ಚಿತ್ರ ವರದಿ:ಹೆಚ್.ಕೆ.ಜಗದೀಶ್
ಗೋಣಿಕೊಪ್ಪಲು, ಮಾ. ೧೦: ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯು ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಯು ಕೊಡಗಿಗೆ ಆಗಮಿಸಿವೆ. ಮೈಸೂರು ಭಾಗದಿಂದ ಆಗಮಿಸಿದ ಸಂಕಲ್ಪ ಯಾತ್ರೆಯು ಕೊಡಗಿನ ಗಡಿ ಭಾಗವಾದ ಆನೆಚೌಕೂರುವಿನಿಂದ ಪ್ರವೇಶಿಸಿ ತಿತಿಮತಿ ಬಾಳುಮನೆ ಸಮೀಪವಿರುವ ಗಣಪತಿ ದೇವಾಲಯದ ಮುಂದೆ ಬಂದಾಗ ವೀರಾಜಪೇಟೆ ಮಂಡಲದ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಅಧ್ಯಕ್ಷತೆಯಲ್ಲಿ ಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕೊಡಗಿನ ಸಾಂಪ್ರದಾಯಿಕ ವಾಲಗದೊಂದಿಗೆ ಬರಮಾಡಿ ಕೊಳ್ಳಲಾಯಿತು. ಯಾತ್ರೆಗೆ ಪಕ್ಷದ ಹಿರಿಯರು ಪುಷ್ಪಾರ್ಚನೆ ಮಾಡಿದರು. ವಿಜಯ ಸಂಕಲ್ಪ ಯಾತ್ರೆಯ ಮುಂಭಾಗದಲ್ಲಿ ಚಂಡೆವಾದ್ಯ, ಕೊಡಗಿನ ವಾಲಗ ಸಾಗಿದವು. ಈ ವೇಳೆ ಬಿಜೆಪಿಯ ನೂರಾರು ಯುವಕರು ತಿತಿಮತಿಯಿಂದ ಗೋಣಿಕೊಪ್ಪಲುವಿನವರೆಗೆ ಬೈಕ್ ಜಾಥಾ ನಡೆಸಿದರು.
ವಿಜಯ ಸಂಕಲ್ಪ ಯಾತ್ರೆಯು ಗೋಣಿಕೊಪ್ಪ ನಗರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ವಾಣಿಜ್ಯ ನಗರವು ಫ್ಲೆಕ್ಸ್, ಬಂಟಿAಗ್ಸ್, ಪೋಸ್ಟರ್ ಹಾಗೂ ಬಾವುಟಗಳಿಂದ ಕಂಗೊಳಿಸುತ್ತಿತ್ತು. ನಗರದ ಮುಖ್ಯ ರಸ್ತೆಯ ಎರಡು ಭಾಗದಲ್ಲಿಯೂ ಬಂಟಿAಗ್ಸ್ ಹಾಗೂ ವಿವಿಧ ರಾಜಕೀಯ ನಾಯಕರ ಫ್ಲೆಕ್ಸ್ಗಳು ಕಂಡುಬAದವು. ಬಸ್ ನಿಲ್ದಾಣದ ಸುತ್ತಮುತ್ತಲಿನಲ್ಲಿ ಬಿಜೆಪಿಯ ರಾಷ್ಟç ಹಾಗೂ ರಾಜ್ಯ ನಾಯಕರ ಪೋಸ್ಟರ್ಗಳು ಗಮನ ಸೆಳೆಯುತ್ತಿತ್ತು.
ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿಯ ಬೃಹತ್ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿಟ್ಟಿನಲ್ಲಿ ಪೊಲೀಸರು ಮುಂಜಾಗೃತಾ ಕ್ರಮವಾಗಿ ಆಯಾಕಟ್ಟಿನ ಪ್ರದೇಶದಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದರು. ನಗರದಲ್ಲಿದ್ದ ನಿಲುಗಡೆಯಾಗಿದ್ದ ವಾಹನಗಳನ್ನು ತೆರವುಗೊಳಿಸಿದ್ದರು. ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದರು. ಗೋಣಿಕೊಪ್ಪ ವೃತ್ತ ನಿರೀಕ್ಷಕ ವಸಂತ್ ಕುಮಾರ್ ಹಾಗೂ ಸಬ್ಇನ್ಸ್ಪೆಕ್ಟರ್ ಸಿದ್ದರಾಜು ಮುಂಜಾಗೃತ ಕ್ರಮವಾಗಿ ಆಯಾಕಟ್ಟಿನ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಿದ್ದರು.