ಮಡಿಕೇರಿ, ಮಾ. ೧೧: ಕುಂಜಲಗೇರಿ ಗ್ರಾಮದ ಶ್ರೀ ಭದ್ರಕಾಳಿ ಹಾಗೂ ಅಯ್ಯಪ್ಪ ದೇವರ ಹಬ್ಬ ತಾ. ೧೪ ರಂದು ನಡೆಯಲಿದೆ. ಅಂದು ಬೆಳಗ್ಗಿನ ಜಾವ ಭಂಡಾರ ಪೆಟ್ಟಿಗೆ ಮತ್ತು ಕುಯ್ಯಗಳು ದೇವರ ಬನಕ್ಕೆ ಬಂದು ನೈವೇದ್ಯ ಒಪ್ಪಿಸಲಾಗುವುದು. ಮಧ್ಯಾಹ್ನ ೧೨.೩೦ ಗಂಟೆಗೆ ತೆಂಗಿನ ಕಾಯಿ ಎತ್ತು ಪೋರಾಟ ಸಮೇತ ಊರಿನವರು, ಭಕ್ತರು ಬನದಲ್ಲಿ ಸೇರಿ ಭಂಡಾರ-ಹರಕೆ ಕಾಣಿಕೆ ಸಮರ್ಪಿಸುವ ಕಾರ್ಯದ ನಂತರ ಸಾವಿರಾರು ಸಂಖ್ಯೆಯಲ್ಲಿ ತೆಂಗಿನ ಕಾಯಿ ಒಡೆಯುವ ಮೂಲಕ ಪೂರ್ಣ ನೈವೇದ್ಯ ಸಮರ್ಪಣೆಯಾಗುವುದಾಗಿ ದೇವರ ಭಂಡಾರ ತಕ್ಕರಾದ ಕುಡುವಂಡ ಬಿ. ಉತ್ತಪ್ಪ ತಿಳಿಸಿದ್ದಾರೆ.