಯ ಮತ್ತು ಆಧುನಿಕ ಮೂಲ ಸೌಕರ್ಯಗಳು ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ನಮ್ಮ ಸಮಾಜದ ಪ್ರತಿಯೊಂದು ವರ್ಗಕ್ಕೂ ಅನುಕೂಲ ಮಾಡಿಕೊಡುತ್ತದೆ. ಜನರಿಗೆ ಉತ್ತಮ ರಸ್ತೆ, ಆರೋಗ್ಯ ನೀಡಲು ಆದ್ಯತೆ ನೀಡಲಾಗಿದೆ. ಹಳ್ಳಿಗಳಲ್ಲಿ ಪಿಎಂ ಸಡಕ್ ಯೋಜನೆ ಮೂಲಕ ರಸ್ತೆಗಳ ಅಭಿವೃದ್ಧಿಯಾಗಿದೆ. ಮೂಲಸೌಕರ್ಯ ಕ್ಷೇತ್ರಕ್ಕೆ ಆಧುನಿಕತೆಯ ಸ್ಪರ್ಶ ನೀಡಲಾಗಿದೆ. ಕನೆಕ್ಟಿವಿಟಿ ವಿಚಾರದಲ್ಲಿ ಕರ್ನಾಟಕ ಮೈಲಿಗಲ್ಲು ಸ್ಥಾಪಿಸಿದೆ. ಸಿದ್ದಾರೂಢ ಸ್ವಾಮೀಜಿ ರೈಲು ನಿಲ್ದಾಣ ಪ್ರಪಂಚದ ಅತಿ ದೊಡ್ಡ ನಿಲ್ದಾಣವಾಗಿದೆ. ಇವೆಲ್ಲವೂ ಅಭಿವೃದ್ಧಿ ವಿಚಾರದಲ್ಲಿ ಹೊಸ ದಾಖಲೆಗಳಾಗಿವೆ. ಕರ್ನಾಟಕ ಹೈಟೆಕ್ ಇಂಡಿಯಾದ ಎಂಜಿನ್ ಎಂದು ಕೊಂಡಾಡಿದರು.

ಸರ್ಕಾರಿ ಗೌರವಗಳೊಂದಿಗೆ ಧ್ರುವ ನಾರಾಯಣ ಅಂತ್ಯಕ್ರಿಯೆ

ಚಾಮರಾಜನಗರ, ಮಾ. ೧೨: ಹೃದಯಾಘಾತದಿಂದ ನಿನ್ನೆ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಅವರ ಹುಟ್ಟೂರು ಹೆಗ್ಗವಾಡಿಯಲ್ಲಿ ಇಂದು ಮಧ್ಯಾಹ್ನ ನಡೆಯಿತು. ಹಿಂದೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಇದಕ್ಕೂ ಮುನ್ನ ಅಗಲಿದ ನಾಯಕನಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ರಾಷ್ಟçಗೀತೆ ಮೊಳಗಿಸಿ, ಒಂದು ನಿಮಿಷ ಮೌನಾಚರಣೆ ಮಾಡಿ ಗೌರವ ಸಲ್ಲಿಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಮನೂರು ಶಿವಶಂಕರಪ್ಪ ಮತ್ತಿತರ ಮುಖಂಡರು ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು. ಚಾಮರಾಜನಗರದ ಹೆಗ್ಗವಾಡಿಯಲ್ಲಿ ನಡೆದ ಕಾಂಗ್ರೆಸ್ ಹಿರಿಯ ಮುಖಂಡರಾದ ಧ್ರುವನಾರಾಯಣ್ ಅವರ ಪಾರ್ಥಿವ ಶರೀರದ ಅಂತ್ಯಸAಸ್ಕಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಾಲ್ಗೊಂಡು ಅಂತಿಮ ಗೌರವ ಅರ್ಪಿಸಿದರು. ಶನಿವಾರ ಮುಂಜಾನೆ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಮೈಸೂರಿನ ಒಂಟಿಕೊಪ್ಪಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೂ ಅವರು ಬದುಕುಳಿದಿಲ್ಲ. ಧ್ರುವನಾರಾಯಣ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಎದೆನೋವಿನಿಂದ ಶಾಸಕ ಮಹೇಶ್ ಆಸ್ಪತ್ರೆಗೆ ದಾಖಲು

ಮೈಸೂರು, ಮಾ. ೧೨: ಮಾಜಿ ಸಚಿವ, ಕೊಳ್ಳೇಗಾಲದ ಕ್ಷೇತ್ರದ ಶಾಸಕ ಎನ್. ಮಹೇಶ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಮಹೇಶ್ ಅವರಿಗೆ ಆ್ಯಂಜಿಯೋಗ್ರಾಮ್ ಮಾಡಲಾಗಿದೆ. ಮಹೇಶ್ ಆರೋಗ್ಯದಲ್ಲಿ ಚೇತರಿಕೆ ಕಂಡುಬAದಿದ್ದು, ಸದ್ಯಕ್ಕೆ ಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ. ಮಹೇಶ್ ಪುತ್ರರು ಈ ಬಗ್ಗೆ ಮಾಹಿತಿ ನೀಡಿದ್ದು, ನಮ್ಮ ತಂದೆ ಆರೋಗ್ಯವಾಗಿದ್ದಾರೆ. ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದೆವು. ವೈದ್ಯರು ಆ್ಯಂಜಿಯೋಗ್ರಾಮ್ ಮಾಡಿದ್ದು, ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ಮೋದಿ ವಿಶ್ವನಾಯಕ-ಬಸವರಾಜ ಬೊಮ್ಮಾಯಿ

ಮಂಡ್ಯ, ಮಾ. ೧೨: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನರೇಂದ್ರ ಮೋದಿ ನಾಯಕತ್ವ ಕೊಂಡಾಡಿದ್ದಾರೆ. ಪಾಕಿಸ್ತಾನ, ಚೀನಾ ನಾಗರಿಕರಿಗೂ ನರೇಂದ್ರ ಮೋದಿ ಮೆಚ್ಚುಗೆಯಾಗಿದ್ದಾರೆ. ಮೋದಿ ರೀತಿ ನಾಯಕ ಬೇಕು ಅಂತಿದ್ದಾರೆ ಪಾಕಿಸ್ತಾನದ ಜನ. ಮೋದಿ ವಿಶ್ವ ನಾಯಕ ಅಂತಾ ಹೊಗಳುತ್ತಾರೆ ಚೀನಾದವರು. ಅಮೆರಿಕ ಪ್ರಜೆಗಳಿಂದಲೂ ನರೇಂದ್ರ ಮೋದಿಗೆ ಬಹುಪರಾಕ್ ಹೇಳಲಾಗಿದೆ ಎಂದು ಮಂಡ್ಯ ಸಮಾವೇಶದಲ್ಲಿ ಕೊಂಡಾಡಿದರು. ಪ್ರಧಾನಮಂತ್ರಿಯವರು ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್‌ವೇಯನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ಈ ಯೋಜನೆಯು ರಾಷ್ಟಿçÃಯ ಹೆದ್ದಾರಿ ೨೭೫ ರ ಬೆಂಗಳೂರು-ನಿಡಘಟ್ಟ-ಮೈಸೂರು ವಿಭಾಗವನ್ನು ೬ ಪಥದಲ್ಲಿ ಅಭಿವೃದ್ಧಿಪಡಿಸುವುದನ್ನು ಒಳಗೊಂಡಿದೆ. ೧೧೮ ಕಿ.ಮೀ. ಉದ್ದವನ್ನು ಹೊಂದಿದೆ. ಈ ಯೋಜನೆಯನ್ನು ಸುಮಾರು ೮೪೮೦ ಕೋಟಿ ರೂಪಾಯಿಗಳ ಒಟ್ಟು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದರು.

ಬಾಲಕನ ಟೀ ಶರ್ಟ್ ತೆಗೆಸಿದ ಭದ್ರತಾ ಸಿಬ್ಬಂದಿಗಳು

ಮAಡ್ಯ, ಮಾ. ೧೨: ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗಾಗಿ ನಿಯೋಜನೆಗೊಂಡ ಪೊಲೀಸರು ಮತ್ತು ಸಿಬ್ಬಂದಿ ಭಾನುವಾರ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಬಾಲಕನೊಬ್ಬನ ಕಪ್ಪು ಬಣ್ಣದ ಟೀ ಶರ್ಟ್ ಅನ್ನು ತೆಗೆಸಿರುವ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು-ಮೈಸೂರು ಎಕ್ಸಪ್ರೆಸ್‌ವೇಯನ್ನು ಉದ್ಘಾಟಿಸಲು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಗೆ ಆಗಮಿಸಿದ್ದಾರೆ. ಹೀಗಾಗಿ ಕಾರ್ಯಕ್ರಮ ನಡೆಸುವ ವೇದಿಕೆ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಜನರನ್ನು ಪರಿಶೀಲಿಸಲಾಗುತಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಬಾಲಕ ಕಪ್ಪು ಟೀ ಶರ್ಟ್ ಧರಿಸಿ ತನ್ನ ತಾಯಿಯೊಂದಿಗೆ ಬಂದಿದ್ದಾನೆ. ಈ ವೇಳೆ ಪೊಲೀಸರು ಆತನನ್ನು ತಡೆದು, ಟೀ ಶರ್ಟ್ ಕಪ್ಪಾಗಿರುವುದರಿಂದ ಅದನ್ನು ತೆಗೆಯುವಂತೆ ಆತನ ತಾಯಿಗೆ ಕೇಳಿದ್ದಾರೆ. ತಾಯಿ ಅದನ್ನು ತೆಗೆದು ತನ್ನ ಮಗನನ್ನು ಟಾಪ್‌ಲೆಸ್ ಆಗಿ ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದ ಆವರಣದೊಳಗೆ ಕರೆದೊಯ್ದಿದ್ದಾರೆ. ಮೆಟಲ್ ಡಿಟೆಕ್ಟರ್‌ಗಳ ಮೂಲಕ ಹಾದುಹೋದ ನಂತರ ತಾಯಿ ಮತ್ತೆ ತನ್ನ ಮಗನಿಗೆ ಟೀ ಶರ್ಟ್ ಹಾಕಿದ್ದಾರೆ. ಆದರೆ, ಪೊಲೀಸ್ ಸಿಬ್ಬಂದಿ ಮತ್ತೆ ಆಕೆಯ ಬಳಿಗೆ ಧಾವಿಸಿ, ಪ್ರೋಟೋಕಾಲ್‌ನಿಂದ ಕಪ್ಪು ಟಿ-ಶರ್ಟ್ನೊಂದಿಗೆ ಹುಡುಗನನ್ನು ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ತಾಯಿ ಮತ್ತೆ ಮಗನ ಕಪ್ಪು ಟೀ ಶರ್ಟ್ ತೆಗೆದು ಟಾಪ್‌ಲೆಸ್ ಆಗಿ ಒಳಗೆ ಕರೆದುಕೊಂಡು ಹೋಗಿದ್ದಾರೆ.

ಪಂಜಾಬ್‌ನಲ್ಲಿ ಗನ್ ಸಂಸ್ಕೃತಿ ನಿಗ್ರಹ ಕಾರ್ಯಾಚರಣೆ

ನವದೆಹಲಿ, ಮಾ. ೧೨: ಪಂಜಾಬ್ ಸರ್ಕಾರ ಗನ್ ಸಂಸ್ಕೃತಿ ನಿಗ್ರಹ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ೮೧೩ ಮಂದಿಯ ಶಸ್ತಾçಸ್ತç ಪರವಾನಗಿಯನ್ನು ರದ್ದುಗೊಳಿಸಿದೆ. ಲೂಧಿಯಾನ ಗ್ರಾಮೀಣ ಪ್ರದೇಶದ ೮೭ ಮಂದಿಯ ಪರವಾನಗಿ ರದ್ದುಗೊಂಡಿದ್ದರೆ, ಶಹೀದ್ ಭಗತ್ ಸಿಂಗ್ ನಗರದ ೪೮ ಮಂದಿ ಪರವಾನಗಿ ಕಳೆದುಕೊಂಡಿದ್ದಾರೆ. ಗುರ್ದಾಸ್‌ಪುರದಲ್ಲಿ ೧೦ ಮಂದಿಯ ಪರವಾನಗಿ ರದ್ದುಗೊಳಿಸಲಾಗಿದೆ. ಫರೀದ್ಕೋಟ್‌ನಲ್ಲಿ ೮೪, ಪಠಾಣ್ ಕೋಟ್‌ನಲ್ಲಿ ೧೯೯, ಹೋಶಿಯಾಪುರ್‌ನಲ್ಲಿ ೪೭, ಕಪುರ್ಥಲ ೬, ಎಸ್‌ಎಎಸ್ ಕಸ್ಬಾದಲ್ಲಿ ೨೩೫ ಮಂದಿ, ಸಂಗ್ರೂರ್‌ನಲ್ಲಿ ೧೬ ಮಂದಿ ಪರವಾನಗಿ ಕಳೆದುಕೊಂಡಿದ್ದಾರೆ. ಅಮೃತ್‌ಸರ ಕಮಿಷರೇಟ್‌ನಲ್ಲಿ ೨೭ ಮಂದಿ, ಜಲಂಧರ್ ಕಮಿಷರನೇಟ್‌ನಲ್ಲಿ ೧೧ ಮಂದಿ ಹಾಗೂ ಇನ್ನೂ ಹಲವು ಜಿಲ್ಲೆಗಳಲ್ಲಿ ಪರವಾನಗಿಯೂ ರದ್ದಾಗಿದೆ. ಈವರೆಗೂ ಪಂಜಾಬ್ ಸರ್ಕಾರ ೨,೦೦೦ ಮಂದಿಯ ಪರವಾನಗಿಯನ್ನು ರದ್ದುಗೊಳಿಸಿದೆ. ಗನ್‌ಗಳನ್ನು ಇಟ್ಟುಕೊಳ್ಳುವುದಕ್ಕೆ ನಿರ್ದಿಷ್ಟವಾದ ನಿಯಮಗಳಿವೆ ಹಾಗೂ ಈಗ ಸಾರ್ವಜನಿಕ ಸಮಾರಂಭಗಳಲ್ಲಿ, ಧಾರ್ಮಿಕ ಸ್ಥಳಗಳು, ವಿವಾಹ ಸಮಾರಂಭಗಳಲ್ಲಿ ಗನ್‌ಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಪಂಜಾಬ್ ಸರ್ಕಾರ ಹೇಳಿದೆ.