ಕೂಡಿಗೆ, ಮಾ. ೧೧: ಹಾರಂಗಿ ಹುದುಗೂರು ರಸ್ತೆಯಲ್ಲಿ ಟಿಪ್ಪರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಹುದುಗೂರು ಹಾರಂಗಿ ಮಾರ್ಗವಾಗಿ ಯಡವನಾಡು-ಸೋಮವಾರಪೇಟೆ ಕಡೆಗೆ ತೆರಳುವ ರಸ್ತೆಯಲ್ಲಿ ನಡೆದಿದೆ. ಯಡವನಾಡು ಗ್ರಾಮದ ಪ್ರವೀಣ್ (ದೊರೆಮಣಿ-೪೬) ಮೃತ ದುರ್ಧೈವಿ.

ಟಿಪ್ಪರ್ (ಕೆಎ ೧೯ ಡಿ ೫೭೧೪) ಯಡವನಾಡು ಕಡೆಯಿಂದ ಹಾರಂಗಿ ಕಡೆಗೆ ಬರುವಾಗ ಹಾರಂಗಿಯಿAದ ಯಡವನಾಡು ಕಡೆಗೆ ಹೋಗುತ್ತಿದ್ದ ಬೈಕ್‌ಗೆ (ಕೆಎ ೦೨ ಹೆಚ್‌ಯು ೫೯೧೨) ಡಿಕ್ಕಿಯಾಗಿದೆ. ಪರಿಣಾಮ ಪ್ರವೀಣ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಟಿಪ್ಪರ್ ಚಾಲಕ ಪರಾರಿಯಾಗಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.