ಮಡಿಕೇರಿ, ಮಾ. ೧೦: ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ವತಿಯಿಂದ ಕೊಡವ ಸಮಾಜ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಉಪನ್ಯಾಸಕಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಮೇಪಾಡಂಡ ಸವಿತಾ ಕೀರ್ತನ್, ಪದ್ಮಶ್ರೀ ಪ್ರಶಸ್ತಿ ವಿಜೇತೆ ಐಮುಡಿಯಂಡ ರಾಣಿ ಮಾಚಯ್ಯ ಅವರುಗಳು ಪಾಲ್ಗೊಂಡಿದ್ದರು.
ದಿನದ ಮಹತ್ವದ ಬಗ್ಗೆ ರೇವತಿ ಪೂವಯ್ಯ ಅವರು ಮಾತನಾಡಿದರು. ಈ ಸಂದರ್ಭ ವಿವಿಧ ಕ್ರೀಡೆ, ಮನರಂಜನಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಬೊಪ್ಪಂಡ ಸರಳಾ ಪ್ರಾರ್ಥಿಸಿ, ಸಣ್ಣುವಂಡ ಉಷಾ ಸ್ವಾಗತಿಸಿ, ಚೋಕಿರ ಅನಿತಾ ನಿರೂಪಿಸಿದರು. ಬೊಳ್ಳಜಿರ ಯಮುನಾ ವಂದಿಸಿದರು. ಕಾಳೇಂಗಡ ಸಾವಿತ್ರಿ ಅತಿಥಿ ಪರಿಚಯಿಸಿದರೆ, ಮುಕ್ಕಾಟಿರ ಅಂಜು, ಕೂಪದಿರ ಜೂನಾ, ಮೇವಡ ಲತಾ, ಕನ್ನಂಡ ಸುನಿತಾ, ಪಳಂಗAಡ ರೇಖಾ ಕ್ರೀಡಾಕೂಟ ನಡೆಸಿಕೊಟ್ಟರು.