ಶನಿವಾರಸಂತೆ, ಮಾ. ೧೦: ಅಂಗನವಾಡಿ ಕಾರ್ಯಕರ್ತೆಯರ ಹೋರಾಟದ ಸಂಘಟನೆಯ ಟಿಯುಸಿಸಿ ಸಮಿತಿಯನ್ನು ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯ ವಾರ್ಷಿಕ ಮಹಾಸಭೆಯಲ್ಲಿ ರಚನೆ ಮಾಡಲಾಯಿತು.

ಸಮಿತಿಯ ನೂತನ ಅಧ್ಯಕ್ಷರಾಗಿ ಶನಿವಾರಸಂತೆಯ ಧನು ಮಂಜುನಾಥ್, ಉಪಾಧ್ಯಕ್ಷೆಯಾಗಿ ಜಯಾ, ಕಾರ್ಯದರ್ಶಿಯಾಗಿ ಜೆನಿಫರ್ ತಾರಾ, ಖಜಾಂಚಿಯಾಗಿ ಗೀತಾ ಅವರನ್ನು ಸಂಘಟನೆಯ ಮುಖ್ಯಸ್ಥ ಜೆ.ಆರ್.ಶಿವಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.