ಮಡಿಕೇರಿ, ಮಾ. ೧೦: ಮರಂದೋಡ ಗ್ರಾಮದ ಕರೆತಟ್ಟುವಿನಲ್ಲಿ ತಾ. ೯ರಂದು ಕಾಡ್ಗಿಚ್ಚು ಸಂಭವಿಸಿ ಮಾರ್ಚಂಡ ಗಣೇಶ್ ಪೊನ್ನಪ್ಪ ಹಾಗೂ ಪೂವಪ್ಪ ಅವರ ತೋಟಕ್ಕೆ ಹಾನಿಯಾಗಿದೆ.
ಸುಮಾರು ೫ ಎಕರೆ ಕಾಫಿ ತೋಟವು ಬೆಂಕಿಗಾಹುತಿಯಾಗಿದೆ. ಅಲ್ಲಿನ ಗ್ರಾಮಸ್ಥರು, ಅರಣ್ಯಾಧಿಕಾರಿಗಳು, ಪಂಚಾಯಿತಿ ಸದಸ್ಯರಾದ ಚೋಯಮಾಡಂಡ ಹರೀಶ್ ಮೊಣ್ಣಪ್ಪ, ಲೀಲಾವತಿ ಅವರುಗಳು ಸೇರಿದಂತೆ ಇತರರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.