ಶ್ರೀಮಂಗಲ, ಮಾ. ೧೦: ಪೊನ್ನಪ್ಪಸಂತೆಯ ಸಾಧನಾ ಲೇಡೀಸ್ ಅಸೋಸಿಯೇಶನ್ ಆಶ್ರಯದಲ್ಲಿ ಬುಧವಾರ ಮಹಿಳಾ ದಿನಾಚಾರಣೆ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಮನಸ್ಸು ಮತ್ತು ಮೆದುಳಿಗೆ ಸಂಬAಧಿಸಿದ ಆಪ್ತ ಸಮಾ ಲೋಚಕಿ ಡಾ. ಕಂಗಾAಡ ಸಿಂಧೂರ ಅಯ್ಯಪ್ಪ ಅವರು ಮಾತನಾಡಿ, ಮಕ್ಕಳೊಂದಿಗೆ ಪೋಷಕರು ಹೇಗೆ ವರ್ತಿಸಬೇಕು ನಮ್ಮ ಮಾನಸಿಕ ಸ್ವಾಸ್ಥತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ನಿಯಂತ್ರಿಸಬೇಕು, ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮತ್ತು ಹಿರಿಯ ನಾಗರಿಕರೊಂದಿಗೆ ಹೇಗೆ ಒಡನಾಟ ಇಟ್ಟುಕೊಳ್ಳಬೇಕು ಎಂಬ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೋಸಿಯೇಷನ್ ಅಧ್ಯಕ್ಷೆ ಕಾಂಡೇರ ರೂಪ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಪುಳ್ಳಂಗಡ ರೀನಾ ದಿನೇಶ್, ಕಾರ್ಯದರ್ಶಿ ಕಾಂಡೇರ ಹೇಮ ರಮೇಶ್, ಸದಸ್ಯೆ ಕೊಳುವಂಡ ಕವಿತಾ ಸುಬ್ರಮಣಿ ಹಾಜರಿದ್ದರು.