ಮಡಿಕೇರಿ, ಮಾ. ೧೦: ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆ ಯನ್ನು ಸಂಘದ ಅಧ್ಯಕ್ಷೆ ಸವಿತಾ ಭಟ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಸರಳಾ ಕರುಂಬಯ್ಯ ಪ್ರಾರ್ಥಿಸಿ ದರು. ಸಂಘದ ಅಧ್ಯಕ್ಷೆ ಸವಿತಾ ಭಟ್ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿದ್ದ ರಾಣಿ ಮಾಚಯ್ಯ, ಅಶ್ರ್ರಫುನ್ನೀಸಾ ಮತ್ತು ಇತರ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು.
ಪದ್ಮಶ್ರೀ ವಿಜೇತೆ ರಾಣಿ ಮಾಚಯ್ಯ ಮತ್ತು ಹಲವಾರು ಸಾಧನೆ ಗಳನ್ನು ಮಾಡಿದ ಅಶ್ರಫುನ್ನೀಸಾ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯೆಯರಿಗಾಗಿ ಅಡುಗೆ ಸ್ಪರ್ಧೆ, ಹೂ ಜೋಡಣೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ತೀರ್ಪುಗಾರರಾಗಿ ಶ್ವೇತಾ ಕಾರಿಯಪ್ಪ ಮತ್ತು ಸೌಮ್ಯ ಉದಯ್ ಆಗಮಿಸಿದ್ದರು. ಹಾಡಿನ ಸ್ಪರ್ಧೆಯೂ ಏರ್ಪಾಡಾಗಿತ್ತು. ಅದಕ್ಕೆ ತೀರ್ಪುಗಾರರಾಗಿ ಗೀತಾಬಾವೆ ಮತ್ತು ತುಷಾರಾ ಸತ್ಯೇಶ್ ಭಟ್ ಕಾರ್ಯನಿರ್ವಹಿಸಿದರು.
ಮಧ್ಯಾಹ್ನದ ನಂತರ ಸಂಘದ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆದವು. ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸುಶೀಲಾ ವಾಸುದೇವ್ ಮತ್ತು ಪ್ರೇಮಾ ರಾಘವಯ್ಯ ನಿರೂಪಿಸಿದರು. ಆಡಳಿತ ಮಂಡಳಿಯ ಸದಸ್ಯೆಯರಾದ ವಸುಂಧರಾ ಪ್ರಸನ್ನ, ಕಮಲಾ ಸುಬ್ಬಯ್ಯ, ಆಯಿಷಾ ಹಮೀದ್, ಶುಭಾ ವಿಶ್ವನಾಥ್, ರೂಪಾ ಸುಮಂತ್, ಸಂಧ್ಯಾ ಅಶೋಕ್, ಉಮಾ ಈಶ್ವರ್, ಕನ್ನಂಡ ಕವಿತಾ ಕಾವೇರಮ್ಮ ಉಪಸ್ಥಿತರಿದ್ದರು.